ಟೆರೇಸ್‌ ಮೇಲೆಯೇ ಫಸಲು ಕೊಟ್ಟ ದ್ರಾಕ್ಷಿ; ಹೂಬಿಟ್ಟ ಸೇಬು !


Team Udayavani, Dec 19, 2018, 3:48 PM IST

19-december-16.gif

ಮಹಾನಗರ : ಮಂಗಳೂರಿನಂಥ ಬಿಸಿಲಿನ ತೀವ್ರತೆ ಜಾಸ್ತಿಯಿರುವ ಪ್ರದೇಶದಲ್ಲಿ ದ್ರಾಕ್ಷಿ, ಸೇಬು ಬೆಳೆಯುತ್ತಾರೆ ಅಂದರೆ ಆಶ್ಚರ್ಯವಾಗುತ್ತದೆ. ಹೀಗಿರು ವಾಗ, ಕೃಷಿ ಪ್ರೇಮಿಯೊಬ್ಬರು ತಮ್ಮ ಮನೆಯ ಟೆರೇಸ್‌ ಮೇಲೆಯೇ ದ್ರಾಕ್ಷಿ ಫಸಲು ಕೊಟ್ಟರೆ, ಸೇಬು ಗಿಡವೂ ಹೂಬಿಟ್ಟಿದೆ ಎಂದರೆ ನಂಬುವುದೇ ಅಸಾಧ್ಯ!

ಮಾರ್ನಮಿಕಟ್ಟೆಯ ಬ್ಲಾನಿ ಡಿ’ಸೋಜಾ ಅವರು ಈ ರೀತಿ ಟೆರೇಸ್‌ ಮೇಲೆ ಶೀತ ಪ್ರದೇಶದಲ್ಲಿ ಬೆಳೆಯುವ ದ್ರಾಕ್ಷಿ-ಸೇಬು ಕೃಷಿ ಮಾಡಿ ಯಶಸ್ಸು ಸಾಧಿಸುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಲು ಹೊರಟಿದ್ದಾರೆ. ಮಂಗಳೂರು ಹೊರ ವಲಯದ ಮಾರ್ನಮಿಕಟ್ಟೆಯ ಜೈಹಿಂದ್‌ ನಗರದ ಒಣಿಯೊಂದರಲ್ಲಿರುವ ಬ್ಲಾನಿ ಡಿ’ಸೋಜಾ ಅವರ ಮನೆಯ ಟೆರೇಸ್‌ನ ಪುಟ್ಟ ತೋಟ ವೈವಿಧ್ಯಮಯ ಕೃಷಿಗಳ ದೊಡ್ಡ ಪ್ರಯೋಗಶಾಲೆ. ಸುಮಾರು 1,200 ಚದರ ಅಡಿ ವಿಸ್ತೀರ್ಣದ ಟೆರೇಸ್‌ನಲ್ಲಿ ತರಕಾರಿ, ಹಣ್ಣಿನ ಗಿಡಗಳು ಸೇರಿದಂತೆ ದೇಶ ವಿದೇಶಗಳ ಸುಮಾರು 200ಕ್ಕೂ ಅಧಿಕ ಗಿಡಗಳಿವೆ. ತರಕಾರಿಗಳಾದ ತೊಂಡೆ, ಬೆಂಡೆ, ಬದನೆ, ಟೊಮೇಟೊ, ಕುಂಬಳಕಾಯಿ, ಚೀನಿಕಾಯಿ, ಪಡುವಲ ಕಾಯಿ, ಹಾಗಲಕಾಯಿ, ಮೆಣಸು, ಬಸಳೆ, ಸೋರೆಕಾಯಿ ಸಹಿತ ವಿವಿಧ ತರಕಾರಿ ಗಿಡಗಳು ಫಲಭರಿತವಾಗಿ ನಳ ನಳಿಸುತ್ತಿವೆ. ಮಾವಿನ ಮರ, ಹಲಸಿನ ಮರ ಫಲಭರಿತವಾಗಿವೆ. ಥೈಲ್ಯಾಂಡ್‌ ಬುಗರಿ, ಜುಮೈಕಾ ಮಿಲ್ಕ್ ಫ್ರುಟ್‌, ಇಸ್ರೇಲ್‌, ಚೀನಾದ ಕಿತ್ತಳೆ ಹಣ್ಣು, ಬಿಳಿ ಸಪೋಟ ಹಣ್ಣು, ಆಸ್ಟ್ರೇಲಿಯಾದ ಫ್ಯಾಶನ್‌ ಫ್ರುಟ್‌ ಮುಂತಾದ ವಿದೇಶಿ ಹಣ್ಣಿನ ಗಿಡಗಳು ಅಚ್ಚರಿ ಹುಟ್ಟಿಸುತ್ತಿವೆ. ಇದಲ್ಲದೆ ಧಾರೆಹುಳಿ, ಅಂಬಟೆಕಾಯಿ, ಲವಂಗ, ಕಾಳುಮೆಣಸು, ಪುದೀನ, ಶುಂಠಿ, ಅರಸಿನ ಗಿಡಗಳು ಗಮನ ಸೆಳೆಯುತ್ತವೆ. ಗ್ರೀನ್‌ ಆ್ಯಪಲ್‌, ಹಳದಿ ಆ್ಯಪಲ್‌, ದಾಳಿಂಬೆ, ಎಗ್‌ ಫ್ರುಟ್ಸ್‌ಗಳಿವೆ.

ಟೆರೇಸ್‌ನಲ್ಲಿ ಕೃಷಿ ಪ್ರಯೋಗ
ಸಾಮಾನ್ಯವಾಗಿ ಟೆರೇಸ್‌ ಕೃಷಿ ಎಂದರೆ ಸೊಪ್ಪು, ತರಕಾರಿ, ಹಣ್ಣಿನ ಗಿಡಗಳು ತುಂಬಿರುತ್ತವೆ. ಆದರೆ ಬ್ಲಾನಿ ಡಿ’ಸೋಜಾ ಅವರು ಮರ ಸ್ವರೂಪದ ಗಿಡಗಳನ್ನು ಕೂಡ ಟೆರೇಸ್‌ನಲ್ಲಿ ಬೆಳೆಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಚಟ್ಟಿಯಲ್ಲಿ ಬೆಳೆಸಿದ ಹಲಸಿನ ಗಿಡಗಳು ನೆಲದಲ್ಲಿ ಬೆಳೆಸಿದ ಹಲಸಿನ ಮರದ ರೀತಿಯಲ್ಲೇ ಹಣ್ಣು ನೀಡಿವೆ. ಚಟ್ಟಿಯಲ್ಲಿ ಮಾವಿನ ಗಿಡ ಬೆಳೆಸಿ ಹಣ್ಣುಗಳನ್ನು ಪಡೆದಿದ್ದಾರೆ. ಅವರ ಟೆರೇಸ್‌ನಲ್ಲಿ ಕಾಳಪಾಡಿ ಸಹಿತ ಸುಮಾರು 25 ಬಗೆಯ ಮಾವಿನ ಗಿಡಗಳಿವೆ. ದ್ರಾಕ್ಷಿ ಗಿಡಗಳನ್ನು ಬೆಳೆಸಿ ಹಣ್ಣು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಂಪು, ಬಿಳಿ ದ್ರಾಕ್ಷಿಗಳು ಅವರ ಟೆರೇಸ್‌ ಗಾರ್ಡನ್‌ನಲ್ಲಿವೆ. ಖರ್ಜೂರ ಗಿಡಗಳನ್ನು ಬೆಳೆಸಿದ್ದಾರೆ. ಇದೆಲ್ಲಕ್ಕಿಂತಲೂ ಇದೀಗ ಅವರು ಪ್ರಯೋಗಾರ್ಥವಾಗಿ ನೆಟ್ಟ ಆ್ಯಪಲ್‌ ಗಿಡ ಹೂವು ಬಿಟ್ಟಿದೆ. ಮಂಗಳೂರಿನಲ್ಲಿ ದ್ರಾಕ್ಷಿ ಬೆಳೆಸಿ ಯಶಸ್ವಿಯಾದ ದಾಖಲೆ ನನ್ನದಾಗಿತ್ತು. ಇದೀಗ ಆ್ಯಪಲ್‌ ಹಣ್ಣು ಪಡೆಯುವಲ್ಲಿ ಯಶಸ್ವಿಯಾದರೆ ಅದು ಕೂಡ ದಾಖಲೆಯಾಗುತ್ತದೆ ಎನ್ನುತ್ತಾರೆ ಬ್ಲೋನಿ ಡಿ’ಸೋಜಾ ಅವರು.

ಅವರ ಕೃಷಿ ಸಾಧನೆಯನ್ನು ಗಮನಿಸಿ ಕೇರಳ ಸರಕಾರ ಅವರನ್ನು ಸಮ್ಮಾನಿಸಿದೆ. ಟೆರೇಸ್‌ ಕೃಷಿಗೆ ಅವರು ಮನೆಯಲ್ಲಿ ಉತ್ಪತ್ತಿಯಾಗುವ ತಾಜ್ಯಗಳನ್ನೇ ಗೊಬ್ಬರವಾಗಿ ಬಳಸುತ್ತಾರೆ. ತರಕಾರಿ, ಕಿಚನ್‌ ತ್ಯಾಜ್ಯಗಳನ್ನು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡುತ್ತಾರೆ. ಬಳಿಕ ಸುಮಾರ 20 ಲೀಟರ್‌ ನೀರಿಗೆ ಹಾಕಿ ಕಲಸಿ ಗಿಡಗಳಿಗೆ ಹಾಕುತ್ತಾರೆ. ತರಕಾರಿ ಗಿಡಗಳ ಎಲೆಗಳನ್ನು ಬುಡಕ್ಕೆ ಹಾಕುತ್ತಾರೆ.

ವಿದ್ಯಾರ್ಥಿಗಳಿಗೆ ಪಾಠಶಾಲೆ
ಡಿ’ಸೋಜಾ ಅವರ ಟೆರೇಸ್‌ ತೋಟ ವಿದ್ಯಾರ್ಥಿಗಳಿಗೆ ಹಾಗೂ ಕೃಷಿ ಆಸಕ್ತರಿಗೆ ಕೃಷಿ ಪಾಠಶಾಲೆಯಾಗಿಯೂ ಆಕರ್ಷಣೆ ಪಡೆದಿದೆ. ಈ ವರ್ಷ ಸುಮಾರು 30ಕ್ಕೂ ಅಧಿಕ ಶಾಲಾ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.

ಪ್ರತಿಯೋರ್ವರು ಟೆರೇಸ್‌ನಲ್ಲಿ, ಮನೆಯ ಅಂಗಳದಲ್ಲಿ ಗಿಡಗಳನ್ನು ಬೆಳೆಸಿದರೆ ಆ ಪ್ರದೇಶ ಹಸಿರುಮಯವಾಗಿರುತ್ತದೆ. ಶುದ್ಧಗಾಳಿ ಲಭಿಸುತ್ತದೆ. ಹಾಗೂ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ನಮ್ಮ ವೈವಿಧ್ಯಮಯ ಗಿಡಮರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗುತ್ತದೆ’ ಎಂದು ವಿವರಿಸುತ್ತಾರೆ ಬ್ಲಾನಿ ಡಿ’ಸೋಜಾ.

ರಸ್ತೆಬದಿಗಳಲ್ಲಿ ಹಣ್ಣಿನ ಗಿಡ ಬೆಳೆಸಿ
‘ರಸ್ತೆಬದಿಗಳಲ್ಲಿ ಬದಿಗಳಲ್ಲಿ ಪ್ರಯೋಜನಕ್ಕೆ ಬಾರದ ಮರಗಳನ್ನು ನೆಡುವ ಬದಲು ಹಣ್ಣುಗಳ ಗಿಡಿ ಬೆಳೆಸಬೇಕು. ಮುಂದೆ ಅದು ಹಣ್ಣು ಬಿಟ್ಟಾಗ ಮನುಷ್ಯರಿಗೆ, ಪ್ರಾಣಿ, ಪಕ್ಷಿಗಳಿಗೆ ಆಹಾರವಾಗುತ್ತದೆ. ನಾವು ತಿಂದ ಹಣ್ಣುಗಳ ಬೀಜಗಳನ್ನು ಕಸಕ್ಕೆ ಹಾಕಬೇಡಿ. ಎಲ್ಲಿಯಾದರೂ ಖಾಲಿ ಜಾಗದಲ್ಲಿ ಹಾಕಿಬಿಡಿ. ಅವುಗಳಲ್ಲಿ ಎರಡು ಬೀಜವಾದರೂ ಮೊಳಕೆಯೊಡುತ್ತವೆ’ ಎಂದವರು ಸಲಹೆ ಮಾಡುತ್ತಾರೆ.

ಕೃಷಿ ಪ್ರೀತಿಯ ಸೆಳೆತ
ದುಬಾೖಯಲ್ಲಿ ಆಡಿಟರ್‌ ಆಗಿದ್ದ ಬ್ಲಾನಿ ಡಿ’ಸೋಜಾ ಅವರಲ್ಲಿದ್ದ ಕೃಷಿ ಪ್ರೀತಿಯ ಸಳೆತ ಟೆರೇಸ್‌ ಗಾರ್ಡನ್‌ಗೆ ಕಾರಣವಾಯಿತು. ಚಿಕ್ಕಂದಿನಿಂದಲೂ ನನಗೆ ಕೃಷಿ ಎಂದರೆ ಪ್ರೀತಿ. ರಸ್ತೆಯಲ್ಲಿ ಬಿದ್ದಿದ್ದ ಬೀಜಗಳನ್ನು ತಂದು ಮನೆಯಲ್ಲಿ ಹಾಕುತ್ತಿದ್ದೆ. ಅದು ಮೊಳಕೆಯೊಡೆದು ಬಂದಾಗ ನನಗೆ ಬಹಳ ಖುಷಿ. ಮುಂದೆ ಆಡಿಟರ್‌ ಆಗಿ ವಿದೇಶದಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿ ಊರಿಗೆ ಬಂದಾಗಲೂ ನನ್ನ ಮನಸ್ಸು ಸದಾ ಕೃಷಿಯತ್ತ ಸೆಳೆಯುತ್ತಿತ್ತು. ಇದು ಟೆರೇಸ್‌ ಕೃಷಿಗೆ ಮೂಲವಾಯಿತು.
– ಬ್ಲಾನಿ ಡಿ’ಸೋಜಾ
ತೋಟದ ಮಾಲಿಕ

‡ ಕೇಶವ ಕುಂದರ್‌

ಟಾಪ್ ನ್ಯೂಸ್

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

16-

Shelter: ಸೂರು ಹುಡುಕಲೆಂದು ಹೊರಟೆ

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.