ಶ್ರೀಕುರು ಅಂಬಾ ರಾಜರಾಜೇಶ್ವರೀ ಸಭಾಭವನ ನಿರ್ಮಾಣಕ್ಕೆ ಚಾಲನೆ


Team Udayavani, Apr 8, 2022, 12:11 PM IST

hotel

ಕೋಡಿಕಲ್‌: ಇಲ್ಲಿನ ಕಲ್ಬಾವಿಯಲ್ಲಿರುವ ಶ್ರೀ ಶ್ರೀಕುರು ಅಂಬಾ ರಾಜರಾಜೇಶ್ವರೀ ದೇವಸ್ಥಾನದ ಬಳಿ ಭಕ್ತರಿಗೆ ಅನ್ನದಾನಕ್ಕಾಗಿ ಅನ್ನಛತ್ರ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಕಟ್ಟಡದ ನೆಲ, ಅನ್ನಛತ್ರದ ಒಂದು ಹಂತದ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.

29 ಸಾವಿರ ಚದರ ಅಡಿ ವಿಸ್ತೀರ್ಣದ ಈ ಯೋಜನೆಯಲ್ಲಿ ನೆಲ ಸಹಿತ ಒಟ್ಟು ಮೂರು ಅಂತಸ್ತಿನ ಯೋಜನೆ ಇದಾಗಿದೆ. 8,200 ಚದರ ಅಡಿಯ ನೆಲ ಮಹಡಿಯಲ್ಲಿ ವಿಶಾಲ ಪಾರ್ಕಿಂಗ್‌, 8925 ಚದರ ಅಡಿ ವಿಸ್ತೀರ್ಣದ ಪ್ರಥಮ ಮಹಡಿಯಲ್ಲಿ ಅನ್ನಛತ್ರ, 8,800 ಚದರ ಅಡಿ ವಿಸ್ತೀರ್ಣದ ದ್ವಿತೀಯ ಮಹಡಿಯಲ್ಲಿ ಸಭಾಂಗಣ, ಮೂರನೇ ಮಹಡಿಯಲ್ಲಿ ಬಾಲ್ಕನಿ ನಿರ್ಮಾಣವಾಗಲಿದೆ. 2014ರಲ್ಲಿ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ, ನೆಲ, ಪ್ರಥಮ ಅಂತಸ್ತಿನ ಕಟ್ಟಡ ರಚನೆ ಪೂರ್ಣಗೊಂಡಿತ್ತು. ಕಾರಣಾಂತರಗಳಿಂದ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದೀಗ ಮತ್ತೆ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ. ಅನ್ನಛತ್ರ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದ್ದು, ಮಹಾದಾನವಾಗಿ ಎರಡು ಲಕ್ಷಕ್ಕಿಂತ ಅಧಿಕ ಮೊತ್ತ ದೇಣಿಗೆ ನೀಡಿದವರ ಭಾವಚಿತ್ರವನ್ನು ಹಾಕಲಾಗುವುದು. ಉಳಿದ ದಾನಿಗಳ ಹೆಸರು, ಮೊತ್ತವನ್ನು ಅಮೃತಶಿಲೆಯಲ್ಲಿ ಕೆತ್ತಲಾಗುವುದು.

ದೇವಾಲಯದ ವಿಶೇಷತೆ

1965ರಲ್ಲಿ ಕ್ಷೇತ್ರ ಗುದ್ದಲಿ ಪೂಜೆಯನ್ನು ಮಾಡಿ ನಿರ್ಮಾಣ ಮಾಡುವ ವೇಳೆ ಮೂರು ಅಡಿ ಆಳದಲ್ಲೇ ತೀರ್ಥ ಸಂಗ್ರಹಿಸುವ ಕಲ್ಲಿನ ಗೋಕರ್ಣವು ಪತ್ತೆಯಾಗಿತ್ತು. ಬಳಿಕ ಭಕ್ತರ ಸಹಕಾರದಿಂದ ಅಭೂತಪೂರ್ವ ದೇವಾಲಯ ನಿರ್ಮಾಣಗೊಂಡಿತು. 2004ರಲ್ಲಿ ಹಾಗೂ 2017ರಲ್ಲಿ ಬ್ರಹ್ಮಕಲಶೋತ್ಸವ ಆಗಿದೆ. ಈ ಕೇತ್ರದಲ್ಲಿ ವರ್ಷಾವಧಿ ಜಾತ್ರೆ, ವಿಶೇಷ ದಿನಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಮೇಷ ಸಂಕ್ರಮಣದಿಂದ ಆರಂಭಗೊಂಡು ಮೂರು ದಿನಗಳ ವಾರ್ಷಿಕ ಜಾತ್ರೆ ನಡೆಯಲಿದ್ದು, ಈ ಕ್ಷೇತ್ರದಲ್ಲಿ ರಾಜರಾಜೇಶ್ವರೀ, ಸುಬ್ರಹ್ಮಣ್ಯನ ಪ್ರಧಾನ ಆರಾಧನೆ ಮಾಡಲಾಗುತ್ತದೆ.

ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳು ಹುಣ್ಣಿಮೆಯಂದು ರಾತ್ರಿ ಶ್ರೀಚಕ್ರಪೂಜೆ, ಸಂಕಷ್ಟಹರ ಚತುರ್ಥಿಯಂದು ಸಂಕಷ್ಟಹರ ಪೂಜೆ, ಶುದ್ಧ ಪಂಚಮಿಯಂದು ನಾಗದೇವರಿಗೆ ತಂಬಿಲ ಸೇವೆ, ಶುದ್ಧ ಚೌತಿಯಂದು ಗಣಪತಿ ಹೋಮ, ಸಂಕ್ರಮಣದಂದು ರಾತ್ರಿ ರಕ್ತೇಶ್ವರೀ, ಚಾಮುಂಡಿ ಗುಳಿಗನಿಗೆ ಪರ್ವ ಸೇವೆ ನಡೆದುಕೊಂಡು ಬರುತ್ತಿದೆ.

ಸಾರ್ವಜನಿಕರ ಸಹಕಾರ ಮುಖ್ಯ

ದೇವಾಲಯದ ನಿರ್ಮಾಣದ ವೇಳೆ ದೇಗುಲಕ್ಕೆ ಸಂಬಂಧಪಟ್ಟ ವಸ್ತುಗಳು ದೊರೆತಿದ್ದವು. ಪ್ರಾಕೃತಿಕ ಏರುಪೇರುಗಳಿಂದ ದೇವರ ಗುಡಿ ನಾಶವಾಗಿರಬಹುದು. ತದನಂತರ ವಾಸುದೇವ ರಾಯರು ದೇವಾಲಯ ಸ್ಥಾಪಿಸಿದರೂ ಭಕ್ತರ ನೆರವಿನಿಂದ ದೇವತಾ ಪ್ರತಿಷ್ಠಾಪನೆ, ಪೂಜೆ ಪುನಸ್ಕಾರ, ಬ್ರಹ್ಮಕಲಶೋತ್ಸವ ನಡೆದಿರುತ್ತದೆ. ಇದೀಗ ಮಹತ್ವಾಕಾಂಕ್ಷೆಯ ಸಭಾಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದನ್ನು ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸಬೇಕು.

ನದೆಳ್ಳ ಸಾಂಬಶಿವರಾವ್‌, , ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಶ್ರೀಕುರು ಅಂಬಾ ರಾಜರಾಜೇಶ್ವರೀ ದೇವಸ್ಥಾನ

ಟಾಪ್ ನ್ಯೂಸ್

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.