ಸುದಿನ ಫಾಲೋಆಪ್: ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅರ್ಧಕ್ಕೆ ನಿಂತ ಕಾಮಗಾರಿ !
ಒಳಚರಂಡಿ ಅವ್ಯವಸ್ಥೆ; ಪ್ರಯಾಣಿಕರಿಗೆ ತೊಂದರೆ
Team Udayavani, Sep 8, 2020, 4:29 AM IST
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಎದುರು ಬಾಕಿಯಾಗಿರುವ ಕಾಮಗಾರಿ.
ಮಹಾನಗರ: ಮಂಗಳೂರು ಕೇಂದ್ರ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ನಾಲ್ಕು ತಿಂಗಳುಗಳಿಂದ ಕಾಂಕ್ರೀಟ್ ಕಾಮಗಾರಿ ಬಾಕಿಯಾಗಿದೆ. ಒಂದು ವೇಳೆ ಮುಂದಿನ ತಿಂಗಳಿನಿಂದ ರೈಲು ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ.
ರೈಲು ನಿಲ್ದಾಣದ ಮುಖ್ಯ ದ್ವಾರ, ವಾಹನಗಳ ನಿಲುಗಡೆಯ ಸ್ಥಳದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದಾಗಿ ಕಳೆದ ವರ್ಷ ಮಳೆಗಾಲದಲ್ಲಿ ಕೊಳಚೆ ನೀರು ತುಂಬಿ ಭಾರೀ ಸಮಸ್ಯೆಯಾಗಿತ್ತು. ಅನಂತರ ಮಳೆ ಮುಗಿದ ಬಳಿಕ ಒಳಚರಂಡಿ ಕಾಮಗಾರಿ ನಡೆಸಲಾಗಿತ್ತು. ಒಳಚರಂಡಿಯ ಪೈಪ್‌ಗ್ಳನ್ನು ಅಳವಡಿಸುವ ಕಾಮಗಾರಿ ಕಳೆದ ಬೇಸಗೆಯಲ್ಲೇ ಪೂರ್ಣಗೊಂಡಿದೆ. ಆದರೆ ಅಗೆದು ಹಾಕಿರುವ ಪ್ರಾಂಗಣವನ್ನು ಹಾಗೆಯೇ ಬಿಡಲಾಗಿದೆ. ಈ ಜಾಗ ಈಗ ಜಲ್ಲಿಕಲ್ಲು, ಮಣ್ಣು, ಗುಂಡಿಗಳಿಂದ ತುಂಬಿದೆ. ಸದ್ಯ ಬೆಂಗಳೂರು ರೈಲುಗಳ ಓಡಾಟ ಮಾತ್ರವೇ ಆರಂಭವಾಗಿದೆ. ಇತರ ರೈಲುಗಳ ಓಡಾಟ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಹಾಗಾಗಿ ಸದ್ಯಕ್ಕೆ ಇಲ್ಲಿ ಜನಸಂದಣಿ, ವಾಹನ ನಿಲುಗಡೆ ಇಲ್ಲ. ಆದರೆ, ರೈಲು ಸೇವೆ ಪೂರ್ಣವಾಗಿ ಪುನರಾರಂಭಗೊಂಡರೆ ನಿಲ್ದಾಣಕ್ಕೆ ಬಂದು ಹೋಗುವ ಜನರಿಗೆ ಹೆಚ್ಚಿನ ತೊಂದರೆ ಎದುರಾಗಲಿದೆ ಎಂದು ಟ್ಯಾಕ್ಸಿ, ಆಟೋ ಚಾಲಕರು ಕಾಳಜಿ ವ್ಯಕ್ತಪಡಿಸಿದ್ದಾರೆ.
ಅನುಮತಿ ಸಿಗದೆ ಬಾಕಿ
ಒಳಚರಂಡಿಗೆ ಸಂಬಂಧಿಸಿದ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಕಾಂಕ್ರೀಟ್ ಹಾಕುವ ಕಾಮಗಾರಿ ಬಾಕಿಯಾಗಿದೆ. ಇದಕ್ಕಾಗಿ ಇಲಾಖೆಯ ಅನುಮತಿ ಕೋರಲಾಗಿದ್ದು, ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ.
-ರವಿ ಮಿತ್ತಲ್, ಅಸಿಸ್ಟೆಂಟ್ ಡಿವಿಜನಲ್ ಎಂಜಿನಿಯರ್, ರೈಲ್ವೇ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.