Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

ವಾಹನಗಳ ಪಾರ್ಕಿಂಗ್‌ ಕಿರಿಕಿರಿ ಪರಿಹಾರಕ್ಕೆ ಇನ್ನೆಷ್ಟು ವರ್ಷ ಕಾಯಬೇಕು?

Team Udayavani, Sep 20, 2024, 2:37 PM IST

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

ಹಂಪನಕಟ್ಟ: ನಗರದಲ್ಲಿ ಸೂಕ್ತವಾದ ಪಾರ್ಕಿಂಗ್‌ ಜಾಗ ಇಲ್ಲದ ಕಾರಣ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಪರಿಪಾಠ ಬೆಳೆಯುತ್ತಿದ್ದು, ಪಾರ್ಕಿಂಗ್‌ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಲೇ ಇದೆ; ಜತೆಗೆ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯೂ ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಅದರಲ್ಲಿಯೂ ನಗರದ ಹೃದಯ ಭಾಗ ಸ್ಟೇಟ್‌ಬ್ಯಾಂಕ್‌, ಹಂಪನ ಕಟ್ಟ ವ್ಯಾಪ್ತಿ ಪ್ರದೇಶದಲ್ಲಿ ಪಾರ್ಕಿಂಗ್‌ ಸಂಕಟ ಹೇಳತೀರದಾಗಿದೆ!

ಪ್ರಮುಖ ರಸ್ತೆಗಳು ಅಗಲೀಕರಣ ಗೊಂಡರೂ ಸೂಕ್ತವಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜ ನಿಕರು ರಸ್ತೆಗಳಲ್ಲಿಯೇ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡುವ ಅನಿವಾರ್ಯ ಸ್ಥಿತಿ ಇದೆ. ಮಾತ್ರ ವಲ್ಲದೆ, ನಗರದ ಬಹುತೇಕ ಬಹು ಮಹಡಿ ಕಟ್ಟಡಗಳು, ಅಂಗಡಿಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ‘ನೋ ಪಾರ್ಕಿಂಗ್‌’ ಸ್ಥಳದಲ್ಲಿಯೇ ಖಾಸಗಿ ಕಾರು, ದ್ವಿಚಕ್ರ ವಾಹನ ಗಳನ್ನು ಪಾರ್ಕ್‌ ಮಾಡುವುದು ಮುಂದುವರಿಯುತ್ತಿದೆ.

ಇಂತಹ ಸಂಕಷ್ಟಗಳಿಗೆ ಉತ್ತರ ನೀಡುವ ನೆಲೆಯಲ್ಲಿ ಹಂಪನಕಟ್ಟದಲ್ಲಿ ‘ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌’ ಯೋಜನೆಯನ್ನು ಉದ್ದೇಶಿಸಲಾ ಗಿತ್ತು. ಆದರೆ, ಹಾಗೂ-ಹೀಗೂ ದಿನಕಳೆ ಯುತ್ತ ಹೋದರೂ ಯೋಜನೆ ಮಾತ್ರ ಒಂದು ಹಂತವನ್ನು ಮಾತ್ರ ಕಂಡಿದೆ; ಮತ್ತೆ ಮುಂದುವರಿಯಲು ತೊಡಕಾಗಿದೆ. ಇನ್ನಷ್ಟೆ ಇದಕ್ಕೆ ವೇಗ ನೀಡಬೇಕಿದೆ. ಈ ಮೂಲಕ ನಗರದ ಪಾರ್ಕಿಂಗ್‌ ಸಂಕಟಗಳಿಗೆ ಉತ್ತರ ನೀಡುವ ಅಗತ್ಯವಿದೆ.

  • 600ಕ್ಕೂ ಅಧಿಕ ವಾಹನ ಮಲ್ಟಿಲೆವೆಲ್‌ ಕಾರ್‌ .ಪಾರ್ಕಿಂಗ್‌ನಲ್ಲಿ  ಅವಖಾಶ
  • 2.10ಎಕರೆ ಪ್ರದೇಶ ಕಾಯ್ದಿರಿಸಿದ ಪ್ರಸ್ತಾವಿತ ಜಾಗ

ಬಹು ಅಂತಸ್ತು ಪಾರ್ಕಿಂಗ್‌ ಯಾಕೆ ಅಗತ್ಯ?
ಮಂಗಳೂರು ನಗರದಲ್ಲಿ ಸ್ಥಳಾವಕಾಶ ಕೊರತೆ ತೀವ್ರವಾಗಿದೆ. ಇದರಿಂದಾಗಿ ಪಾರ್ಕಿಂಗ್‌ಗೆ ವಿಶಾಲವಾದ ಜಾಗ ಹೊಂದಿಸಿಕೊಳ್ಳುವುದು ಕಷ್ಟ ಸಾಧ್ಯ. ಜಾಗದ ಬೆಲೆ ವಿಪರೀತವಾಗಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆಯೂ ಕ್ಷಿಷ್ಟಕರ. ಈ ಹಿನ್ನಲೆಯಲ್ಲಿ ಲಭ್ಯ ಜಾಗಗಳಲ್ಲೇ ಅತೀ ಹೆಚ್ಚು ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡುವುದು ಅನಿವಾರ್ಯ. ಈ ಹಿನ್ನಲೆಯಲ್ಲಿ ಈಗಾಗಲೇ ದೇಶದ ಇತರ ಮಹಾನಗರಗಳಲ್ಲಿ ಇರುವ ಬಹು ಅಂತಸ್ತು ವಾಹನ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಂಗಳೂರಿನಲ್ಲೂ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಿರುವ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಇನ್ನಾದರೂ ಜೀವ ಸ್ವರೂಪ ಪಡೆಯಬೇಕಿದೆ.

ಹೊಸ ವಾಹನಗಳ ಏರಿಕೆ!
ಒಂದೆಡೆ ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಏರಿಕೆಯಾಗುತ್ತಿದ್ದಂತೆ ನಗರದಲ್ಲಿ ಹೊಸ ವಾಹನಗಳು ರಸ್ತೆಗಿಳಿಯುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಪ್ರತೀ ತಿಂಗಳು ನಗರದಲ್ಲಿ 3 ಸಾವಿರಕ್ಕೂ ಅಧಿಕ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಹೀಗಾಗಿ ಭವಿಷ್ಯದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೇ ನಗರಕ್ಕೆ ಬಹುದೊಡ್ಡ ಸವಾಲಾಗಲಿದೆ.

ಅಂದಹಾಗೆ, ಮಂಗಳೂರಿನಲ್ಲಿ ಪ್ರತೀ ತಿಂಗಳು ಸುಮಾರು 4 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಅಂತೂ, 1 ವರ್ಷದಲ್ಲಿ ನೋಂದಣಿಯಾದ ವಾಹನಗಳ ಪೈಕಿ 15 ಸಾವಿರದಷ್ಟು ದ್ವಿಚಕ್ರ ವಾಹನಗಳು, 6 ಸಾವಿರದಷ್ಟು ಕಾರುಗಳು ಪ್ರತೀ ವರ್ಷ ಸೇರುತ್ತಲೇ ಇದೆ.

ಏನಿದು ಸಮಸ್ಯೆ?
ಮಂಗಳೂರು ನಗರವು ಯೋಜಿತವಾಗಿ ಬೆಳವಣಿಗೆ ಹೊಂದಿಲ್ಲ ಎನ್ನುವುದು ಎಲ್ಲರೂ ಒಪ್ಪುವ ಮಾತು. ಇದಕ್ಕೆ ಕಾರಣ ಹಲವು. ಒಂದೊಮ್ಮೆ ಅಗಲ ಕಿರಿದಾಗಿದ್ದು, ಕಿಷ್ಕಿಂಧೆಯಂತಿದ್ದ ನಗರದ ಪ್ರಮುಖ ರಸ್ತೆಗಳ ಪೈಕಿ ಕೆಲವು ರಸ್ತೆಗಳು ಈಗಾಗಲೇ ಅಗಲೀಕರಣಗೊಂಡಿವೆ; ಕೆಲವು ರಸ್ತೆಗಳು ಈಗ ವಿಸ್ತರಣೆ ಆಗುತ್ತಿವೆ. ಆದರೆ ಈಗಾಗಲೇ ಅಗಲೀಕರಣಗೊಂಡ ರಸ್ತೆಗಳಲ್ಲಿಯೂ ಸಂಚಾರ ಸಮಸ್ಯೆ ಬಗೆಹರಿದಿಲ್ಲ. ವಾಹನಗಳ ಸಂಖ್ಯೆ ಹೆಚ್ಚಳ ಆಗಿರುವುದು ಮುಖ್ಯ ಕಾರಣ. ಬಹು ಮಹಡಿ ವಾಣಜ್ಯ ಮತ್ತು ವಸತಿ ಕಟ್ಟಡಗಳಲ್ಲಿ ನಿಯಮಗಳ ಪ್ರಕಾರ ವಾಹನ ಪಾರ್ಕಿಂಗ್‌ಗೆ ಮೀಸಲಾದ ಜಾಗದಲ್ಲಿ ವ್ಯಾಪಾರ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿರುವುದು, ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇತರ ಕಾರಣಗಳು. ನಗರದಲ್ಲಿ  ಈಗ ವ್ಯಾಪಾರ- ವಾಣಿಜ್ಯ ಸಂಕೀರ್ಣಗಳು, ವಸತಿ ಸಮುಚ್ಚಯಗಳು, ವಿವಿಧ ಸಂಘ, ಸಂಸ್ಥೆಗಳ ಕಚೇರಿಗಳು, ಸರಕಾರಿ ಇಲಾಖೆಗಳ ಕಚೇರಿ ಕಟ್ಟಡಗಳ ಸಂಖ್ಯೆ ಜಾಸ್ತಿಯಾಗಿದೆ. ಆದರೆ ರಸ್ತೆಗಳ ಸಂಖ್ಯೆ ಹೆಚ್ಚಿಲ್ಲ. ಕೆಲವು ರಸ್ತೆಗಳ ವಿಸ್ತರಣೆ ಆಗಿದ್ದರೂ ಅದರ ಪ್ರಯೋಜನ ಸಂಪೂರ್ಣವಾಗಿ ಸಂಚಾರ ವ್ಯವಸ್ಥೆಗೆ ಲಭಿಸಿಲ್ಲ. ರಸ್ತೆಯ ಬದಿಯಲ್ಲಿ ವಾಹನಗಳನ್ನು ಸಾಲಾಗಿ ನಿಲ್ಲಿಸಲಾಗುತ್ತಿದ್ದು, ವಾಹನ ಪಾರ್ಕಿಂಗ್‌ಗಾಗಿಯೇ ರಸ್ತೆಯನ್ನು ಅಭಿವೃದ್ಧಿ  ಮಾಡಿ ಕೊಟ್ಟಂತೆ ಕಂಡು ಬರುತ್ತದೆ!

- ದಿನೇಶ್‌ ಇರಾ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.