‘ಸಿನೆಮಾಗಳ ಗುಣಮಟ್ಟಕ್ಕೆ ಪ್ರಾಶಸ್ತ್ಯ ನೀಡಿ’


Team Udayavani, Mar 26, 2018, 2:45 PM IST

26-March-11.jpg

ಮಹಾನಗರ: ಸಿನೆಮಾಗಳ ಅಂಕಿಸಂಖ್ಯೆಗಿಂತ ಹೆಚ್ಚಾಗಿ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು
ಸಂಗೀತ ನಿರ್ದೇಶಕ ಗುರುಕಿರಣ್‌ ಹೇಳಿದರು.

ನಗರದ ಕರಾವಳಿ ಮೈದಾನದಲ್ಲಿ ಇತ್ತೀಚೆಗೆ ನಡೆದ ರೆಡ್‌ ಎಫ್‌.ಎಂ. ತುಳು ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯ
ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಚಲನಚಿತ್ರದಂತೆಯೇ ತುಳು ಚಿತ್ರರಂಗ ಕೂಡ ಬೆಳೆಯುತ್ತಿದೆ. ತುಳು ಚಿತ್ರದ ಕಲಾವಿದರು ಕನ್ನಡ ಚಲನ ಚಿತ್ರ ಕ್ಷೇತ್ರದಲ್ಲಿಯೂ ಮಿಂಚುತ್ತಿದ್ದಾರೆ. ಇದು ತುಳುನಾಡಿಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಸ್ಥಳೀಯ ಪ್ರತಿಭೆಗಳಿಗೆ ಅವಕಾಶ
ನಿರ್ದೇಶಕ, ನಟ ಋಶಭ್‌ ಶೆಟ್ಟಿ ಮಾತನಾಡಿ, ಆರು ವರ್ಷಗಳಲ್ಲಿ ತುಳು ಚಲನಚಿತ್ರ ಕ್ಷೇತ್ರ ಗಮನಾರ್ಹ ಬೆಳವಣಿಗೆ ಕಂಡಿದೆ. ಸ್ಥಳೀಯ ಪ್ರತಿಭೆಗಳಿಗೆ ತುಳು ಚಲನಚಿತ್ರ ವೇದಿಕೆ ನೀಡುತ್ತಿದೆ ಎಂದರು.

24 ವಿಭಾಗಗಳಲ್ಲಿ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಒಟ್ಟು 24 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದ್ದು, ಉತ್ತಮ ಚಲನಚಿತ್ರ ಪ್ರಶಸ್ತಿ ಪಿಲಿಬೈಲು
ಯಮುನಕ್ಕ ಚಿತ್ರದ ಪಾಲಾಯಿತು. ಉತ್ತಮ ನಟ ಪ್ರಶಸ್ತಿ ಪಿಲಿಬೈಲು ಯಮುನಕ್ಕ ಚಿತ್ರ ನಟನೆಗೆ ಪೃಥ್ವಿ ಅಂಬರ್‌ ಪಡೆದರೆ, ಪವಿತ್ರ ಚಲನಚಿತ್ರದ ನಟನೆಗೆ ಚಿರಶ್ರೀ ಅಂಚನ್‌ ಅವರು ಉತ್ತಮ ನಟಿ ಪ್ರಶಸ್ತಿ ಪಡೆದರು. ಜೂರಿ ಸ್ಪೆಷಲ್‌ ಅವಾರ್ಡ್‌ ನವೀನ್‌ ಡಿ. ಪಡೀಲ್‌, ಜೀವಮಾನ ಸಾಧನೆ ಪ್ರಶಸ್ತಿ- ಎಂ.ಕೆ. ಸೀತಾರಾಮ ಕುಲಾಲ್‌ ಅವರಿಗೆ ಲಭಿಸಿತು.

ಉಳಿದಂತೆ ಉತ್ತಮ ಸಹ ನಟಿ- ವಿನಯ ಪ್ರಸಾದ್‌, ಉತ್ತಮ ಸಹ ನಟ-ಸುರೇಶ್‌ ರೈ, ಉತ್ತಮ ಬಾಲ ನಟಿ-ಪೂರ್ವಿ, ಉತ್ತಮ ನಿರ್ದೇಶಕ- ಸೂರಜ್‌ ಕೆ. ಶೆಟ್ಟಿ, ಉತ್ತಮ ಕಥೆ- ಅನಂತರಾಮ್‌ ಎರ್ಮಾಳ್‌, ಉತ್ತಮ ಚಿತ್ರಕಥೆ-ಸೂರ್ಯ ಮೆನನ್‌, ಉತ್ತಮ ಸಂಭಾಷಣೆ- ಸುಂದರ ರೈ ಮಂದಾರ, ಉತ್ತಮ ಸಾಹಸ-ಕೌರವ ವೆಂಕಟೇಶ್‌, ಬೆಸ್ಟ್‌ ಬ್ಯಾಗ್ರೌಂಡ್‌ ಸ್ಕೋರ್‌-ಎಸ್‌.ಪಿ. ಚಂದ್ರಕಾಂತ್‌, ಉತ್ತಮ ಛಾಯಾಗ್ರಹಣ- ಸಂತೋಷ್‌ ರೈ ಪಾತಾಜೆ, ಉತ್ತಮ ಸಂಕಲನ- ಅಕ್ಷಯ್‌ ಮೆಹ್ತಾ, ಉತ್ತಮ ನೃತ್ಯ ಸಂಯೋಜನೆ-ಅಶೋಕ್‌ ರಾಜ್‌, ಉತ್ತಮ ಕಲಾನಿರ್ದೇಶನ- ಬಾಬೂ ಖಾನ್‌, ಉತ್ತಮ ಸಾಹಿತ್ಯ-ರಂಜಿತ್‌ ಸುವರ್ಣ, ಉತ್ತಮ ಸಂಗೀತ- ಕಿಶೋರ್‌ ಕುಮಾರ್‌ ಶೆಟ್ಟಿ, ಉತ್ತಮ ಗಾಯಕ-ಪಟ್ಲ ಸತೀಶ್‌ ಶೆಟ್ಟಿ, ಉತ್ತಮ ಗಾಯಕಿ- ಮೇಘನಾ ಕುಲಕರ್ಣಿ, ಉತ್ತಮ ಹಾಸ್ಯ ನಟ- ವಿಸ್ಮಯ ವಿನಾಯಕ್‌, ಉತ್ತಮ ಖಳನಟ ಪ್ರಶಸ್ತಿ-ಮನೋಜ್‌ ಪುತ್ತೂರು ಪಡೆದುಕೊಂಡರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಮುಕುಂದ್‌ ಕಾಮತ್‌, ರೆಡ್‌ ಎಫ್‌.ಎಂ. ಎಂಡಿ ಸುರೇಶ್‌ ಗಣೇಶನ್‌, ನಿಶಾನ್‌ ಶೇಟ್‌, ಮಾರ್ಟಿನ್‌ ಪೌಲ್‌ ಮೊದಲಾ ದವರಿದ್ದರು. ವಿಜೆ ವಿನಿತ್‌ ಮತ್ತು ಸೌಜನ್ಯಾ ಹೆಗ್ಡೆ ನಿರೂಪಿಸಿದರು.

ದಿನದಿಂದ ದಿನಕ್ಕೆ ತುಳು ಪ್ರಜ್ವಲನ
ಆಳ್ವಾಸ್‌ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಮೋಹನ್‌ ಆಳ್ವ ಮಾತನಾಡಿ, 47 ವರ್ಷಗಳಲ್ಲಿ ಸುಮಾರು 80ಕ್ಕೂ ಹೆಚ್ಚಿನ ತುಳು ಚಲನಚಿತ್ರಗಳು ತೆರೆ ಕಂಡಿವೆ. ಅನೇಕ ಭಾಷೆಗಳು ಅವನತಿ ಕಾಣುತ್ತಿರುವ ಈ ಸಂದರ್ಭದಲ್ಲಿ ತುಳು ದಿನದಿಂದ ದಿನಕ್ಕೆ ಪ್ರಜ್ವಲಿಸುತ್ತಿದೆ ಎಂದರು.

ಟಾಪ್ ನ್ಯೂಸ್

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.