Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
ಹಂಪನಕಟ್ಟೆ ಅಂಡರ್‌ಪಾಸ್ ನೈರ್ಮಲ್ಯದ ಕೊರತೆ
Team Udayavani, Nov 15, 2024, 1:24 PM IST
ಹಂಪನಕಟ್ಟೆ: ನಗರದ ಮಿನಿ ವಿಧಾನಸೌಧದ ಎದುರಿ ನಿಂದ ಪುರಭವನದ ಎದುರಿನ ರಸ್ತೆಯವರೆಗೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಗೊಂಡಿರುವ ಅಂಡರ್‌ಪಾಸ್‌ನ್ನು ಬಳಕೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಅಂಡರ್‌ಪಾಸ್‌ನ ಕೆಲವೆಡೆ ಸ್ವತ್ಛತೆಯ ಕೊರತೆಯೂ ಉಂಟಾಗಿದೆ.
ಮಿನಿವಿಧಾನಸೌಧದ ಕೆಳಭಾಗದಲ್ಲಿ ಅಂಡರ್‌ಪಾಸ್‌ನಲ್ಲಿ ಇತ್ತೀಚೆಗೆ ತೆರೆಯ ಲಾಗಿರುವ ತಿಂಡಿತಿನಸುಗಳ ಮಳಿಗೆಗಳು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಉದ್ಯಾನವನ ಕೂಡ ಆಹ್ಲಾದಕರ ಅನುಭವ ನೀಡುತ್ತಿದೆ. ಆದರೆ ಅಂಡರ್‌ಪಾಸ್‌ನ ಮತ್ತೂಂದು ಭಾಗದಲ್ಲಿ (ಪುರಭವನದ ಎದುರು ಭಾಗದ ರಸ್ತೆಯ ಬಳಿ) ಗುಟ್ಕಾ ಜಗಿದು ನೆಲ, ಮೆಟ್ಟಿಲುಗಳಿಗೆ ಉಗುಳಿರುವುದು, ಸಿಗರೇಟ್‌ಗಳನ್ನು ಸೇದಿ ಅದರ ತಂಡುಗಳನ್ನು, ಇತರೆ ಕಸಗಳನ್ನು ಎಸೆದಿರುವುದು ಕಂಡುಬರುತ್ತಿದೆ.
ಸಿಸಿ ಕೆಮರಾಗಳಿದ್ದರೂ ಎಲೆ ಅಡಿಕೆ, ಗುಟ್ಕಾ ಜಗಿದು ಉಗುಳುತ್ತಿರುವವರನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ. ಸಿಸಿ ಕೆಮರಾಗಳ ಎದುರಿನಲ್ಲಿಯೇ ಗಲೀಜು ಮಾಡಿರುವುದು ಕಂಡುಬರುತ್ತಿದೆ. ಇದೇ ರೀತಿ ಮುಂದುವರಿದರೆ ಅಂಡರ್‌ಪಾಸ್‌ನಲ್ಲಿ ನಡೆದಾಡುವುದಕ್ಕೂ ಅಸಹ್ಯ ಉಂಟಾಗುವ ಸಾಧ್ಯತೆ ಇದೆ. ಸಿಸಿ ಕೆಮರಾಗಳನ್ನು ಸುಸ್ಥಿತಿಯಲ್ಲಿಟ್ಟು ಗಲೀಜು ಮಾಡುವವರ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.
ನೂರಾರು ಮಂದಿಗೆ ಪ್ರಯೋಜನ
ಅಂಡರ್‌ಪಾಸ್‌ನಿಂದಾಗಿ ನಿತ್ಯ ನೂರಾರು ಮಂದಿಗೆ ಪ್ರಯೋಜನವಾಗಿದೆ. ರಸ್ತೆಯ ನಡುವೆ ಅಪಾಯಕಾರಿಯಾಗಿ ನಡೆದಾಡು ವುದನ್ನು ಇದು ತಪ್ಪಿಸುತ್ತದೆ. ವಾಹನಗಳ ಅಡ್ಡಿ ಆತಂಕವಿಲ್ಲದೆ ಪಾದಚಾರಿಗಳು ಮಿನಿವಿಧಾನ ಸೌಧ ಕಡೆಯಿಂದ ಲೇಡಿಗೋಷನ್ ಕಡೆಗೆ ನೇರವಾಗಿ ಸುರಕ್ಷಿತವಾಗಿ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿದೆ. ಇಲ್ಲಿರುವ ಸಣ್ಣ ಉದ್ಯಾನವನವೂ ಆಕರ್ಷಿಸುತ್ತಿದೆ. ಹಾಗಾಗಿ ಈ ಪರಿಸರದ ಸ್ವತ್ಛತೆ ಕಾಪಾಡುವುದಕ್ಕೂ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಸಾರ್ವಜನಿಕರು ಕೂಡ ಕಾಳಜಿ ತೋರಿಸುವುದು ಅಗತ್ಯ. ಸಾಧ್ಯವಾದರೆ ಅಂಡರ್‌ಪಾಸ್ ಪರಿಸರದ ಸ್ವತ್ಛತೆ, ಸುವ್ಯವಸ್ಥೆ ಕಾಪಾಡಲು ಭದ್ರತಾ ಸಿಬಂದಿಯನ್ನು ನಿಯೋಜಿಸುವುದು ಸೂಕ್ತ ಎನ್ನುತ್ತಾರೆ ಅಂಡರ್‌ಪಾಸ್ ಬಳಕೆದಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.