Hampanakatte: ಮಲ್ಟಿ ಲೆವೆಲ್ ಪಾರ್ಕಿಂಗ್‌ಗೆ ಮರುಜೀವ!
ಅಡೆತಡೆಗಳಿಂದ ನಿಂತು ಹೋಗಿದ್ದ ಕಾಮಗಾರಿ ಡಿಸೆಂಬರ್ ಮಧ್ಯಭಾಗದಲ್ಲಿ ಮರು ಆರಂಭ ನಿರೀಕ್ಷೆ
Team Udayavani, Dec 1, 2024, 1:25 PM IST
ಹಂಪನಕಟ್ಟ: ಹಲ ವು ಅಡೆ ತಡೆಗಳಿಂದ ಸ್ಥಗಿತವಾಗಿರುವ ಹಂಪನಕಟ್ಟೆ “ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್’ ಯೋಜನೆಯ ಕಾಮಗಾರಿ ಡಿಸೆಂಬರ್‌ನಿಂದ ಮರು ಆರಂಭವಾಗುವ ಸಾಧ್ಯತೆ ಇದೆ. ಗುತ್ತಿಗೆದಾರರ ನಿಧನದ ಕಾರಣದಿಂದ ಸ್ಥಗಿತಗೊಂಡ ಕಾಮಗಾರಿಯನ್ನು ಮುಂದುವರಿಸಲು ಅವರ ಪತ್ನಿ ಮುಂದಾಗಿದ್ದು, ಶೀಘ್ರ ಮರು ಆರಂಭದ ಭರವಸೆ ನೀಡಿದ್ದಾರೆ.
‘ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್’ಯೋಜನೆಗಾಗಿ ಹೊಂಡ ತೆಗೆದು ಪ್ರಾರಂಭಿಕ ಸಿದ್ದತೆಯಲ್ಲಿಯೇ ಬಾಕಿ ಉಳಿದಿರುವ ಯೋಜನಾ ಪ್ರದೇಶಕ್ಕೆ ಶನಿವಾರ ಮೇಯರ್ ಮನೋಜ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿಕೊಂಡ ಮೇಯರ್ ಅವರು ಯೋಜನೆ ಬಗ್ಗೆ ಸ್ಮಾರ್ಟ್‌ಸಿಟಿ ಅಧಿಕಾರಿ ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯರಿಗೆ ಸಮಸ್ಯೆ ಆಗದಂತೆ ಯೋಜನೆಯನ್ನು ತುರ್ತಾಗಿ ನಡೆಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಯರ್ ಅವರು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಮೇಯರ್ ಮನೋಜ್ ಕುಮಾರ್ ಅವರು ಶೇ.100ರಷ್ಟು ಹಣವನ್ನು ಗುತ್ತಿಗೆದಾರರೇ ಹಾಕಿ ಮಾಡುವಂತಹ ಯೋಜನೆ ಇದಾಗಿದೆ. ಒಂದೂವರೆ ಎಕರೆ ಜಾಗದಲ್ಲಿ ಸುಮಾರು 90 ಕೋ.ರೂ. ವೆಚ್ಚದಲ್ಲಿ ಆಗುವಂತಹ ಪಿಪಿಪಿ ಮಾದರಿಯ ದೊಡ್ಡ ಯೋಜನೆ ಇದು. ಅದನ್ನು ತೆಗೆದುಕೊಂಡ ಗುತ್ತಿಗೆದಾರರು ಕೆಲಸ ಆರಂಭಿಸಿದ್ದರು. ಆದರೆ ವಿವಿಧ ಕಾರಣದಿಂದ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಗುತ್ತಿಗೆದಾರರ ಪತ್ನಿ ಅನುರಾಧಾ ಅವರು ಯೋಜನೆ ಮುಂದುವರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಡಿಸೆಂಬರ್ ಮಧ್ಯಭಾಗದಿಂದ ಕಾಮಗಾರಿ ಆರಂಭಿಸುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.
ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷರಾದ ವೀಣಾಮಂಗಳ, ಮನಪಾ ಸ್ಥಳೀಯ ಸದಸ್ಯೆ-ಮಾಜಿ ಉಪಮೇಯರ್ ಪೂರ್ಣಿಮಾ, ಸ್ಮಾರ್ಟ್‌ಸಿಟಿ ಅಧಿಕಾರಿ ಅರುಣ್ ಪ್ರಭ, ಗುತ್ತಿಗೆದಾರರಾದ ಅನುರಾಧಾ ಪ್ರಭು ಉಪಸ್ಥಿತರಿದ್ದರು.
ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಮೇಯರ್ ಸೂಚನೆ
ಕಾಮಗಾರಿ ನಡೆಸುವ ಬದಿಯಲ್ಲಿ ಕಾಲುದಾರಿಯಾಗಿ ಬಳಕೆಯಲ್ಲಿರುವ ಸಣ್ಣ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗುತ್ತಿದೆ. ನಿತ್ಯ ನೂರಾರು ಮಂದಿ ಈ ರಸ್ತೆಯನ್ನು ಆಶ್ರಯಿಸಿದ್ದಾರೆ. ಅದನ್ನು ಡಾಮರು ಕಾಮ ಗಾ ರಿ ಮಾಡಬೇಕಿದೆ ಎಂದು ಸ್ಥಳೀಯರು ಮೇಯರ್ ಮನೋಜ್ ಕುಮಾರ್ ಅವರಲ್ಲಿ ಮನವಿ ಮಾಡಿದರು. ತಾತ್ಕಾಲಿಕ ರಸ್ತೆ ಡಾಮರು ನಡೆಸುವಂತೆ ಮೇಯರ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
‘ಸುದಿನ’ ಅಭಿಯಾನ ವರದಿ ಪ್ರತಿಧ್ವನಿ
‘ಮಲ್ಟಿಲೆವೆಲ್ ಪಾರ್ಕಿಂಗ್ ಇನ್ನೆಷ್ಟು ವರ್ಷ ಬೇಕು?’ ಎಂಬ ವಿಶೇಷ ಸರಣಿ ವರದಿಯನ್ನು ‘ಉದಯವಾಣಿ ಸುದಿನ’ ಸೆ.18ರಿಂದ ಪ್ರಕಟಿಸಿತ್ತು. ಯೋಜನೆ ಬಾಕಿಯಾಗಿದ್ದು, ಮುಂದೇನು? ಎಂಬ ವಿಷಯಗಳ ಬಗ್ಗೆ ವರದಿ ಮಾಡಿತ್ತು. ಮೇಯರ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ‘ಸುದಿನ’ ವರದಿಯನ್ನು ಗಮನಕ್ಕೆ ತಂದರು. ಉದಯವಾಣಿಯಲ್ಲಿ ಇಲ್ಲಿನ ಎಲ್ಲ ಸಮಸ್ಯೆಗಳನ್ನು ಫೋಟೋ ಸಹಿತ ಬರೆದಿದ್ದಾರೆ. ಕೇವಲ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದರೆ ಸಾಲದು. ಬೇಗನೆ ಕೆಲಸ ಆರಂಭವಾಗುವಂತಾಗಲಿ ಎಂದು ಅವರು ಮೇಯರ್ ಅವರನ್ನು ಆಗ್ರ ಹಿಸಿದರು.
ಯೋಜನೆ ವಿಳಂಬ ಆಗಿದ್ದು ಯಾಕೆ?
‘ಪಿಪಿಪಿ ಮಾದರಿಯಲ್ಲಿ ಅನುಷ್ಠಾನಿಸಬೇಕಾದ ಯೋಜನೆ ಇದು. ಅಂದರೆ 91 ಕೋ.ರೂ.ಗಳ ಮೊತ್ತವನ್ನು ಗುತ್ತಿಗೆದಾರರೇ ಖರ್ಚು ಮಾಡಿ ಕಟ್ಟಡ ನಿರ್ಮಿಸಬೇಕು. ಈಗಾಗಲೇ ಇಲ್ಲಿ ಅಡಿಪಾಯ, ರಿಟೈನಿಂಗ್ ವಾಲ್ ಸಹಿತ ಸುಮಾರು 15 ಕೋ.ರೂ.ಗಳ ಕಾಮಗಾರಿಯನ್ನು ಗುತ್ತಿಗೆದಾರರು ಮಾಡಿದ್ದಾರೆ. ಈ ವೇಳೆ ತಾಂತ್ರಿಕ ಕೆಲವು ಸವಾಲು, ಮಳೆಯ ಕಾರಣ ಹಾಗೂ ಗುತ್ತಿಗೆದಾರರಾದ ರಾಕೇಶ್ ಅವರು ಅನಾರೋಗ್ಯದಿಂದ ನಿಧನ ಹೊಂದಿದ ಕಾರಣದಿಂದ ಕಾಮಗಾರಿ ಮುಂದುವರಿಯಲು ಸಾಧ್ಯವಾಗಿಲ್ಲ. ಟೆಂಡರ್ ಮತ್ತೆ ಬದಲಾವಣೆ ಮಾಡಿದರೆ ಯೋಜನೆ ಮತ್ತೆ ಆರಂಭಕ್ಕೆ ಇನ್ನೂ ಕೆಲವು ವರ್ಷ ಬೇಕಾಗಬಹುದು. ಇದೀಗ ರಾಕೇಶ್ ಅವರ ಪತ್ನಿ ಅನುರಾಧಾ ಪ್ರಭು ಅವರು ಕಾಮಗಾರಿ ಮುಂದುವರಿಸಲು ಉದ್ದೇಶಿಸಿದ್ದಾರೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.