ಶಿರ್ತಾಡಿ ಚರ್ಚ್‌ನಲ್ಲಿ ಪವಿತ್ರ ಗುರುವಾರ
Team Udayavani, Mar 31, 2018, 1:59 PM IST
ಮೂಡಬಿದಿರೆ: ನಾವು ಧಾರ್ಮಿಕ ಭಕ್ತಿಯನ್ನು ಸೇವೆಯ ಮೂಲಕ ಪ್ರಕಟಪಡಿಸೋಣ ಎಂದು ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ನ ಧರ್ಮಗುರು ಫಾ| ಫ್ರಾನ್ಸಿಸ್ ಕ್ರಾಸ್ತಾ ನುಡಿದರು. ಮಾ. 29ರಂದು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್‌ನಲ್ಲಿ ನಡೆದ ಪವಿತ್ರ ಗುರುವಾರ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 12 ಮಂದಿ ಶಿಷ್ಯರ ಪಾದಗಳನ್ನು ತೊಳೆದು ಭಕ್ತರಿಗೆ ಯೇಸು ತೋರಿಸಿದ ದೀನತೆಯ ಪ್ರೀತಿಯ ಕುರಿತು ಸಂದೇಶ ನೀಡಿದರು.
‘ಯೇಸು ಮರಣಹೊಂದುವ ಹಿಂದಿನ ದಿನ ತನ್ನ ಶಿಷ್ಯರೊಡನೆ ಅಂತಿಮ ಭೋಜನ ಸೇವಿಸಿದ್ದರು. ಆ ದಿನ ಅವರು ತಮ್ಮ ಶಿಷ್ಯರಿಗೆ ರೊಟ್ಟಿಯನ್ನು ಮುರಿದು ಕೊಡುತ್ತಾ ಇದು ನನ್ನ ಶರೀರ ಎಂದು ಹೇಳಿ ದ್ರಾ ಕ್ಷಾರಸವನ್ನು ತೆಗೆದುಕೊಂಡು ಇದು ನನ್ನ ರಕ್ತ, ನಿಮ್ಮ ಪಾಪಗಳಿಗೋಸ್ಕರ ಸುರಿಸಲ್ಪಡುವುದು ಎಂದು ಬೋಧಿಸುವ ಮೂಲಕ ಯೇಸು ಪರಮ ಪವಿತ್ರ ಸಂಸ್ಕಾರವನ್ನು ಸ್ಥಾಪಿಸಿದರು ಹಾಗೂ ಶಿಷ್ಯರ ಕಾಲುಗಳನ್ನು ತೊಳೆದು ಸೇವೆಯ ದೂತರಾಗಲು ಕರೆಯಿತ್ತರು ಎಂದು ಹೇಳಿದರು.
ನೂರಾರು ಭಕ್ತರು ಪರಮ ಪ್ರಸಾದ ಸಂಕೇತವಾದ ಬಿಳಿಬಟ್ಟೆಗಳನ್ನು ತೊಟ್ಟು ಭಕ್ತಿಯಿಂದ ಪಾಲ್ಗೊಂಡರು. ಬ್ರ| ವಿವಿಯನ್ ನಿಶಾಂತ್ ರೋಡ್ರಿಗಸ್, ಧಾರ್ಮಿಕ ಭಗಿನಿಯರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೋ, ಕಾರ್ಯದರ್ಶಿ ಮರಿಯಾ ಲೀಟಾ ಪಿರೇರಾ, ಜೊಯೆಲ್ ಸಿಕ್ವೇರಾ, ಪ್ರಸಾದ್ ರೊಡ್ರಿಗಸ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.