ಹೆದ್ದಾರಿ ಕುಸಿತ ತಡೆ: ಬೇಕಿದೆ ಶಾಶ್ವತ ಪರಿಹಾರ
ಮರೋಳಿ ಕೆಂಬಾರು ಬಳಿ ರಾ.ಹೆ. ಕುಸಿತ; ಮಣು ಹಾಕಿ ತಾತ್ಕಾಲಿಕ ವ್ಯವಸ್ಥೆ
Team Udayavani, Oct 8, 2022, 12:22 PM IST
ಮಹಾನಗರ: ಮರೋಳಿ ಕೆಂಬಾರು ಬಳಿ ರಾಷ್ಟ್ರೀಯ ಹೆದ್ದಾರಿ 75ರ ಒಂದು ಬದಿ ಮಳೆ ನೀರು ಹರಿದು ಕುಸಿತಗೊಂಡು ಹಲವು ತಿಂಗಳು ಕಳೆದರೂ ಇನ್ನೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಶ್ವತ ಕಾಮಗಾರಿಗೆ ಮುಂದಾಗಿಲ್ಲ.
ಪಡೀಲ್ ಜಂಕ್ಷನ್‌ನಿಂದ ಬಿಕರ್ನಕಟ್ಟೆ, ನಂತೂರು ಕಡೆಗೆ ಸಾಗುವ ಹೆದ್ದಾರಿಯ ಕೆಂಬಾರಿನಲ್ಲಿ ಎಡಭಾಗದ ರಸ್ತೆಯ ಬದಿ ಈ ಬಾರಿ ಸುರಿದ ಮಳೆಗೆ ಕುಸಿದಿತ್ತು. ಇದು ಏರು ರಸ್ತೆಯಾಗಿರುವುದರಿಂದ ಮೇಲ್ಭಾಗದಲ್ಲಿರುವ ಮರೋಳಿ ಕಡೆಯಿಂದ ಹರಿದು ಬರುವ ನೀರು ಕುಸಿತಗೊಂಡಲ್ಲಿ ರಸ್ತೆಯಿಂದ ಕೆಳಕ್ಕೆ ಹರಿಯುತ್ತದೆ. ಹಲವು ವರ್ಷಗಳಿಂದ ಇದೇ ರೀತಿ ನೀರು ಹರಿದು, ಮಣ್ಣು ಸವೆದು ಈ ಬಾರಿ ಆಗಸ್ಟ್ ತಿಂಗಳಲ್ಲಿ ಕುಸಿತಗೊಂಡಿದೆ. ಸದ್ಯ ತಾತ್ಕಾಲಿಕವಾಗಿ ಮಣ್ಣು ಹಾಕಿ ನೀರು ಕೆಳಗೆ ಹರಿದು ಹೋಗದಂತೆ ತಡೆಯಲಾಗಿದ್ದು, ಸ್ಥಳದಲ್ಲಿ ಒಂದು ಬ್ಯಾರಿಕೇಡ್ ಇಡಲಾಗಿದೆ.
ಸದ್ಯ ಮಣ್ಣು ಹಾಕಿರುವುದರಿಂದ ಮೊದಲೇ ಫುಟ್‌ಪಾತ್ ಇಲ್ಲದ ರಸ್ತೆಯಲ್ಲಿ ಪಾದಚಾರಿಗಳು ಮಧ್ಯ ದಲ್ಲೇ ಸಂಚರಿಸಬೇಕಾದ ಅನಿವಾರ್ಯವಿದೆ. ಹೆದ್ದಾರಿಯಲ್ಲಿ ಘನವಾಹನಗಳು ಸಂಚರಿಸುತ್ತಿರುವುದರಿಂದ ಸ್ಥಳ ಅಪಾಯಕಾರಿಯಾಗಿದೆ. ಇನ್ನೊಂದೆಡೆ ನೀರು ಹರಿದು ಕೆಳಗೆ ಬೀಳುವ ಸ್ಥಳ ಪ್ರಪಾತವಾಗಿದ್ದು, ರಸ್ತೆ ಮಟ್ಟದಿಂದ ಸುಮಾರು 50 ಅಡಿಗಳಷ್ಟು ಆಳದಲ್ಲಿದೆ. ಕೆಳಗೆ ಕೆಲವು ಮನೆಗಳೂ ಇವೆ. ತಡೆಗೋಡೆ ನಿರ್ಮಾಣವಾದರೆ ಮಾತ್ರ ಮುಂದಿನ ದಿನಗಳಲ್ಲಿ ರಸ್ತೆ ಮತ್ತಷ್ಟು ಕುಸಿಯುವುದನ್ನು ತಡೆಯಬಹುದಾಗಿದೆ.
ಹೆದ್ದಾರಿ ಅವೈಜ್ಞಾನಿಕ ಹೆದ್ದಾರಿಯೂ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಅನೇಕ ತಿರುವುಗಳಿಂದ ಕೂಡಿದೆ. ಇದರಿಂದ ಘನವಾಹನಗಳ ಸಂಚಾರಕ್ಕೂ ತೊಡಕಾಗುತ್ತಿದ್ದು, ಸಾಕಷ್ಟು ಟ್ಯಾಂಕರ್, ಲಾರಿಗಳು ಇಲ್ಲಿ ಮಗುಚಿ ಬಿದ್ದ ಉದಾಹರಣೆಗಳೂ ಇವೆ. ಹೆದ್ದಾರಿ ನಿರ್ಮಾಣದ ವೇಳೆ ಈ ಕುರಿತು ಗಮನ ಹರಿಸದ ಹಿನ್ನೆಲೆಯಲ್ಲಿ ಸದ್ಯ ಅಪಾಯಕಾರಿಯಾಗಿ ಪರಿಣಮಿಸಿದೆ.
ಇನ್ನೊಂದು ಕಡೆ ಬಿರುಕು ಮಣ್ಣು ಹಾಕಿ ಹೆದ್ದಾರಿಯಲ್ಲಿ ನೀರಿನ ಪಥಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಇನ್ನೊಂದು ಕಡೆಯಲ್ಲಿ ನೀರು ಪ್ರಪಾತಕ್ಕೆ ಹರಿಯಲು ದಾರಿ ಕಂಡು ಕೊಂಡಿದೆ. ಮುಂದಿನ ಒಂದೆರಡು ಮಳೆಗಾಲದಲ್ಲಿ ಇಲ್ಲಿಯೂ ನೀರು ಹರಿಯುತ್ತಿದ್ದರೆ, ಹೆದ್ದಾರಿಯಲ್ಲಿ ಇನ್ನೊಂದು ಕಡೆ ಬಿರುಕು ಉಂಟಾಗುವುದು ಖಚಿತ. ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ, ನೀರು ಹರಿದು ಹೋಗಲು ಅವಕಾಶ ಇರುವೆಡೆಯೆಲ್ಲ ಹರಿದು, ಈ ರೀತಿಯ ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.
ಅಧಿಕಾರಿಗಳ ಸಭೆಯಲಿ ಚರ್ಚಿಸಿ ತೀರ್ಮಾನ: ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಾರಿ ನಿರಂತರ ಮಳೆಯಾಗುತ್ತಿದ್ದು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ಅಡ್ಡಿಯಾಗಿದೆ. ಕೆಂಬಾರು ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತ ಕುರಿತು ಹೆದ್ದಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪ್ರಶ್ನಿಸಿ, ಯಾವ ರೀತಿ ಪರಿಹಾರ ಕೈಗೊಳ್ಳಬಹುದು ಎಂದು ತೀರ್ಮಾನಿಸಲಾಗುವುದು. -ವೇದವ್ಯಾಸ ಕಾಮತ್, ಶಾಸಕರು ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.