ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆ; ಮನೆಗೆ ನುಗ್ಗಿದ ನೀರು, ಅಲ್ಲಲ್ಲಿ ಹಾನಿ
ಇಂದು-ನಾಳೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಗೆ ಮುನ್ನೆಚ್ಚರಿಕೆ ಇರಲಿ
Team Udayavani, Aug 7, 2019, 5:00 AM IST
ಉಳ್ಳಾಲ: ಉಳ್ಳಾಲ, ಮುಡಿಪು ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಗಾಳಿ ಸಹಿತ ಮಳೆಯಿಂದಾಗಿ ಕೃತಕ ನೆರೆ ಸೃಷಿಯಾಗಿ ಮನೆ ಸಹಿತ ಅಂಗಡಿ ಮುಗ್ಗಟ್ಟುಗಳಿಗೆ ಹಾನಿಯಾಗಿದೆ. ಅಲ್ಲದೇ ತಡೆಗೋಡೆ, ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ.
ಕೊಣಾಜೆಯ ದಾಸರಮೂಲೆ ಬಳಿ ಸಿಪ್ರಿಯನ್ ಡಿ’ಸೋಜಾ ಅವರ ಮನೆ ಮೇಲಿನ ಆವರಣಗೋಡೆ ಕುಸಿದು ಬಿದ್ದು ಮನೆಗೆ ಹಾನಿಯಾದರೆ ಪಜೀರಿನ ಕಂಬಳಪದವು ಬಳಿ ಗ್ರೇಷನ್ ಕುಟಿನೋ ಅವರ ಮನೆಗೆ ಹಿಂಬದಿಯ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ.
ಮುಡಿಪುವಿನಲ್ಲಿ ಕೃತಕ ನೆರೆ
ಮುಡಿಪುವಿನಲ್ಲಿ ಕೃತಕ ನೆರೆಯಾಗಿದ್ದು ಸಾಂಬಾರ್‌ತೋಟ ಮಸೀದಿ ಬಳಿ ನಿವಾಸಿ ಎಸ್.ಕೆ. ಖಾದರ್ ಅವರ ಮನೆಗೆ ತಡರಾತ್ರಿ ನೀರು ನುಗ್ಗಿ ಮನೆಮಂದಿ ಆತಂಕದಲ್ಲಿ ರಾತ್ರಿ ಕಳೆಯುವಂತಾಯಿತು. ಮುಡಿಪಿನ್ನಾರ್ ದೇವಸ್ಥಾನ ಬಳಿಯೂ ಕೃತಕ ನೆರೆಯಿಂದ ಪ್ರವೀಣ್ ಡಿ’ಸೋಜಾ ಅವರ ಮನೆ ಸಹಿತ ಎರಡು ಮನೆಗಳಿಗೆ ಕೃತಕ ನೆರೆಯಾಗಿದ್ದು ಸ್ಥಳೀಯ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ಸ್ಥಳೀಯವಾಗಿ ಅಭಿವೃದ್ಧಿ ಕಾಮಗಾರಿ ಮತ್ತು ಮಾನವ ನಿರ್ಮಿತ ತಡೆಗೋಡೆಗಳಿಂದ ಈ ಸಮಸ್ಯೆ ಉದ್ಭವಿಸಿದ್ದು, ಇನ್ಫೋಸಿಸ್ ಸಂಸ್ಥೆಗೆ ಸೇರಿದ ಸ್ಥಳದ ಎತ್ತರದ ಪ್ರದೇಶದಿಂದ ನೀರು ರಭಸವಾಗಿ ಹರಿದು ಬಂದಿದ್ದರಿಂದ ಈ ಘಟನೆ ನಡೆದಿದೆ. ಸಾಂಬಾರ್‌ತೋಟ ಸಹಿತ ಸುಮಾರು ಮೂರು ಕಡೆ ಇನ್ಫೋಸಿಸ್ ಆವರಣ ಗೋಡೆ ಕುಸಿದಿದೆ. ನವಗ್ರಾಮದಲ್ಲಿಯೂ ಕೃತಕ ನೆರೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರದ ಮುಡಿಪು ಕಂಬಳಪದವು ಬಳಿ ಭಾರೀ ಮಳೆಯಿಂದಾಗಿ ಮನೆಗೆ ನೀರು ನುಗ್ಗಿದ್ದ ಮನೆಗಳಿಗೆ ಶಾಸಕ ಯು.ಟಿ. ಖಾದರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ತಹಶೀಲ್ದಾರ್, ಸ್ಥಳೀಯ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿ, ಮೆಸ್ಕಾಂ ಅಧಿಕಾರಿಗಳು ಹಾಗೂ ಇನ್ಫೋಸಿಸ್ ಅಧಿಕಾರಿಗಳ ತಂಡ ರಚಿಸಿ ಅವಲೋಕನ ನಡೆಸಿ ಶೀಘ್ರ ಸಭೆ ಕರೆದು ಶಾಶ್ವತ ಪರಿಹಾರ ಒದಗಿಸಲು ತಹಶೀಲ್ದಾರರಿಗೆ ಆದೇಶ ನೀಡಿದರು.
ತೊಕ್ಕೊಟ್ಟು ಜಂಕ್ಷನ್ ಜಲಾವೃತ
ಮಂಗಳವಾರ ಬೆಳಗ್ಗಿನಿಂದಲೇ ಧಾರಾ ಕಾರವಾಗಿ ಸುರಿದ ಮಳೆಗೆ ತೊಕ್ಕೊಟ್ಟು ಜಂಕ್ಷನ್ ಜಲಾವೃತಗೊಂಡಿದ್ದು, ಸುಮಾರು ಐದಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿವೆ. ಮೂರು ವರ್ಷಗಳಲ್ಲಿ ಸತತವಾಗಿ ಜಂಕ್ಷನ್‌ನಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗುತ್ತಿದೆ. ಹೋಟೆಲ್, ರೆಸ್ಟೊರೆಂಟ್, ಬಟ್ಟೆ ಅಂಗಡಿ, ಟೈಲರ್ ಅಂಗಡಿ, ಎಲೆಕ್ಟ್ರಿಕಲ್ ಶಾಪ್‌ಗೆ ನೀರು ನುಗ್ಗಿ ಹಾನಿಯಾಗಿದೆ.
ಗುರುಪುರ ನದಿಯ ನೀರಿನ ಮಟ್ಟ ಏರಿಕೆ
ಗುರುಪುರ: ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುರುಪುರ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಸುತ್ತಲಿನ ಪ್ರದೇಶಗಳಿಗೆ ನೆರೆ ಭೀತಿ ಉಂಟಾಗಿದೆ. ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು ರಸ್ತೆಯಲ್ಲಿಯೇ ನೀರು ಹರಿದು ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಅದರಲ್ಲೂ ಮುಖ್ಯವಾಗಿ ರಾ.ಹೆ. 169 ಅಗಲ ಕಿರಿದಾಗಿರುವುದಷ್ಟೇ ಅಲ್ಲದೆ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ-ಗುಂಡಿಗಳಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ದಿಢೀರ್ ಮಳೆಯಿಂದ ನೀರಿನ ಮಟ್ಟ ಒಂದೇ ಸಮನೆ ಏರಿಕೆಯಾಗಿದ್ದರಿಂದ ಸಮೀಪದ ಗುರುಪುರ, ಕುಕ್ಕುದಕಟ್ಟೆ ಸೇರಿ ನದಿ ಪಾತ್ರದ ಊರುಗಳಿಗೆ ನೆರೆಭೀತಿ ಉಂಟಾಗಿದೆ. ಅದೇ ರೀತಿ ಮಳಲಿಯ ಸಾಧೂರು ಭಾಗದಲ್ಲೂ ನೀರಿನ ಮಟ್ಟ ಏರಿಕೆಯಾಗಿದ್ದು, ಪಟ್ಲ ಪ್ರದೇಶಗಳಲ್ಲಿ ನೀರು ನಿಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.