ಶುಭ ಶುಕ್ರವಾರ: ಧ್ಯಾನ, ಉಪವಾಸ, ಪ್ರಾರ್ಥನೆ
Team Udayavani, Apr 11, 2020, 11:26 AM IST
ಮಂಗಳೂರು: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಸ್ಮರಣಾರ್ಥ ಕ್ರೈಸ್ತರು ಶುಭ ಶುಕ್ರವಾರ (ಗುಡ್ ಫ್ರೈಡೆ) ಆಚರಿಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕ್ರೈಸ್ತರು ಮನೆಗಳಲ್ಲಿಯೇ ಇದ್ದು, ಈ ದಿನವನ್ನು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯಿಂದ ಕಳೆದರು. ಯೇಸು ಕ್ರಿಸ್ತರು ತಮ್ಮ ಬದುಕಿನ ಕೊನೆಯ ದಿನ ಅನುಭವಿಸಿದ ಕಷ್ಟ- ಸಂಕಷ್ಟ, ಯಾತನೆ ಹಾಗೂ ಶಿಲುಬೆಯನ್ನು ಹೊತ್ತು ಸಾಗಿದ ಹಾದಿ ಹಾಗೂ ಶಿಲುಬೆಯಲ್ಲಿ ಮರಣವನ್ನಪ್ಪಿದ ಘಟನಾವಳಿಯನ್ನು ಸ್ಮರಿಸಿದರು.
ಶುಭ ಶುಕ್ರವಾರದಂದು ಬಲಿ ಪೂಜೆಗಳು ನಡೆಯುವುದಿಲ್ಲ, ಚರ್ಚ್‌ಗಳಲ್ಲಿ ಗಂಟೆಗಳ ನಿನಾದವೂ ಇರುವುದಿಲ್ಲ. ಒಟ್ಟು ಕ್ರೈಸ್ತ ಸಭೆ ಮೌನ ಆಚರಿಸುತ್ತದೆ. ಮಂಗಳೂರಿನ ಬಿಷಪ್ ಅತಿ ವಂ| ಡಾ | ಪೀಟರ್ ಪಾವ್ ಸಲ್ಡಾನ್ಹಾ ಅವರು ರೊಜಾರಿಯೋ ಕೆಥೆಡ್ರಲ್‌ನಲ್ಲಿ ಬೆಳಗ್ಗೆ ಶಿಲುಬೆಯ ಹಾದಿ (ವೇ ಆಫ್ ದಿ ಕ್ರಾಸ್) ಹಾಗೂ ಸಂಜೆ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಈ ಎರಡೂ ಕಾರ್ಯಕ್ರಮ
ಗಳನ್ನು ಆನ್‌ಲೈನ್ (ಯೂಟ್ಯೂಬ್ ಮತ್ತು ಖಾಸಗಿ ವಾಹಿನಿ)ಮೂಲಕ ನೇರ ಪ್ರಸಾರ ಮಾಡಲಾಗಿದ್ದು, ಕ್ರೈಸ್ತರು ಮನೆಯ
ಲ್ಲಿಯೇ ವೀಕ್ಷಿಸಿ, ಬಿಷಪ್ ಜತೆ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಯೇಸು ಕ್ರಿಸ್ತರಿಗೆ ಶಿಲುಬೆಯ ಶಿಕ್ಷೆ ವಿಧಿಸಿದಲ್ಲಿಂದ ಆರಂಭಿಸಿ ಅವರು ಶಿಲುಬೆಯಲ್ಲಿ ಮರಣವ
ನ್ನಪ್ಪಿ ಅವರ ಮೃತದೇಹವನ್ನು ಸಮಾಧಿ ಮಾಡುವಲ್ಲಿ ತನಕ ಬೈಬಲ್‌ನಲ್ಲಿರುವ ಅಧ್ಯಾಯವನ್ನು ವಾಚಿಸಲಾಯಿತು.
ಕೆಥೆಡ್ರಲ್‌ನ ರೆಕ್ಟರ್ ವಂ| ಜೆ.ಬಿ. ಕ್ರಾಸ್ತಾ ಪ್ರವಚನ ನೀಡಿದರು. ಸಹಾಯಕ ಗುರು ವಂ| ಫ್ಲೆàವಿಯನ್ ಲೋಬೋ ಹಾಜರಿದ್ದರು. ಶಿಲುಬೆಯ ಆರಾಧನೆಯನ್ನೂ ನಡೆಸಲಾಯಿತು. ಲೋಕ ಕಲ್ಯಾಣಕ್ಕಾಗಿ ಹಾಗೂ ಕೊರೊನಾ ರೋಗ ನಿರ್ಮೂಲನೆಗಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಹಕರಿಸಲು ಮನವಿ
ಕೋವಿಡ್ 19 ವೈರಸ್ ಹರಡುವ ಸಾಧ್ಯತೆಯನ್ನು ಮನಗಂಡು ಸರಕಾರ ಜಾರಿ ಮಾಡಿದ ಲಾಕ್‌ಡೌನ್‌ನ್ನು ಹಾಗೂ ಕಾಲಕಾಲಕ್ಕೆ ನೀಡುತ್ತಿರುವ ಸೂಚನೆಗಳನ್ನು ಪಾಲಿಸುವ ಮೂಲಕ ದೇಶದ ಹಾಗೂ ರಾಜ್ಯದ ಆಡಳಿತ ನಡೆಸುವವರಿಗೆ ಸಹಕಾರ ನೀಡುವಂತೆ ಬಿಷಪ್ ಮನವಿ ಮಾಡಿದರು.
ಮನೆಯಲ್ಲಿಯೇ ಸರಳವಾಗಿ ಗುಡ್ ಫ್ರೈಡೆ ಆಚರಣೆ
ಉಡುಪಿ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು (ಗುಡ್ ಫ್ರೈಡೆ) ಉಡುಪಿ ಜಿಲ್ಲೆಯಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕ್ರೈಸ್ತ ಬಾಂಧವರು ಉಪವಾಸ ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಿದರು.
ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾ ದ್ಯಂತ ಲಾಕ್‌ಡೌನ್ ಹೇರಿದ್ದು, ಉಡುಪಿ ಜಿಲ್ಲೆಯಲ್ಲೂ ಸೆಕ್ಷನ್ 144(3) ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಇರುವ ಕಾರಣ ಕ್ರೈಸ್ತ ಬಾಂಧವರು ತಮ್ಮ ಮನೆಯಲ್ಲಿಯೇ ಇದ್ದು ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನವನ್ನು ಜರಗಿಸಿದರು.
ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ| ಜೆರಾಲ್ಡ್ ಐಸಾಕ್ ಲೋಬೋ ಅವರು ತಮ್ಮ ನಿವಾಸದ ಪ್ರಾರ್ಥನಾಲಯದಲ್ಲಿಯೇ ಖಾಸಗಿಯಾಗಿ ಗುಡ್ ಫ್ರೈಡೆ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.