ಅಧಿಕಾರ ಸ್ವೀಕರಿಸಿದ ಕೆಲ ಗಂಟೆಗಳ ಅವಧಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಗ್ರಾ.ಪಂ ಅಧ್ಯಕ್ಷೆ
Team Udayavani, Feb 13, 2021, 2:19 PM IST
ಉಳ್ಳಾಲ: ಗ್ರಾಮ ಪಂಚಾಯತ್ ಅಧ್ಯಕ್ಷೆ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಂಬ್ಲಮೊಗರಿನಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನ ವೇಳೆ ಅಂಬ್ಲಮೊಗರು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಲತಾ ಪರಮೇಶ್ವರ್ ಹಾಗೂ ಉಪಾಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ:ಪ್ರೇಮಿಗಳ ದಿನದಂದು ಅಹಿತಕರ ಘಟನೆಗೆ ಆಸ್ಪದವಾಗದಂತೆ ಅಗತ್ಯ ಕ್ರಮ: ಮಂಗಳೂರು ಡಿಸಿಪಿ
ತುಂಬು ಗರ್ಭಿಣಿಯಾಗಿದ್ದ ಲತಾ ಪರಮೇಶ್ವರ್ ಅವರಿಗೆ ವೈದ್ಯರು ಫೆ.20 ಕ್ಕೆ ಪ್ರಸವದ ದಿನಾಂಕ ಹೇಳಿದ್ದರು. ಆದರೆ ಅಧಿಕಾರ ವಹಿಸಿದ ಬೆನ್ನಲ್ಲೇ ಲತಾ ಅವರಿಗೆ ಪ್ರಸವದ ನೋವು ಕಾಣಿಸಿಕೊಂಡಿದ್ದು, ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಲತಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ: ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ, ವಿಜೇತರಿಗೆ ಪುರಸ್ಕಾರ ವಿತರಣೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.