Ganjimutt: ಪಂಚಾಯತ್ ಸಭೆಗೆ ವಿದ್ಯುತ್ ಶಾಕ್!
ಇನ್ನೂ 1 ಕೋ. ರೂ. ವಿದ್ಯುತ್ ಬಿಲ್ ಬಾಕಿ
Team Udayavani, Jul 30, 2024, 12:56 PM IST
ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಗೆ ವಸ್ತುಶಃ ವಿದ್ಯುತ್ ಶಾಕ್ ಹೊಡೆದಿದೆ. ಮೆಸ್ಕಾಂ ತನಗೆ ಬರಬೇಕಾಗಿರುವ ವಿದ್ಯುತ್ ಬಿಲ್‌ನಲ್ಲಿ 3.80 ಕೋಟಿ ರೂಪಾಯಿಯನ್ನು ಮನ್ನಾ ಮಾಡಿದೆ. ಆದರೂ ಇನ್ನೂ 1 ಕೋಟಿ ರೂಪಾಯಿಯನ್ನು ಪಂಚಾಯಿತಿ ಪಾವತಿಸಬೇಕಾಗಿದೆ. ಇದರ ಬಡ್ಡಿಯೇ ತಿಂಗಳಿಗೆ 30 ಸಾವಿರ ರೂಪಾಯಿ ಬೀಳಲಿದೆ!
ಈ ವಿಚಾರಗಳು ಗಂಜಿಮಠ ಗ್ರಾಮಪಂಚಾಯತ್ ವ್ಯಾಪ್ತಿಯ ಬಡಗುಳಿಪಾಡಿ, ತೆಂಕುಳಿಪಾಡಿ ಮತ್ತು ಮೊಗರು ಗ್ರಾಮಗಳ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಚರ್ಚೆಯಾದವು. ಅಧ್ಯಕ್ಷೆ ಮಾಲತಿ ಎಂ.ಅವರ ಅಧ್ಯಕ್ಷತೆಯಲ್ಲಿ ಗಂಜಿಮಠದ ಮರಾಠಿ ಸಮಾಜ ಮಂದಿರದಲ್ಲಿ ನಡೆಯಿತು.
ಬಾಕಿ ಉಳಿದ ಬಿಲ್ ಪಾವತಿ ಬಗ್ಗೆ ಗ್ರಾಮ ಪಂಚಾಯತ್ ಚಿಂತಿಸಬೇಕು. ಮೆಸ್ಕಾಂಗೆ ಬಡ್ಡಿ ಕಟ್ಟುತ್ತಾ ಕುಳಿತರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಜನರ ತೆರಿಗೆಯೆಲ್ಲಾ ಬಡ್ಡಿಗೇ ಬೇಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ಬಿಲ್ ಪಾವತಿಸಿ ಪಂಚಾಯತನ್ನು ಋಣ ಮುಕ್ತ ಮಾಡಿ ಎಂದು ಗ್ರಾಮಸ್ಥರು ಹೇಳಿದರು. ಗ್ರಾಮ ಸಭೆಗೆ ಬರುವ ನಮಗೆ ಅಂಬಡೆ, ಚಹಾ ಬೇಡ, ಅದರ ಹಣವನ್ನೂ ಮೆಸ್ಕಾಂಗೆ ಕಟ್ಟಿ ಎಂದು ಕೂಡ ಕೆಲವರು ಹೇಳಿದರು.
ಈ ಬಗ್ಗೆ ಉತ್ತರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಬಿ. ಅವರು, 2023-24ನೇ ಸಾಲಿನಲ್ಲಿ ಒಟ್ಟು 60 ಲಕ್ಷ ರೂ. ಮೆಸ್ಕಾಂ ಬಿಲ್ ಪಾವತಿಸಲಾಗಿದೆ. ಉಳಿದ ಮೊತ್ತವನ್ನು ತ್ವರಿತವಾಗಿ ಪಾವತಿಸುವ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನೋಡಲ್ ಅಧಿಕಾರಿಯಾಗಿ ಮಂಗಳೂರು ನಗರ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಅವರು ಆಗಮಿಸಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಾರಮ್ಮ, ಪಂಚಾಯತ್ ಸದಸ್ಯರು. ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮ ಸಭೆ,ವಾರ್ಡ್ ಸಭೆಯ ವರದಿಯನ್ನು ಕಾರ್ಯದರ್ಶಿ ಮೊಹಮ್ಮದ್ ಶರೀಫ್ ವಾಚಿಸಿದರು.
ವಿದ್ಯುತ್ ಅಪಾಯ ಕಂಡರೆ ಕರೆ ಮಾಡಿ
ವಿದ್ಯುತ್ ತಂತಿ ಕಡಿದು ಬಿದ್ದರೆ, ಕಂಬ ಬಿದ್ದರೆ ಯಾವುದೇ ವಿದ್ಯುತ್ ಅಪಾಯ ಸಂಭವಿಸಿದರೆ ತುರ್ತು ಸೇವೆಗಾಗಿ 8277883388 ಅಥವಾ 0824-2950953ಕ್ಕೆ ಕರೆಮಾಡಿ ಎಂದು ಕೈಕಂಬ ಮೆಸ್ಕಾಂ ಅಧಿಕಾರಿ ದೇವಿ ಪ್ರಸಾದ್ ಸಭೆಯಲ್ಲಿ ಮಾಹಿತಿ ನೀಡಿದರು. 3 ದಿನಗಳಲ್ಲಿ 60 ವಿದ್ಯುತ್ ಕಂಬ ತುಂಡಾಗಿದ್ದು, ಸರಿಪಡಿಸಲಾಗುತ್ತಿದೆ ಇದರಿಂದ ವಿದ್ಯುತ್ ಸರಬರಾಜಿನಲ್ಲಿ ಅಡೆತಡೆಯಾಗಿದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು. ಮೊಗರು ಗತ್ನಮಜಲು ಪ್ರದೇಶದಲ್ಲಿ ದಿನಾ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹೀಗಾಗಿ ನಮಗೆ ಎಡಪದವು ಮೆಸ್ಕಾಂ ಬೇಡ, ಕೈಕಂಬ ಮೆಸ್ಕಾಂ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ನಿರ್ಣಯ ಮಾಡಿ ಮೆಸ್ಕಾಂಗೆ ಕಳುಹಿಸಲು ಆಗ್ರಹಿದರು. ಗಾಂಧಿನಗರದಲ್ಲಿ ಉಚಿತ ವಿದ್ಯುತ್ ಇದ್ದ ಮಹಿಳೆಗೆ ಈಗ 4 ಸಾವಿರ ರೂಪಾಯಿ ಬಿಲ್ ನೀಡಲಾಗಿತ್ತು. ಈಗ ಬಿಲ್ ಪಾವತಿಸಿ ಮತ್ತೆ ಸರಿಪಡಿಸಲಾಗುವುದು ಎಂದು ಹೇಳುತ್ತಾರೆ ಎಂದು ಮೆಸ್ಕಾಂ ಅಧಿಕಾರಿಯವರಲ್ಲಿ ತಿಳಿಸಿದರು.
ಚರ್ಚಿತ ಇತರ ಪ್ರಮುಖ ವಿಷಯ
ಮಳಲಿ ದಾದಿಯರ ಕೇಂದ್ರದ ಆವರಣದೊಳಗೆ ಸ್ವಚ್ಛತೆಗಾಗಿ ಕಾಂಕ್ರೀಟ್ ಹಾಕಬೇಕು.
ನಾಡಾಜೆಯಲ್ಲಿ ವಿದ್ಯುತ್ ಕಂಬದ ಮೇಲೆ ತಾಳೆಗರಿ ಬಿದ್ದು ,ಪದೇ ಪದೇ ವಿದ್ಯುತ್ ಕಡಿತವಾಗುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ.
ಮೊಗರು ಸೈಟ್, ಭವಂತಿಬೆಟ್ಟು ಭಾಗದಲ್ಲಿ ವಿದ್ಯುತ್ ತಂತಿ ಸಮಸ್ಯೆ ಸರಿಪಡಿಸಿ, ಮಳಲಿ ವಿದ್ಯುತ್ ಕಂಬದಲ್ಲಿ ಬಳ್ಳಿ ಸುತ್ತಿಕೊಂಡಿದೆ.
ನಾಡಾಜೆ ಅಂಗನವಾಡಿ ಕೇಂದ್ರದ ಜಾಗದ ಸಮಸ್ಯೆಯನ್ನು ಸರಿಪಡಿಸಿ.
ವಸತಿ ಸಮುಚ್ಚಯಗಳ ನೀರು ರಸ್ತೆಗೆ!
ಕೈಕಂಬದಿಂದ -ಗಾಂಧಿನಗರ ತನಕ ವಸತಿ ಸಮುಚ್ಚಯಗಳ ಶೌಚಾಲಯದ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಂಡಿಗಳಲ್ಲಿ ಮಳೆ ನೀರಿನ ಜತೆ ತ್ಯಾಜ್ಯ ನೀರು ಸೇರುತ್ತಿದೆ. ಜಲ ಜೀವನ್ ಮಿಷನ್ ನೀರಿನ ಪೈಪಿಗೂ ಕಲುಷಿತ ನೀರು ಪ್ರವೇಶಿಸಿದೆ. ಗುಂಡಿಗಳಲ್ಲಿ ನೀರು ನಿಂತಾಗ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ ಎಂದು ಆಪಾದಿಸಲಾಯಿತು. ವಸತಿ ಸಮುಚ್ಚಯದ ನೀರು ರಸ್ತೆಗೆ ಬಿಡುತ್ತಿದ್ದರೆ ಅದರ ಮಾಲಕನೇ ಹೊಣೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತ್ ರಾಜ್ ಹೇಳಿದರು.
ತೆಂಕುಉಳಿಪಾಡಿ ಕಾಜಿಲದಲ್ಲಿ ತ್ಯಾಜ್ಯ ನೀರು ಪ್ರವೇಶದಿಂದ ಕೃಷಿ ಮಾಡಲು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಅಲ್ಲಿ ನೀರು ಹೋಗಲು ಚರಂಡಿ ಇಲ್ಲದೆ ಸಮಸ್ಥೆಯಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಡಿಒ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.