ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು: ರವಿಚಂದ್ರ
Team Udayavani, Jul 15, 2018, 12:37 PM IST
ಸುಂಕದಕಟ್ಟೆ: ಯುವವಾಹಿನಿ ಬಜಪೆ ಘಟಕ ಇದರ ಆಶ್ರಯದಲ್ಲಿ ಮಂಗಳೂರು ಸೆಝ್ ನಿಯಮಿತ ಇದರ ಸಹಯೋಗದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ, ಡಾ| ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೆಬಲ್ ಟ್ರಸ್ಟ್ ಸೆಂಚೂರಿ ಗ್ರೂಪ್ಸ್, ಬೆಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ , ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟೆ ಇದರ ಸಹಕಾರದೊಂದಿಗೆ ಕಣ್ಣಿನ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ಶನಿವಾರದಂದು ಸುಂಕದಕಟ್ಟೆ ದೇವಸ್ಥಾನದ ಸಭಾಗೃಹದಲ್ಲಿ ಜರಗಿತು.
ಶಿಬಿರವನ್ನು ಮಂಗಳೂರು ಸೆಝ್ ನ ಮುಖ್ಯ ನಿರ್ವಹಣಾಧಿಕಾರಿ ವಿ. ಸೂರ್ಯನಾರಾಯಣ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಸಲಹೆಗಾರ ರವಿಚಂದ್ರಯುವವಾಹಿನಿ ಘಟಕವು ಇಂತಹ ಶಿಬಿರವನ್ನು ಇತರರ ಸಹಯೋಗದೊಂದಿಗೆ ಅಲ್ಲಲ್ಲಿ ಹಮ್ಮಿಕೊಳ್ಳುವುದರ ಮೂಲಕ ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸುತ್ತದೆ ಎಂದರು.
ವೇದಿಕೆಯಲ್ಲಿ ಸುಂಕದಕಟ್ಟೆ ದೇವಳದ ಆಡಳಿತ ಮೊಕ್ತೇಸರ ನಾರಾಯಣ ಪೂಜಾರಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ಡಾ| ಗಿರೀಶ್, ನೇತ್ರತಜ್ಞೆ ಡಾ| ಪ್ರಿಯಾ, ಬಜಪೆ ರೋಟರಿ ಕ್ಲಬ್‌ನ ಅಧ್ಯಕ್ಷ ವರಪ್ರಸಾದ್ ಶೆಟ್ಟಿ,ವಕೀಲ ವಿನೋಧರ ಪೂಜಾರಿ, ಉದ್ಯಮಿ ದೀಪಕ್ ಕೋಟ್ಯಾನ್, ಯುವವಾಹಿನಿ ಬಜಪೆ ಘಟಕದ ನಿರ್ದೇಶಕ ಮಹೇಶ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷ ದೇವರಾಜ್ ವಹಿಸಿದ್ದರು. ವಿಶ್ವನಾಥ ಪೂಜಾರಿ ರೆಂಜಾಳ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.