ಮನುಷ್ಯರ ಬೆರಳಚ್ಚಿನಂತೆ ದನಗಳ ನಾಸಿಕ ಮಾದರಿ: ಪಶು ಆಧಾರ್‌ ಯೋಜನೆಗೆ ಮತ್ತಷ್ಟು ನಿಖರತೆ


Team Udayavani, May 19, 2023, 8:00 AM IST

ಮನುಷ್ಯರ ಬೆರಳಚ್ಚಿನಂತೆ ದನಗಳ ನಾಸಿಕ ಮಾದರಿ: ಪಶು ಆಧಾರ್‌ ಯೋಜನೆಗೆ ಮತ್ತಷ್ಟು ನಿಖರತೆ

ಮಂಗಳೂರು: ದೇಶದಲ್ಲಿ ಜಾರಿಯಲ್ಲಿರುವ ಪಶುಆಧಾರ್‌ ಯೋಜನೆಗೆ ಮತ್ತಷ್ಟು ನಿಖರತೆ ನೀಡುವ ಉದ್ದೇಶದಿಂದ ಜಾನುವಾರುಗಳ ಕಿವಿಗೆ ಟ್ಯಾಗ್‌ ಹಾಕುವ ಬದಲು ಮಝಲ್‌ ಪ್ಯಾಟರ್ನ್
ಸ್ಕ್ಯಾನ್ ಅಥವಾ ಮೂಗಿನ ಮಾದರಿ ವಿನ್ಯಾಸ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.

ಮನುಷ್ಯನ ಬೆರಳಚ್ಚಿನ ರೀತಿಯಲ್ಲೇ ಜಾನುವಾರುಗಳ ಮೂಗಿನ ವಿನ್ಯಾಸವೂ ವಿಶಿಷ್ಟವಾಗಿದ್ದು, ಒಂದರಂತೆ ಇನ್ನೊಂದಿರುವುದಿಲ್ಲ. ಹಾಗಾಗಿ ಅದನ್ನು ಪಶುಆಧಾರ್‌ ಯೋಜನೆಗೆ ಬಳಸಿಕೊಳ್ಳಲಾಗುವುದು.

ಸದ್ಯ ಇದಕ್ಕೆ ಪೂರ್ವ ಸಿದ್ಧತೆ ನಡೆಸುವುದಕ್ಕೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುಂದಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಮೊದಲ ಹಂತದಲ್ಲಿ ರಾಜ್ಯದ 5 ಲಕ್ಷ ಜಾನುವಾರುಗಳಲ್ಲಿ ಅನುಷ್ಠಾನ ಮಾಡಲಾಗುವುದು. ಇದಕ್ಕಾಗಿ ಎಲ್ಲ ಜಿಲ್ಲೆಗಳ ಜಾನುವಾರುಗಳ ಮೂಗಿನ ಮಾದರಿ ಸಂಗ್ರಹಿಸಲಾಗುತ್ತದೆ.

ಇ-ಗವರ್ನೆನ್ಸ್‌ ಹಾಗೂ ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯವರು ಇದಕ್ಕೆ ಬೇಕಾದ ಸಾಫ್ಟ್‌ವೇರ್‌ ಹಾಗೂ ಆ್ಯಪ್‌ಗ್ಳ ಸೇವೆಯನ್ನು ಒದಗಿಸಲಿದ್ದಾರೆ. ಪಶುಸಂಗೋಪನ ಇಲಾಖೆಯವರು ಆಕಳು, ಎತ್ತು, ಎಮ್ಮೆ, ಕೋಣ, ಕರುಗಳು ಸೇರಿದಂತೆ ಜಾನುವಾರುಗಳ ಮೂಗಿನ ವಿನ್ಯಾಸದ ದತ್ತಾಂಶವನ್ನು ಕ್ಷೇತ್ರ ಮಟ್ಟದಲ್ಲಿ ಸಂಗ್ರಹಿಸುತ್ತಾರೆ. ಮೈತ್ರಿ ಕಾರ್ಯಕರ್ತರು, ಪಶುಸಖೀಯರು, ವಿವಿಧ ವೃಂದದ ಪಶುವೈದ್ಯ ಪರೀಕ್ಷಕರು, ಜಾನುವಾರು ಅಧಿಕಾರಿಗಳು, ಜಾನುವಾರು ಅಭಿವೃದ್ಧಿ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಪಶು ಆಧಾರ್‌
2016-17ರಲ್ಲಿ ದೇಶಾದ್ಯಂತ ಜಾನುವಾರುಗಳಿಗೆ ವಿಶಿಷ್ಟ ಗುರುತುಸಂಖ್ಯೆ ನೀಡುವ ಜಾನುವಾರು ಉತ್ಪಾದಕತೆ ಮತ್ತು ಆರೋಗ್ಯಕ್ಕಾಗಿ ಮಾಹಿತಿ ಜಾಲ (ಐಎನ್‌ಎಪಿಎಚ್‌) ಅಭಿವೃದ್ಧಿಪಡಿಸಲಾಯಿತು. ಇದರಂತೆ ಪ್ರತೀ ಪಶುವಿಗೂ ವಿಶಿಷ್ಟವಾದ ಆಧಾರ್‌ ರೀತಿಯ 12 ಅಂಕಿಗಳ ಗುರುತುಸಂಖ್ಯೆ ನೀಡಲಾಗುತ್ತದೆ.

ಕರುವಿಗೆ 4 ತಿಂಗಳಾಗುತ್ತಿದ್ದಂತೆಯೇ ಇಲಾಖೆಯವರು ಸ್ಥಳಕ್ಕೆ ತೆರಳಿ ಅದಕ್ಕೆ ಈ ವಿಶಿಷ್ಟ ಸಂಖ್ಯೆ ನೀಡುತ್ತಾರೆ. ಸಂಖ್ಯೆಯನ್ನು 8 ಗ್ರಾಂ ತೂಕದ ಹಳದಿಯ ಟ್ಯಾಗ್‌ನಲ್ಲಿ ಮುದ್ರಿಸಿ ದನ/ಕರುಗಳ ಕಿವಿಗೆ ಅಳವಡಿಸಲಾಗುತ್ತದೆ. ದನಗಳನ್ನು ಈ ಸಂಖ್ಯೆಯಿಂದ ಗುರುತಿಸುವುದು ಸಾಧ್ಯ. ಅಲ್ಲದೆ ಅವುಗಳ ವಿವರ, ಮಾಲಕರ ವಿವರ, ನೀಡಿರುವ ಲಸಿಕೆ, ತಳಿ ಇತ್ಯಾದಿಗಳನ್ನು ಐಎನ್‌ಎಪಿಎಚ್‌ ಡಾಟಾಬೇಸ್‌ನಲ್ಲಿ ಹುಡುಕಬಹುದಾಗಿದೆ. ಬೀಡಾಡಿ ದನಗಳಿಗೆ ಸದ್ಯ ಇಂತಹ ಯಾವುದೇ ದಾಖಲೀಕರಣ ವ್ಯವಸ್ಥೆ ಇರುವುದಿಲ್ಲ.

ಆದರೆ ಈ ಟ್ಯಾಗ್‌ ಜಾನುವಾರುಗಳಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಟ್ಯಾಗ್‌ನಲ್ಲಿರುವ ಸಂಖ್ಯೆ ಬೇಗನೆ ಮಸುಕಾಗುವುದು, ಟ್ಯಾಗ್‌ ಪೊದೆಗಳಿಗೆ ಸಿಲುಕಿ ಅಥವಾ ಇನ್ಯಾವುದೋ ಕಾರಣಕ್ಕೆ ಸೆಳೆಯಲ್ಪಟ್ಟು ದನಗಳ ಕಿವಿ ಹರಿದು ಹೋಗುವುದು, ಟ್ಯಾಗ್‌ನಿಂದಾಗಿ ಕಿವಿಯಲ್ಲಿ ವ್ರಣ ಆಗುವುದೂ ಪ್ರಮುಖ ಸಮಸ್ಯೆಗಳು. ಇನ್ನು ದೇಸೀ ಕೆಲವು ತಳಿಯ ಹಸುಗಳು ಕಿವಿಗೆ ಟ್ಯಾಗ್‌ ಅಳವಡಿಸಲು ಬಿಡುವುದಿಲ್ಲ. ಮನೆಯಲ್ಲಿ ಪುರುಷರು ಇಲ್ಲದಿರುವಾಗ ಅವುಗಳನ್ನು ನಿಯಂತ್ರಿಸಿ ಟ್ಯಾಗ್‌ ಹಾಕುವುದು ಸಿಬಂದಿಗೆ ಸವಾಲು.

ಜಾನುವಾರುಗಳ ಮೂಗಿನ ವಿನ್ಯಾಸದ ದತ್ತಾಂಶ ಸಂಗ್ರಹಕ್ಕೆ ಬೇಕಾಗುವ ಮಾನವ ಸಂಪನ್ಮೂಲದ ಪಟ್ಟಿ ನೀಡುವಂತೆ ಕೇಂದ್ರ ಕಚೇರಿಯಿಂದ ಸುತ್ತೋಲೆ ಬಂದಿದ್ದು, ಈಗಾಗಲೇ ಸಲ್ಲಿಸಲಾಗಿದೆ. ಪ್ರಾಯೋಗಿಕವಾಗಿ ಇದು ಅನುಷ್ಠಾನವಾಗಲಿದ್ದು, ಟ್ಯಾಗ್‌ ಬದಲಿಗೆ ಹೆಚ್ಚು ಉಪಯುಕ್ತವಾಗಲಿದೆ.
– ಡಾ| ಅರುಣ ಕುಮಾರ್‌ ಶೆಟ್ಟಿ, ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ, ಮಂಗಳೂರು

ದ.ಕ. ಜಿಲ್ಲೆಯಲ್ಲಿರುವ ಜಾನುವಾರು (2019ರ ಪಶುಗಣತಿಯಂತೆ)
ಸ್ಥಳೀಯ: 65,997
ಮಿಶ್ರ ತಳಿ: 1,84,572
ಒಟ್ಟು: 2,50,569
ಉಡುಪಿಯಲ್ಲಿ ಒಟ್ಟು 2,54,776
ಚರ್ಮಗಂಟು ರೋಗದಲ್ಲಿ ಸಾವನ್ನಪ್ಪಿದ ಜಾನುವಾರುಗಳು: 456
ಪರಿಹಾರ: 352 ಜಾನುವಾರುಗಳಿಗೆ 65.05 ಲ.ರೂ. (ಉಳಿದವುಗಳಿಗೆ ಇನ್ನಷ್ಟೇ ಪರಿಹಾರ ನೀಡಬೇಕಿದೆ.)

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

7-udupi

Request: ಕರಕುಶಲ ಕರ್ಮಿಗಳಿಗೆ ಸಕಾಲದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚಿಸಿ

Zammer-yathnal

Meeting: ಸಚಿವ ಜಮೀರ್‌ ಭೇಟಿಯಾದ ಶಾಸಕ ಯತ್ನಾಳ್‌! ಹಿಂದಿನ ಉದ್ದೇಶವೇನು ಗೊತ್ತಾ?

ವಂಚನೆಗೀಡಾಗಿ ಪಾಕ್‌ ಸೇರಿದ್ದ ಭಾರತದ ಮಹಿಳೆ 22 ವರ್ಷ ಬಳಿಕ ಸ್ವದೇಶಕ್ಕೆ

ವಂಚನೆಗೀಡಾಗಿ ಪಾಕ್‌ ಸೇರಿದ್ದ ಭಾರತದ ಮಹಿಳೆ 22 ವರ್ಷ ಬಳಿಕ ಸ್ವದೇಶಕ್ಕೆ

PM Modi: ಕಾಂಗ್ರೆಸ್‌ ರೈತರಿಗೆ ತಾನೂ ಒಳಿತು ಮಾಡದು ಬೇರೆ ಅವರಿಗೂ ಬಿಡದು

PM Modi: ಕಾಂಗ್ರೆಸ್‌ ರೈತರಿಗೆ ತಾನೂ ಒಳಿತು ಮಾಡದು ಬೇರೆ ಅವರಿಗೂ ಬಿಡದು

Coimbatore ಸರಣಿ ಸ್ಫೋಟದ ರೂವಾರಿ ಎಸ್‌.ಎ.ಬಾಷಾ ಸಾವು

Coimbatore ಸರಣಿ ಸ್ಫೋಟದ ರೂವಾರಿ ಎಸ್‌.ಎ.ಬಾಷಾ ಸಾವು

ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?

Supreme Court: ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?

Bgv-KCV

Belagavi: ಕಾಂಗ್ರೆಸ್‌ ಅಧಿವೇಶನದಿಂದ ಪಕ್ಷದ ಹೋರಾಟಕ್ಕೆ ಹೊಸ ತಿರುವು: ಕೆ.ಸಿ ವೇಣುಗೋಪಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Mangaluru: ಮಹಿಳೆ ನಾಪತ್ತೆ; ಪ್ರಕರಣ ದಾಖಲು

6

Mangaluru: ಕಾಂಕ್ರೀಟ್‌ ರಸ್ತೆಯ ನಡುವೆ ಹಣ್ಣಿನ ಫ‌ಸಲು!

5(1

Mangaluru: ಕದ್ರಿ ಹಿಲ್ಸ್‌  ಹುತಾತ್ಮರ ಸ್ಮಾರಕಕ್ಕೆ ಹೊಸ ರೂಪ

3

Ullal ಬೀಚ್‌ ಸುಂದರ, ಆದರೆ ಅವ್ಯವಸ್ಥೆಗಳ ಆಗರ!

ನನ್ನನ್ನು ಪರೀಕ್ಷಿಸಲು ಬಿವೈವಿ ಆಮಿಷ: ಅನ್ವರ್‌ ಮಾಣಿಪ್ಪಾಡಿ

ನನ್ನನ್ನು ಪರೀಕ್ಷಿಸಲು ಬಿವೈವಿ ಆಮಿಷ: ಅನ್ವರ್‌ ಮಾಣಿಪ್ಪಾಡಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

9-uv-fusion

UV Fusion: ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ

2

Mangaluru: ಮಹಿಳೆ ನಾಪತ್ತೆ; ಪ್ರಕರಣ ದಾಖಲು

8-uv-fusion

UV Fusion: ಗೊಂಬೆ ನಿನಗೂ ಬಂತೇ ಅಳಿಯುವ ಕಾಲ

de

Puttur: ವಿದೇಶದಿಂದ ರಜೆಯಲ್ಲಿ ಬಂದಿದ್ದ ಯುವಕ ಹೃದಯಾಘಾತದಿಂದ ನಿಧನ

7-udupi

Request: ಕರಕುಶಲ ಕರ್ಮಿಗಳಿಗೆ ಸಕಾಲದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.