ಸರಕಾರಿ ಕನ್ನಡ ಶಾಲೆ ಉಳಿಸಿ ಬೆಳೆಸಬೇಕು: ಪೇಜಾವರ ಶ್ರೀ
Team Udayavani, Oct 1, 2019, 5:00 AM IST
ಮೂಡುಬಿದಿರೆ: ಮಕ್ಕಳು ಭೂಮಿಯ ನಕ್ಷತ್ರಗಳಂತೆ. ರಾಷ್ಟ್ರ ಪ್ರೇಮದ ಬೆಳಕಿನಲ್ಲಿ ಅವು ಬೆಳಗಿದರೆ ಮಾತ್ರ ರಾಷ್ಟ್ರ ಉಜ್ವಲವಾಗಿ ಮುನ್ನಡೆ ಯಲು ಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ಕಡಲಕೆರೆಯ ಬಳಿ ವಿದ್ಯಾಭಾರತಿ ಸಂಯೋಜಿತವಾದ ಮೂಡುಬಿದಿ ರೆಯ ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಕಡಲಕೆರೆ ಸೈಂಟ್ ಇಗ್ನೇಶಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ, ಎಂಆರ್‌ಪಿಎಲ್‌ನಿಂದ 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶಾಲಾ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಆಶೀರ್ವಚನವಿತ್ತರು.
ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿ ನಡೆಯಬೇಕು ಎಂಬುದನ್ನು ಪ್ರಾಜ್ಞರು ಒಪ್ಪಿದ್ದಾರೆ. ಅದಾಗದಿದ್ದರೆ ಕನಿಷ್ಠ ಪಕ್ಷ ಆಂಗ್ಲಮಾಧ್ಯಮದಲ್ಲಿಯೂ ಕನ್ನಡಕ್ಕೆ ಆದ್ಯತೆ ನೀಡುವಂತಾಗಬೇಕು ಎಂದ ಅವರು, ಸರಕಾರ ಕನ್ನಡ ಶಾಲೆಗಳಲ್ಲಿ ಶಿಕ್ಷಕರು, ಅವರ ಸಂಬಳ ಸವಲತ್ತುಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಒಳ್ಳೆಯ ವಾತಾ
ವರಣ, ಪ್ರೋತ್ಸಾಹ ಇದ್ದರೆ, ಊರಿ ನವರೂ ಪ್ರಯತ್ನಿಸಿದರೆ ಒಳ್ಳೆಯ ಕನ್ನಡ ಮಾಧ್ಯಮ ಶಾಲೆಯನ್ನು ಕಟ್ಟಬಹುದು ಎಂಬುದಕ್ಕೆ ಕಡಲಕೆರೆ ಶಾಲೆಯ ನೂತನ ಕಟ್ಟಡ ಸಾಕ್ಷಿಯಾಗಿದೆ ಎಂದರು.
ಸಮಸ್ಯೆಗಳ ಅರಿವಿದೆ: ಸಚಿವ ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಕೆಲವೆಡೆ ಮಕ್ಕಳಿಲ್ಲ, ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ, ಕೆಲವೆಡೆ ಮಕ್ಕಳ ಸಂಖ್ಯೆಗೆ ಸರಿಯಾಗಿ ಶಿಕ್ಷಕರ ಅನುಪಾತವಿಲ್ಲ ದಿರುವ ಸಮಸ್ಯೆ ಇರುವುದು ಸರಕಾರದ ಗಮನದಲ್ಲಿದೆ. ಇವುಗಳನ್ನು ಪರಿಹರಿಸಲು ಪ್ರಯತ್ನಿಸುವೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಡ್ಡಾಯ ಶಿಕ್ಷಕರ ವರ್ಗಾವಣೆಯ ಸಮಸ್ಯೆಯ ಪರಿಹಾರಕ್ಕೆ ಸರಕಾರ ಯೋಗ್ಯ ಮಾರ್ಗ ಕಂಡುಕೊಳ್ಳಲಿದೆ ಎಂದರು.
ರಾ.ಸ್ವ. ಸಂಘದ ಸಹಸರಕಾರ್ಯವಾಹ ಮುಕುಂದ ಶುಭಾಶಂಸನೆಗೈದರು. ಪ್ರೇರಣಾ ಸೇವಾ ಟ್ರಸ್ಟ್‌ನ ಅಧ್ಯಕ್ಷ, ಶಾಲಾ ಸಂಚಾಲಕ ಎಂ. ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಎ.ಕೋಟ್ಯಾನ್, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ ಎಂ., ಆರೆಸ್ಸೆಸ್ ಮಂಗಳೂರು ವಿಭಾಗ ಸಂಘ ಚಾಲಕ ಗೋಪಾಲ ಚೆಟ್ಟಿಯಾರ್ ಮುಖ್ಯ ಅತಿಥಿಗಳಾಗಿದರು.
ಎಂಆರ್‌ಪಿಎಲ್ ಎಂ.ಡಿ. ವೆಂಕಟೇಶ್
ಎಂ., ಕಟ್ಟಡದ ಎಂಜಿನಿಯರ್ ರಾಧಾಕೃಷ್ಣ ಬೋರ್ಕರ್ ಮತ್ತು ಗುತ್ತಿಗೆದಾರ ರಾಜೇಶ್ ಬಂಗೇರ ಅವರನ್ನು ಸಮ್ಮಾನಿಸಲಾಯಿತು. ಸೇವಾಂಜಲಿ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಕೇಶವ ಹೆಗ್ಡೆ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಿ. ಜಯರಾಮ ರಾವ್ ವಂದಿಸಿದರು.
ಅನುದಾನಿತ ಶಿಕ್ಷಕರನ್ನು ಒದಗಿಸಲು ಮೊರೆ
ಈ ಶಾಲೆಯ ಮುಖ್ಯಶಿಕ್ಷಕ ಜಯರಾಮ ರಾವ್ ನವೆಂಬರ್‌ನಲ್ಲಿ ನಿವೃತ್ತಿ ಹೊಂದಲ್ಲಿದ್ದು, ಅನುದಾನಿತ ಶಿಕ್ಷಕ ಹುದ್ದೆ ತೆರವಾದಂತಾಗುತ್ತದೆ. ಆಡಳಿತ ಮಂಡಳಿಯೇ ಎಲ್ಲ 8 ಶಿಕ್ಷಕರ ಹುದ್ದೆಗಳನ್ನು ರೂ. 1.5 ಲಕ್ಷ ವೆಚ್ಚದಲ್ಲಿ ನಿರ್ವಹಿಸುವ ಅನಿವಾರ್ಯತೆ ಇದೆ. ದಯವಿಟ್ಟು ಕನಿಷ್ಠ 4 ಮಂದಿ ಶಿಕ್ಷಕರನ್ನು ಯಾವುದೇ ಅನುದಾನಿತ ಶಾಲೆಗಳಿಂದ ಇಲ್ಲಿಗೆ ನಿಯೋಜಿಸಬೇಕು ಎಂದು ಇದೇ ಸಂದರ್ಭದಲ್ಲಿ ಶಾಲಾ ಸಂಚಾಲಕ, ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಪ್ರೊ| ಎಂ. ವಾಸುದೇವ ಭಟ್ ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.