ಕದ್ರಿ ಪಾರ್ಕ್‌ನ ಗಿಡಗಳಿಗೆ ‘ಗಂಗನಪಳ್ಳ’ದ ನೀರು!
ಪಾರ್ಕ್‌ನ ಒಳಗಿನ ಕೆರೆಗೆ ಮುಡಾದಿಂದ ಮರುಜೀವ
Team Udayavani, Apr 26, 2022, 12:03 PM IST
ಕದ್ರಿ: ಮಂಗಳೂರಿನ ಅತೀ ದೊಡ್ಡ ಪಾರ್ಕ್ ಆದ ಕದ್ರಿ ಪಾರ್ಕ್ ಅಭಿವೃದ್ಧಿ ನಿಟ್ಟಿನಲ್ಲಿ ಮುಡಾ ಮುಂದಡಿ ಇಡುತ್ತಿದ್ದು, ಮೊದಲನೇ ಹಂತದಲ್ಲಿ ಗಂಗನಪಳ್ಳ ಅಭಿವದ್ಧಿಗೆ ಯೋಜನೆ ಸಿದ್ಧಪಡಿಸುತ್ತಿದೆ.
ಪಾರ್ಕ್ ಒಳಗಿರುವ ಗಂಗನಪಳ್ಳ ಅಭಿವೃದ್ಧಿ ಹಲವು ವರ್ಷಗಳಿಂದ ಮರೀಚಿಕೆ ಯಾಗಿದೆ. ಸ್ಮಾರ್ಟ್‌ಸಿಟಿ, ತೋಟ ಗಾರಿಕೆ ಇಲಾಖೆಯಿಂದ ಈ ಹಿಂದೆ ಅಭಿವೃದ್ಧಿಯ ಬಗ್ಗೆ ಪ್ರಸ್ತಾವವಾಗಿತ್ತೇ ವಿನಾ ಯಾವುದೇ ರೀತಿಯ ಮುಂದುವರಿದ ಕಾಮಗಾರಿ ನಡೆದಿಲ್ಲ.
ಕದ್ರಿ ಪಾರ್ಕ್ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ‘ಉದಯವಾಣಿ ಸುದಿನ’ ಕೆಲವು ದಿನಗಳ ಹಿಂದೆ ವಿಸ್ತೃತ ವರದಿ ಮಾಡಿತ್ತು. ಕೆಲವು ದಿನಗಳ ಹಿಂದೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರನ್ನು ಒಳಗೊಡಂತೆ, ಅಧಿಕಾರಿಗಳ ಸಭೆ ನಡೆಸಿದ್ದು, ಈ ವೇಳೆ ಕದ್ರಿ ಪಾರ್ಕ್ ಸಮಗ್ರ ಅಭಿವೃದ್ಧಿಯ ಜತೆ ಗಂಗನಪಳ್ಳ ಅಭಿವೃದ್ಧಿಯ ಬಗ್ಗೆಯೂ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗಂಗನಪಳ್ಳ ನೀರಿನ ಸೆಲೆಯ ಬಗ್ಗೆ ಪರಿಶೀಲನೆ ನಡೆಸಲು ಸೋಮವಾರ ಕದ್ರಿ ಪಾರ್ಕ್‌ಗೆ ಭೇಟಿ ನೀಡಿತ್ತು.
ಕದ್ರಿ ದೊಡ್ಡ ಪಾರ್ಕ್ ಸುಮಾರು 16 ಎಕರೆ ಇದ್ದು, ಪಕ್ಕದಲ್ಲಿರುವ ಕದ್ರಿ ಜಿಂಕೆ ಉದ್ಯಾನವನ ಸುಮಾರು 4 ಎಕರೆ ಇದೆ. ಈ ಎರಡೂ ಉದ್ಯಾನಗಳ ಗಿಡಗಳಿಗೆ ಪ್ರತೀ ದಿನ ನೀರು ಹಾಯಿಸಲಾಗುತ್ತದೆ. ಪಾಲಿಕೆಯು ನೀರಿನ ರೇಷನಿಂಗ್ ಆರಂಭಿಸಿದರೆ ಬೇಸಗೆ ವೇಳೆ ಕದ್ರಿ ಪಾರ್ಕ್‌ಗೆ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಒಂದು ವೇಳೆ ಗಂಗನಪಳ್ಳ ಅಭಿವೃದ್ಧಿಯಾದರೆ ಅಲ್ಲಿಂದಲೇ ಪಾರ್ಕ್ ಗಿಡಗಳಿಗೆ ನೀರುಣಿಸಬಹುದು ಎಂದ ಚಿಂತನೆ ಮುಡಾದ್ದಾಗಿದೆ.
ನಗರದ ಅತೀ ದೊಡ್ಡ ಪಾರ್ಕ್ ಎಂದು ಗುರುತಿಸಿಕೊಂಡ ಕದ್ರಿ ಪಾರ್ಕ್ ಅಭಿವೃದ್ಧಿ ಕಾಣುತ್ತಿದೆ. ಇಲ್ಲಿನ ಗಂಗನಪಳ್ಳ ಅಭಿವೃದ್ಧಿಯಾಗಬೇಕು ಎಂಬ ಆಶಯ ಹಲವು ಸಮಯಗಳಿಂದ ಇತ್ತು. ಇದೀಗ ಗಂಗನಪಳ್ಳಕ್ಕೆ ಹೊಸ ರೂಪ ನೀಡಲು ಮುಡಾ ಮುಂದಾಗಿದೆ ಎಂದು ಕದ್ರಿ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯ ಜಿ.ಕೆ. ಭಟ್ ತಿಳಿಸಿದ್ದಾರೆ.
ನೀರಿನ ಸಮಸ್ಯೆ ನೀಗಿಸಲು ಕ್ರಮ
ಕದ್ರಿ ಪಾರ್ಕ್ ಅಭಿವೃದ್ಧಿ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಮೊದಲನೇ ಹಂತವಾಗಿ ಕದ್ರಿ ಪಾರ್ಕ್‌ನ ಗಂಗನಪಳ್ಳವನ್ನು ಅಭಿವೃದ್ಧಿಪಡಿಸಲು ಮುಡಾ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಗಂಗನಪಳ್ಳದಲ್ಲಿ ಭವಿಷ್ಯದಲ್ಲಿ ನೀರು ಲಭ್ಯವಾಗಬಹುದೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಪಾರ್ಕ್‌ಗೆ ನೀರಿನ ಸಮಸ್ಯೆಯಾಗದಂತೆ ಗಂಗನಪಳ್ಳ ಅಭಿವೃದ್ಧಿಯಾಗಲಿದೆ. ಕೆರೆಯಂತಿರುವ ಪಳ್ಳದ ಹೂಳು ತೆಗೆದು ಯೋಗ್ಯ ರೀತಿ ಲಭ್ಯವಾಗಿಸುವುದು ನಮ್ಮ ಉದ್ದೇಶ. –ರವಿಶಂಕರ ಮಿಜಾರ್, ಮುಡಾ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.