![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 14, 2022, 10:27 AM IST
ಮಹಾನಗರ: ನಗರ ಹೊರ ವಲಯದ ಅಡ್ಯಾರ್ ಕಟ್ಟೆ ಮತ್ತು ಕಣ್ಣೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ಎರಡೂ ಬದಿ, ತ್ಯಾಜ್ಯ ತಂದು ಎಸೆಯುವವರಿಗೆ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ.
ಮಂಗಳೂರು ಮಹಾನಗರ ಪಾಲಿಕೆ ಮತ್ತು ಅಡ್ಯಾರ್ ಗ್ರಾ.ಪಂ.ನ ಗಡಿ ಪ್ರದೇಶವಾದ್ದರಿಂದ, ಎರಡು ಆಡಳಿತಗಳು ಈ ಸಮಸ್ಯೆಗೆ ಮುಕ್ತಿ ಕಾಣಿಸುವಲ್ಲಿ ಅಷ್ಟಾಗಿ ಗಮನ ಹರಿಸಿದಂತಿಲ್ಲ. ಇದು ಕಸ ಎಸೆಯುವವರಿಗೆ ವರವಾಗಿ ಪರಿಣಮಿಸಿದ್ದು, ದಿನದಿಂದ ದಿನಕ್ಕೆ ಇಲ್ಲಿನ ಕಸದ ರಾಶಿ ಹೆಚ್ಚಾಗುತ್ತಿದೆ.
ರಸ್ತೆಯ ಬದಿಯಲ್ಲಿ ಕಸದ ರಾಶಿ ಬಿದ್ದು, ನಡೆದುಕೊಂಡು ಹೋಗುವವರಿಗೆ ಜಾಗವೇ ಇಲ್ಲ ಎನ್ನುವಂತಾಗಿದೆ. ಈ ಹಿಂದೆ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ನೀಡುವ ಬೋರ್ಡ್ ಅಳವಡಿಸಲಾಗಿತ್ತು. ಪ್ರಸ್ತುತ ಅದೂ ಬಿದ್ದು ಹೋಗಿದೆ. ಒಂದೆಡೆ ರಸ್ತೆ ಬದಿ ಹುಲ್ಲು ಪೊದೆಗಳಿಂದ ತುಂಬಿ ಹೋಗಿದ್ದು, ಇನ್ನೊಂದೆಡೆ ತ್ಯಾಜ್ಯ ರಾಶಿ. ಇದರಿಂದ ಒಟ್ಟು ಪ್ರದೇಶವೇ ಗಬ್ಬೆದ್ದು ಹೋಗಿದೆ. ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಇಲ್ಲಿನ ವಾಸನೆ ಉಚಿತ ಎನ್ನಬಹುದು. ಆಹಾರದ ಉಳಿಕೆ, ಮೀನಿನ ತ್ಯಾಜ್ಯವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಎಸೆಯುವುದು, ಮನೆಯಲ್ಲಿ ಹಾಳಾದ ಬೆಡ್‌ಗಳು, ಸೋಫಾ ಕುಷನ್, ಕಮೋಡ್ ಎಲ್ಲವೂ ಹೆದ್ದಾರಿ ಬದಿಗೆ ಬಂದಿವೆ.
ಸ್ಥಳದಲ್ಲಿ ರಾಶಿಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಮತ್ತೆ ಮುಂದಿನ ದಿನಗಳಲ್ಲಿ ಯಾವುದೇ ತ್ಯಾಜ್ಯ ಬೀಳದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ದಂಡದ ಹೆದರಿಕೆ ಇಲ್ಲ
ಬೀದಿ ಬದಿಯಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಈಗ ಗ್ರಾಮ ಮಟ್ಟದಲ್ಲಿ ಜಾರಿಯಲ್ಲಿದೆ. ಆದರೆ ದಂಡದ ಕುರಿತಂತೆ ಜನರಲ್ಲಿ ಹೆದರಿಕೆಯೇ ಇಲ್ಲ ಎನ್ನಬಹುದು. ಕೆಲವರು ರಾತ್ರಿ ವೇಳೆ ಅಥವಾ ಬೆಳಕು ಹರಿಯುವ ಮುನ್ನ ಕಸವನ್ನು ಸುರಿದು ಹೋಗುವುದರಿಂದ ಪತ್ತೆ ಮಾಡುವುದೂ ಅಧಿಕಾರಿಗಳ ಪಾಲಿಗೆ ಕಷ್ಟವಾಗಿದೆ. ಈ ಹಿಂದೆ ಒಂದು ಬಾರಿ ತ್ಯಾಜ್ಯದಲ್ಲಿದ್ದ ಬಿಲ್‌ನ ಆಧಾರದಲ್ಲಿ ಹೊಟೇಲ್ ಒಂದಕ್ಕೆ ದಂಡ ವಿಧಿಸಲಾಗಿತ್ತು. ಕಸ ಎಸೆಯುವುದು ಕಂಡು ಬಂದು ಸಾರ್ವಜನಿಕರು ಯಾರಾದರೂ ಪ್ರಶ್ನಿಸಲು ಹೋದರೆ ಅಂತಹವರನ್ನು ಗದರಿಸುವ ಉದಾಹರಣೆಯೂ ಇದೆ.
ಜನರಲ್ಲೂ ಇಲ್ಲವಾಗಿದೆ ಕಾಳಜಿ
ರಸ್ತೆ ಬದಿಯಲ್ಲಿ ಕಸ ಎಸೆಯಬಾರದು ಎನ್ನುವ ಕನಿಷ್ಠ ಜ್ಞಾನ ಜನರಲ್ಲೂ ಇಲ್ಲ. ಪರಿಸರ ಕಾಳಜಿಯಂತೂ ಮೊದಲೇ ಇಲ್ಲ. ಇಲ್ಲಿ ಕಸ ಎಸೆಯುವವರು ಬಹುತೇಕ ಗ್ರಾಮೀಣ ಭಾಗದ ಮಂದಿಯೇ ಎನ್ನಬಹುದು. ವಾಹನಗಳಲ್ಲಿ ಬಂದು ಎಸೆದು ಜಾಗ ಖಾಲಿ ಮಾಡುತ್ತಾರೆ. ಇಂದು ಎಲ್ಲ ಗ್ರಾಮಗಳಲ್ಲಿ ಮನೆ-ಮನೆ ಕಸ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದೆ. ಆದರೂ ಈ ರೀತಿ ತಂದು ಎಸೆಯುವುದು ಬೇಜವಾಬ್ದಾರಿಯ ಪರಮಾವಧಿ ಎನ್ನುವುದು ಪರಿಸರ ಪ್ರಿಯರ ಅಭಿ ಪ್ರಾಯ. ರಸ್ತೆ ಬದಿಯಲ್ಲಿ ನಿಂತರೆ ಕನಿಷ್ಠ 10 ಮಂದಿಯನ್ನು ಕಸ ಹಾಕುವವರನ್ನು ಹಿಡಿದು ದಂಡ ಹಾಕಬಹುದಾಗಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.