ಸ್ಮಾರ್ಟ್ ಅಂಡರ್ ಪಾಸ್: ಒಂದು ಭಾಗದ ರಸ್ತೆ ಕಾಮಗಾರಿ ಪೂರ್ಣ
Team Udayavani, May 22, 2020, 5:15 AM IST
ಮಂಗಳೂರು: ನಗರದ ಪುರಭವನ ಮುಂಭಾಗ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಪಾದ ಚಾರಿಗಳ ಅಂಡರ್ ಪಾಸ್ ನಿರ್ಮಾಣದ ಒಂದು ಭಾಗದ ಕಾಮಗಾರಿ ಪೂರ್ಣ ಗೊಂಡು, ಇನ್ನೊಂದು ರಸ್ತೆಯ ಕೆಳಭಾಗದಲ್ಲಿ ಕಾಮಗಾರಿ ಬುಧ ವಾರ ದಿಂದ ಆರಂಭಗೊಂಡಿದೆ.
ಕ್ಲಾಕ್‌ಟವರ್- ಎ.ಬಿ.ಶೆಟ್ಟಿ ಸರ್ಕಲ್ ನಡುವಿನ ಎರಡೂ ರಸ್ತೆಗಳ ಅಡಿಯಲ್ಲಿ ಈ ಅಂಡರ್‌ಪಾಸ್ ಹಾದು ಹೋಗಲಿದ್ದು, ಮೊದಲ ಹಂತದಲ್ಲಿ ಒಂದು ರಸ್ತೆಯ ಅಡಿಭಾಗದಲ್ಲಿ ಕಾಮಗಾರಿ ಪೂರ್ಣಗೊಂಡು, ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗ ರಸ್ತೆಯಲ್ಲಿ ಕಾಮಗಾರಿ ಈಗ ಆರಂಭವಾಗಿದೆ. ಸದ್ಯ ಈ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಇನ್ನೊಂದು ಭಾಗದ ರಸ್ತೆ ಮುಚ್ಚಲಾಗಿದೆ.
ಅಂಡರ್‌ಪಾಸ್ ರಸ್ತೆಯ ಎರಡೂ ಬದಿ ಸಹಿತ ಒಟ್ಟು 35 ಮೀ. ಉದ್ದ, 11.5 ಮೀ. ಅಗಲವಿರುತ್ತದೆ. ಪಾದಚಾರಿಗಳು ಸಾಗಲು ಒಳಭಾಗದಲ್ಲಿ 10 ಮೀ. ಅಗಲದ ಸ್ಥಳ ಲಭ್ಯವಾಗಲಿದೆ.
ಇದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಭಾಗದ ರಸ್ತೆಯಿರುವ ಮಿನಿ ವಿಧಾನಸೌಧ ಮುಂಭಾಗದಿಂದ ಪುರಭವನ ಎಡಭಾಗದ ರಸ್ತೆಯ ಅಂಚಿನಲ್ಲಿರುವ ಹಳೆಯ ತಾಜ್‌ಮಹಲ್ ಹೊಟೇಲ್ ಮುಂಭಾಗದವರೆಗೆ ಇರುತ್ತದೆ. ಇದು ಒಟ್ಟು 6 ಕೋ.ರೂ.ವೆಚ್ಚದ ಕಾಮಗಾರಿ.
ಮಳೆಗಾಲಕ್ಕೆ ಕಿರಿಕಿರಿ
ಅಂಡರ್‌ಪಾಸ್‌ನ ಇನ್ನೊಂದು ಭಾಗದಲ್ಲಿ ಕಾಮಗಾರಿ ಆರಂಭಗೊಂಡಿದ್ದ ರಿಂದಾಗಿ ಮಿನಿ ವಿಧಾನಸೌಧದ ಮುಂ ಭಾಗದಲ್ಲಿ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆಯಿದೆ.
ರಸ್ತೆಗಳ ಅಡಿಯಲ್ಲಿ ಅಂಡರ್‌ಪಾಸ್ ಕಾಮಗಾರಿ ಮುಗಿದ ಬಳಿಕ ಪುರಭವನ ಮುಂಭಾಗದ ಗಾಂಧೀ ಪಾರ್ಕ್‌ನಲ್ಲಿ ಕಾಮಗಾರಿ ಆರಂಭವಾಗಲಿದೆ. ಪಾರ್ಕ್ ಅಭಿವೃದ್ಧಿಗೂ ಉದ್ದೇಶಿಸಲಾಗಿದೆ.
2ನೇ ಹಂತದ ಅಂಡರ್‌ಪಾಸ್ ಕಾಮಗಾರಿ
ಸ್ಮಾರ್ಟ್‌ಸಿಟಿ ಯೋಜನೆಯಡಿ ಪುರಭವನದ ಮುಂಭಾಗದಲ್ಲಿ ಅಂಡರ್‌ಪಾಸ್‌ನ ಒಂದನೇ ಹಂತದ ಕಾಮಗಾರಿ ಪೂರ್ಣ ವಾಗಿ ಇದೀಗ ಮತ್ತೂಂದು ರಸ್ತೆಯಲ್ಲಿ ಕಾಮಗಾರಿ ಆರಂಭವಾಗಿದೆ. ರೈಲು ನಿಲ್ದಾಣ ಹಾಗೂ ಇತರ ಭಾಗಗಳಿಂದ ಆಗಮಿಸಿ ರಸ್ತೆ ದಾಟುವ ಪಾದಚಾರಿಗಳಿಗೆ ಇದು ಅನುಕೂ ಲವಾಗಲಿದೆ.
-ಮಹಮ್ಮದ್ ನಝೀರ್, ವ್ಯವಸ್ಥಾಪಕ ನಿರ್ದೇಶಕರು,
ಸ್ಮಾರ್ಟ್ ಸಿಟಿ ಲಿ. ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.