ಹಳೆಯಂಗಡಿ: ಎಕ್ಸ್ ಪ್ರೆಸ್‌ ಬಸ್‌ ನಿಲುಗಡೆಗೆ ಆಗ್ರಹ


Team Udayavani, Sep 26, 2018, 12:57 PM IST

26-sepctember-8.gif

ಹಳೆಯಂಗಡಿ: ಉಡುಪಿಯಿಂದ ಮಂಗಳೂರಿಗೆ ತೆರಳುವ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳ ನಿಲುಗಡೆಗೆ ಕಳೆದ ಹಲವಾರು ವರ್ಷಗಳಿಂದ ಹಳೆಯಂಗಡಿ ಪರಿಸರದ ನಾಗರಿಕರು ವಿವಿಧ ಸಂಘ ಸಂಸ್ಥೆಗಳ ಮೂಲಕ ಹೋರಾಟ ನಡೆಸುತ್ತಿದ್ದು, ನಿರೀಕ್ಷಿತ ಯಶಸ್ಸು ಸಿಗದಿರುವುದರಿಂದ ಹೋರಾಟವನ್ನು ತೀವ್ರಗೊಳಿಸಲು ಚಿಂತನೆ ನಡೆಸುತ್ತಿದ್ದಾರೆ.

ಹಳೆಯಂಗಡಿಯಿಂದ ಮಂಗಳೂರಿಗೆ ತೆರಳುವ ಪ್ರಯಾಣಿಕರು ಕಿನ್ನಿಗೋಳಿ ಅಥವಾ ಉಡುಪಿಯಿಂದ ಸಂಚರಿಸುವ ಖಾಸಗಿ ಲೋಕಲ್‌ ಸರ್ವಿಸ್‌ ಬಸ್‌ ಹಾಗೂ ಕಾರ್ಕಳದ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಗಳನ್ನು ಹಾಗೂ ಉಡುಪಿಯತ್ತ ತೆರಳಲು ಸರ್ವಿಸ್‌ ಬಸ್‌ಗಳನ್ನು ಅವಲಂಬಿಸಬೇಕು. ಇದರೊಂದಿಗೆ ಕೆ.ಎಸ್‌.ಆರ್‌.ಟಿ.ಸಿ. ಯ ವೋಲ್ವೋ ಬಸ್‌ಗಳು ಸಹ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿದೆ.

ಪ್ರಯಾಣಿಕರಿಗೆ ಹೊರೆ
ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಸಹ ನೇರವಾಗಿ ಮಂಗಳೂರಿಗೆ ಅಥವಾ ಉಡುಪಿಗೆ ತೆರಳಲು ಲೋಕಲ್‌ ಸರ್ವಿಸ್‌ ಬಸ್‌ಗಳಲ್ಲಿ ತೆರಳಿದರೆ ಸಮಯದ ಹೊಂದಾಣಿಕೆಯಾಗುತ್ತಿಲ್ಲ. ಮಂಗಳೂರಿಗೆ ತೆರಳಲು ಎಕ್ಸ್‌ಪ್ರೆಸ್‌ ನಲ್ಲಿ ಸಂಚರಿಸಬೇಕಾದರೆ ಸುರತ್ಕಲ್‌, ಉಡುಪಿಗೆ ತೆರಳಬೇಕಾದರೆ ಮೂಲ್ಕಿಗೆ ಹೋಗಿ ಎಕ್ಸ್‌ಪ್ರೆಸ್‌ಗಳನ್ನು (ಕಾರ್ಕಳದ ಬಸ್‌ಗಳು ಪ್ರತೀ 15 ನಿಮಿಷಕ್ಕೊಂದು ಇರುವುದರಿಂದ) ಹತ್ತಬೇಕು. ನೇರವಾಗಿ ಹೋಗಲು ಎರಡೆರಡು ಬಸ್‌ಗಳನ್ನು ಆಶ್ರಯಿಸಬೇಕಾಗಿದೆ. ಇದರಿಂದ ಖರ್ಚು ಹೆಚ್ಚು, ಉಡುಪಿಯಿಂದ ಬರುವ ಹಾಗೂ ಹೋಗುವ ಎಕ್ಸ್‌ಪ್ರೆಸ್‌ ಬಸ್‌ ಗಳಿಗೆ ಹಳೆಯಂಗಡಿ ನಿಲುಗಡೆ ನೀಡಿದಲ್ಲಿ ಸಹಕಾರಿಯಾಗುತ್ತದೆ. ಈಗಿರುವ ಕೆ.ಎಸ್‌. ಆರ್‌.ಟಿ.ಸಿ. ಯ ವೋಲ್ವೋದಲ್ಲಿ ಹಳೆಯಂಗಡಿಯಲ್ಲಿ ನಿಲುಗಡೆಯಾದರೂ ಮೂಲ್ಕಿಯ ಟಿಕೇಟ್‌ ದರವನ್ನೇ ಪಡೆಯಲಾಗುತ್ತಿದೆ. ಇದು ಪ್ರಯಾಣಿಕರಿಗೆ ಹೊರೆಯಾಗಿದೆ.

ಸಮಯ ಹೊಂದಾಣಿಕೆ ಸಮಸ್ಯೆ
ಮಂಗಳೂರಿಗಾಗಲಿ ಅಥವಾ ಉಡುಪಿಗಾಗಲಿ ತೆರಳಲು ಸರ್ವಿಸ್‌ ಬಸ್‌ಗಳು ಉತ್ತಮ ಸೇವೆ ನೀಡುತ್ತಿವೆ. ಈಗಾಗಲೇ ಸ್ಥಳೀಯರ ಆಗ್ರಹದಿಂದ ಕಾರ್ಕಳದ ಎಕ್ಸ್‌ಪ್ರೆಸ್‌ ಬಸ್‌ಗಳಿಗೆ ನಿಲುಗಡೆ ನೀಡಲಾಗುತ್ತಿದೆ. ಉಡುಪಿಯ ಎಕ್ಸ್‌ಪ್ರೆಸ್‌ ಬಸ್‌ಗಳು ನಿಲುಗಡೆ ಕೊಟ್ಟಲ್ಲಿ ಸ್ಥಳೀಯ ಸರ್ವಿಸ್‌ ಬಸ್‌ಗಳಿಗೆ ಆರ್ಥಿಕ ಹೊಡೆತ ಬಿದ್ದಂತಾಗುತ್ತದೆ. ಇದರ ಜತೆಗೆ ಎಕ್ಸ್‌ಪ್ರೆಸ್‌ ಬಸ್‌ಗಳು ಅಲ್ಲಲ್ಲಿ ನಿಲುಗಡೆಯಾದಲ್ಲಿ ಸಮಯದ ಹೊಂದಾಣಿಕೆ ಸಮಸ್ಯೆಯಾಗುತ್ತದೆ. ಮಂಗಳೂರಿನ ಸಂಚಾರದ ಒತ್ತಡದಿಂದ ಈಗಾಗಲೇ ಹಲವು ಬಸ್‌ಗಳು ನಿರ್ದಿಷ್ಟ ಸಮಯಕ್ಕೆ ನಿಲ್ದಾಣಕ್ಕೆ ತಲುಪದೇ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇದರ ಜತೆಗೆ ಎಕ್ಸ್‌ಪ್ರೆಸ್‌ ಬಸ್‌ ಗಳು ಅಲ್ಲಲ್ಲಿ ನಿಂತಲ್ಲಿ ಸರ್ವಿಸ್‌ನ ಲೋಕಲ್‌ ಹಾಗೂ ಎಕ್ಸ್‌ಪ್ರೆಸ್‌ಗೆ ವ್ಯತ್ಯಾಸವಿರುವುದಿಲ್ಲ ಎನ್ನುತ್ತಾರೆ ಬಸ್‌ ಮಾಲಕರು.

ಸ್ಥಳೀಯರು ಹೋರಾಟಕ್ಕೆ ಮನ್ನಣೆ ಸಿಗಲಿ
ಹಳೆಯಂಗಡಿಯಲ್ಲಿ ಉಡುಪಿ ಎಕ್ಸ್‌ಪ್ರೆಸ್‌ ಬಸ್‌ಗಳು ನಿಲ್ಲಬೇಕು ಎಂದು ಕಳೆದ ಹಲವಾರು ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. ಸ್ಥಳೀಯರ ಆಗ್ರಹಕ್ಕೆ ಮನ್ನಣೆ ಸಿಗಬೇಕು. ಹಳೆಯಂಗಡಿ ಬೆಳೆಯುತ್ತಿರುವ ಪ್ರದೇಶವಾಗಿರುವುದರಿಂದ ಇಲ್ಲಿನ ಜನರು ಉಡುಪಿ ಹಾಗೂ ಮಂಗಳೂರಿಗೆ ನಿತ್ಯ ಪ್ರಯಾಣಿಕರಿದ್ದು, ಇವರು ತಮ್ಮ ಸಮಯವನ್ನು ಪ್ರಯಾಣದಲ್ಲೇ ವ್ಯರ್ಥ ಮಾಡುತ್ತಿದ್ದಾರೆ. ಸಂಘವು ಮುಂದಿನ ದಿನದಲ್ಲಿ ಹೋರಾಟವನ್ನು ತೀವ್ರಗೊಳಿಸಲಿದೆ.
– ಸುಧಾಕರ ಆರ್‌. ಅಮೀನ್‌,
ಅಧ್ಯಕ್ಷರು, ಶ್ರೀ ವಿದ್ಯಾವಿನಾಯಕ ಯುವಕ
ಮಂಡಲ ಹಳೆಯಂಗಡಿ

ಅಪಘಾತ ನಡೆಯುವ ಸಾಧ್ಯತೆ
ಉಡುಪಿಯಿಂದ ಮಂಗಳೂರಿಗೆ 1.10 ನಿಮಿಷದಲ್ಲಿ ತಲುಪಬೇಕಾದ ಸಮಯದ ಹೊಂದಾಣಿಕೆಗೆ ಈಗಾಗಲೇ ಕಷ್ಟವಾಗುತ್ತಿದೆ. ಉಡುಪಿ ಬಿಟ್ಟು, ಕಾಪು, ಉಚ್ಚಿಲ, ಪಡುಬಿದ್ರಿ, ಮೂಲ್ಕಿ, ಎನ್‌ಐಟಿಕೆ, ಸುರತ್ಕಲ್‌, ಕೂಳೂರು ಮಾತ್ರ ಅಧಿಕೃತವಾಗಿ ನಿಲುಗಡೆಗೆ ಅವಕಾಶ ಇದೆ. ಆದರೆ ಈಗ ಉದ್ಯಾವರ, ಕಟಪಾಡಿ, ಕೊಲ್ನಾಡಿ ನಲ್ಲಿ ಬಸ್‌ ನಿಲುಗಡೆ ಮಾಡಲಾಗುತ್ತಿದೆ. ಈಗ ಎರ್ಮಾಳ್‌ ಮತ್ತು ಹಳೆಯಂಗಡಿಯಲ್ಲಿ ನಿಲ್ಲಲು ಹೇಳಿದರೆ ಎಕ್ಸ್‌ಪ್ರೆಸ್‌ ಅಲ್ಲಲ್ಲಿ ನಿಂತಲ್ಲಿ ನಿರ್ದಿಷ್ಟವಾಗಿ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಅನಿವಾರ್ಯತೆಯಿಂದ ಅಪಘಾತವು ಹೆಚ್ಚಲು ಸಾಧ್ಯವಿದೆ. ಈಗಾಗಲೇ ನಗರದಲ್ಲಿ ಸಂಚಾರದ ಒತ್ತಡದಿಂದ ನಿಲ್ದಾಣಕ್ಕೆ ಸಂಚರಿಸಲು ಸಾಧ್ಯವಾಗುತ್ತಿಲ್ಲ.
– ದುರ್ಗಾಪ್ರಸಾದ್‌ ಹೆಗ್ಡೆ, ಅಧ್ಯಕ್ಷರು,
ಕಿನ್ನಿಗೋಳಿ ವಲಯ ಖಾಸಗಿ ಬಸ್‌ ಮಾಲೀಕರ ಸಂಘ

ಟಾಪ್ ನ್ಯೂಸ್

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌

1-horoscope

Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ

BGV-CM

UGC Draft: ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ: ಸಿಎಂ ಎಚ್ಚರಿಕೆ

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌

1-horoscope

Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.