ಬೇಸಗೆಯಲ್ಲಿ ರೋಗಗಳು ಹೆಚ್ಚಾಗುವ ಭೀತಿ: ಆರೋಗ್ಯ ರಕ್ಷಣೆಗೆ ಜಿಲ್ಲಾಧಿಕಾರಿ ಸೂಚನೆ
Team Udayavani, Mar 7, 2023, 6:36 AM IST
ಮಂಗಳೂರು: ಬೇಸಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುವ ಕಾರಣ ಉಪಾಹಾರ ಗೃಹಗಳು, ಕ್ಯಾಂಟೀನ್‌ಗಳು, ಹೊಟೇಲ್‌ಗಳು, ಬಾರ್‌ಗಳು, ಬೇಕರಿಗಳು ಮುಂತಾದ ಸಿದ್ಧಪಡಿಸಿದ ಆಹಾರ ಮಾರಾಟ ಮಾಡುವ ಆಹಾರ ಉದ್ಯಮಿಗಳು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕೆಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಸಲಹೆ ನೀಡಿದ್ದಾರೆ.
ಆಹಾರೋದ್ಯಮಿಗಳು ನೀರಿನ ಮೂಲಗಳನ್ನು ಶುಚಿಗೊಳಿಸಬೇಕು. ಸೂಕ್ತ ತಾಪಮಾನದಲ್ಲಿ ಆಹಾರವನ್ನು ಸಂಗ್ರಹಿಸಬೇಕು. ಕುಡಿಯಲು ಶುದ್ಧೀಕರಿಸಿದ ಹಾಗೂ ಬಿಸಿನೀರು ಪೂರೈಕೆ ಮಾಡಬೇಕು. ಹೊಟೇಲ್‌ಗಳಲ್ಲಿ ಆಹಾರ ಅಥವಾ ಅಡುಗೆ ತಯಾರಕರು ವೈಯಕ್ತಿಕ ಶುಚಿತ್ವ ಖಚಿತ ಪಡಿಸಿಕೊಳ್ಳಬೇಕು. ಅನಾ ರೋಗ್ಯದ ವೇಳೆ ಆಹಾರವನ್ನು ತಯಾರಿಸುವ, ಸರಬರಾಜು ಮಾಡುವ ಮತ್ತು ಬಡಿಸುವ ಕಾರ್ಯ ಮಾಡಬಾರದು. ಉಪಾಹಾರ ಗೃಹಗಳು, ಕ್ಯಾಂಟೀನ್, ಹೊಟೇಲ್, ಬಾರ್, ಬೇಕರಿಗಳಲ್ಲಿ ಅಡುಗೆಮನೆಗೆ ಪ್ರವೇಶಿಸುವ ಮೊದಲು ಏಪ್ರನ್, ಕೈಗವಸುಗಳು ಮತ್ತು ಹೆಡ್‌ಕವರ್ ಧರಿಸಬೇಕು. ಆಹಾರ ತಯಾರಿಸುವ ಪ್ರದೇಶದಲ್ಲಿ ಸ್ವತ್ಛತೆ ಕಾಪಾಡಬೇಕು. ಮುಚ್ಚಿದ ಕಸದ ತೊಟ್ಟಿಗಳನ್ನು ಒದಗಿಸಬೇಕು.
ತರಕಾರಿಗಳು ಮತ್ತು ಹಣ್ಣು ಗಳನ್ನು ವ್ಯವಸ್ಥಿತ ಹಾಗೂ ಶುಚಿ ಯಾಗಿ ಸಂಗ್ರಹಿಸಿಡಬೇಕು. ಮಂಜುಗಡ್ಡೆಗಳನ್ನು ತಯಾರಿಸುವ ಹಾಗೂ ಸರಬರಾಜು ಮಾಡುವ ಸಂಸ್ಥೆಯು ಶುದ್ಧ ನಿರಿನ ಬಳಕೆಯನ್ನು ಖಾತ್ರಿಪಡಿಸಿ ಕೊಳ್ಳಬೇಕು. ಹಸಿ ಮೀನು, ಮಾಂಸ ಮಾರಾಟಗಾರರು ತಾಜಾತನವನ್ನು ಖಚಿತಪಡಿಸಿಕೊಳ್ಳಬೇಕು. ಬೀದಿ ಬದಿ ಆಹಾರ ಪದಾರ್ಥಗಳ ಶುದ್ಧತೆ, ಶುಚಿತ್ವವನ್ನು ಖಾತರಿ ಪಡಿಸಬೇಕು. ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.