ಡ್ರಗ್ಸ್ ಪೆಡ್ಲರ್‌ಗಳ ಮೇಲೆ ಗೂಂಡಾ ಕಾಯಿದೆ, ಗಡಿಪಾರು
Team Udayavani, Jul 19, 2023, 6:45 AM IST
ಮಂಗಳೂರು: ಡ್ರಗ್ಸ್ ಪೂರೈಕೆ ಸರಪಣಿಯನ್ನು ತುಂಡರಿಸುವ ಪ್ರಯತ್ನವಾಗಿ ದ.ಕ. ಜಿಲ್ಲಾ ಪೊಲೀಸರು ಡ್ರಗ್ಸ್ ಪೆಡ್ಲರ್‌ಗಳ (ನಿಷೇಧಿತ ಮಾದಕ ವಸ್ತು ಮಾರಾಟಗಾರರು) ಮೇಲೆ ಗೂಂಡಾ ಕಾಯಿದೆ ಹಾಕಿ ಗಡೀಪಾರು ಮಾಡಲು ಮುಂದಾಗಿದ್ದು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಗುರಿ ನೀಡಲಾಗಿದೆ.
ಈ ಹಿಂದೆ ಡ್ರಗ್ಸ್ ಚಟುವಟಿಕೆಯಲ್ಲಿ ಭಾಗಿಯಾದವರು ಹಾಗೂ ಪ್ರಸ್ತುತ ಪೆಡ್ಲರ್‌ಗಳಾಗಿರುವವರ ಮಾಹಿತಿ ಸಂಗ್ರಹಕ್ಕೆ ಗುಪ್ತಚರ ಇಲಾಖೆ, ಸೆನ್ ಪೊಲೀಸ್, ಸ್ಥಳೀಯ ಪೊಲೀಸ್ ಠಾಣೆಗಳು ಹಾಗೂ ವಿಶೇಷ ತಂಡಕ್ಕೆ ಜವಾಬ್ದಾರಿ ನೀಡಲಾಗಿದೆ.
ಶೇ. 100 ಕೌನ್ಸೆಲಿಂಗ್
ಡ್ರಗ್ಸ್ ವ್ಯಸನಿಗಳಾಗಿರುವವರು ಅಥವಾ ಡ್ರಗ್ಸ್ ಆಮಿಷಕ್ಕೆ ಒಳಗಾಗಿರುವ 15ರಿಂದ 40 ವರ್ಷದವರನ್ನು ಗುರಿಯಾಗಿಟ್ಟುಕೊಂಡು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ಅಭಿಯಾನ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಚಟುವಟಿಕೆ, ವರ್ತನೆ ಮೇಲೆ ನಿರಂತರ ನಿಗಾ ಇಟ್ಟು ಸಂದೇಹಗಳು ಡ್ರಗ್ಸ್ ಸೇವನೆ ಬಗ್ಗೆ ಸಂದೇಹಗಳುಂಟಾದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಾಂಶುಪಾಲರು, ಅಧ್ಯಾಪಕರಿಗೆ ಸೂಚಿಸಲಾಗಿದೆ. ಮಾಹಿತಿ ಆಧಾರದಲ್ಲಿ ಸಂಶಯಾಸ್ಪದ ನಡವಳಿಕೆಯ ಎಲ್ಲ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್‌ಗೆ ಒಳಪಡಿಸಲಾಗುವುದು.
2 ವಾರದಲ್ಲಿ 11 ವಿದ್ಯಾರ್ಥಿಗಳು
ಡ್ರಗ್ಸ್ ಸೇವಿಸುತ್ತಿರುವ ಸಂಶಯ ವಿದ್ದವ ರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು ಕಳೆದ 2 ವಾರದಲ್ಲಿ 150ಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. 11 ಮಂದಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಇದು ಸರಳವಾದ ತಪಾಸಣೆ ಪ್ರಕ್ರಿಯೆಯಾಗಿದ್ದು 24 ಗಂಟೆಗಳಲ್ಲಿ ವರದಿ ಲಭ್ಯವಾಗುತ್ತದೆ.
ವಿದ್ಯಾರ್ಥಿಗಳು ಸೇರಿದಂತೆ ಯಾರಾದರೂ ಡ್ರಗ್ಸ್ ಸೇವನೆ ಮಾಡುತ್ತಿದ್ದರೆ ಅದನ್ನು ಶಾಲೆ, ಕಾಲೇಜಿನವರಾಗಲಿ, ಹೆತ್ತವರಾಗಲಿ ಮುಚ್ಚಿಡಬಾರದು. ಅಂಥವರನ್ನು ಗುರುತಿಸಿ ಅದರಿಂದ ಹೊರಗೆ ತರದೇ ಹೋದರೆ ಅನಾಹುತವಾಗುವ ಅಪಾಯ ವಿರುತ್ತದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಪೆಡ್ಲರ್‌ಗಳ ಪತ್ತೆಗೆ ಪ್ರತೀ ಠಾಣೆಗೂ ಗುರಿ
ತಾಲೂಕು ಆಸ್ಪತ್ರೆಗಳಿಗೆ ಮೊದಲ ಹಂತದಲ್ಲಿ ಒಟ್ಟು 200 ಕಿಟ್‌ಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಕಿಟ್‌ಗಳನ್ನು ಖರೀದಿಸುವಂತೆ ಸೂಚಿಸಲಾಗಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಡ್ರಗ್ಸ್ ಪರೀಕ್ಷೆ ಮಾಡಿಸಿಕೊಳ್ಳಬೇಕಿತ್ತು. ಈಗ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ.
– ಕಿಶೋರ್ ಕುಮಾರ್, ಆರೋಗ್ಯ-ಕುಟುಂಬ ಕಲ್ಯಾಣಾಧಿಕಾರಿ, ದ.ಕ. ಜಿಲ್ಲೆ
ಶಾಲಾ ಕಾಲೇಜುಗಳಲ್ಲಿ ವ್ಯಾಪಕ ಜಾಗೃತಿ, ವ್ಯಸನಿಗಳಿಗೆ ಕೌನ್ಸೆಲಿಂಗ್, ಡಿ-ಎಡಿಕ್ಷನ್ ಸೆಂಟರ್ ವ್ಯವಸ್ಥೆಯ ಜತೆಗೆ ಡ್ರಗ್ಸ್ ಮಾರಾಟಗಾರರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದು ಕೂಡ ಅಗತ್ಯವಾಗಿದೆ. ಡ್ರಗ್ಸ್ ಮಾರಾಟಗಾರರ ಮೇಲೆ ಗೂಂಡಾ ಕಾಯಿದೆ ಹಾಕಿ ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡ ನಿಯೋಜಿಸಲಾಗಿದೆ. ಡ್ರಗ್ಸ್ ಚಟುವಟಿಕೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ಟೋಲ್ ಫ್ರೀ ಸಂಖ್ಯೆ ಆರಂಭಿಸುವ ಚಿಂತನೆಯೂ ಇದೆ. – ಸಿ.ಬಿ. ರಿಷ್ಯಂತ್, ಎಸ್‌ಪಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.