ಹೋವರ್‌ಕ್ರಾಫ್ಟ್ ವೇಗದ ಸಂಚಾರ; ನಾಡದೋಣಿಗಳಿಗೆ ಆತಂಕ!
Team Udayavani, Dec 22, 2021, 6:44 PM IST
ಬೆಂಗ್ರೆ: ಕರಾವಳಿ ರಕ್ಷಣೆಯ ಹೊಣೆ ಹೊತ್ತಿರುವ ಕೋಸ್ಟ್ ಗಾರ್ಡ್‌ಗೆ ಸಂಬಂಧಿಸಿದ “ಹೋವರ್ ಕ್ರಾಫ್ಟ್’ ವೇಗವಾಗಿ ಫಲ್ಗುಣಿ ನದಿಯಲ್ಲಿ ಸಂಚರಿಸುವ ಕಾರಣ ಮಂಗಳೂರಿನ ನಾಡದೋಣಿಗಳು ಸಂಕಷ್ಟ ಎದುರಿಸುತ್ತಿದೆ!
ರಕ್ಷಣೆಯ ದೃಷ್ಟಿಯಿಂದ ಹೋವರ್‌ಕ್ರಾಫ್ಟ್ ಕೆಲವು ಸಂದರ್ಭ ಫಲ್ಗುಣಿ ನದಿಯಲ್ಲಿ ವೇಗವಾಗಿ ಸಂಚರಿಸುತ್ತದೆ. ಈ ವೇಳೆ ನೀರಿನ ಏರಿಳಿತ ಉಂಟಾಗಿ ನದಿಯ ಬದಿಯಲ್ಲಿ ಲಂಗರು ಹಾಕಿದ್ದ ನಾಡದೋಣಿಗಳು ಕೂಡ ಏರಿಳಿತ ವಾಗಿ ಒಂದಕ್ಕೊಂದು ಢಿಕ್ಕಿಯಾಗಿ ಹಾನಿಯಾಗುತ್ತಿದೆ ಎಂದು ಬೆಂಗರೆ ಮಹಾಜನ ಸಭಾ ಹಾಗೂ ನಾಡದೋಣಿ ಮಾಲಕರು ದೂರಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಕರಾವಳಿ ಕಾವಲು ನಡೆಸುತ್ತಿರುವ ಹೋವರ್ ಕ್ರಾಫ್ಟ್ ಫಲ್ಗುಣಿ ನದಿಯಲ್ಲಿ ವೇಗವಾಗಿ ಸಂಚರಿಸುವುದರಿಂದ ನೀರಿನಲ್ಲಿ ಉಬ್ಬರ ಇಳಿತ ಉಂಟಾಗಿ ಮೀನುಗಾರಿಕೆ ನಡೆ ಸುವ ನಾಡದೋಣಿಗಳಿಗೆ ಸಮ ಸ್ಯೆಯಾಗುತ್ತಿದೆ. ಜತೆಗೆ ಲಂಗರು ಹಾಕಿದ್ದರೂ ಅಲೆಯ ಏರಿಳಿತದಿಂದ ದೋಣಿಗಳಿಗೆ ಹಾನಿಯಾಗಿದೆ. ಈ ಬಗ್ಗೆ ಕೋಸ್ಟ್‌ಗಾರ್ಡ್, ಕರಾವಳಿ ಕಾವಲು ಪೊಲೀಸರ ಗಮನಕ್ಕೆ ಮೀನುಗಾರರು ತಂದಿದ್ದಾರೆ.
“ಸುದಿನ’ ಜತೆಗೆ ಮಾತನಾಡಿದ ಸಾಂಪ್ರದಾಯಿಕ, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅಜಿತ್ ಬೆಂಗ್ರೆ ಅವರು, “ನದಿ ಬದಿಯಲ್ಲಿ ನೂರಾರು ನಾಡದೋಣಿಗಳು ಲಂಗರು ಹಾಕಿದ್ದು ಮತ್ತೂ ಹಲವು ಮೀನುಗಾರಿಕೆ ನಡೆಸುತ್ತಿರುತ್ತದೆ. ಈ ವೇಳೆ ಹೋವರ್‌ಕ್ರಾಫ್ಟ್ ವೇಗವಾಗಿ ಸಂಚರಿಸುವಾಗ ನಾಡದೋಣಿಗಳಿಗೆ ಸಮಸ್ಯೆ ಆಗುತ್ತಿದೆ. ಲಂಗರು ಹಾಕಿದ ಬೋಟ್‌ಗಳಿಗೆ ಹಾನಿಯಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ’ ಎಂದರು.ಮಹಾಜನ ಸಭಾ ಮುಖಂಡರಾದ ಕೇಶವ ಅವರ ಪ್ರಕಾರ “ಫಲ್ಗುಣಿ ನದಿ ಯಲ್ಲಿ ಹೋವರ್ ಕ್ರಾಫ್ಟ್ ಸಂಚರಿ ಸುವ ವೇಳೆ ಹೋವರ್ ಕ್ರಾಫ್ಟ್ನ ವೇಗ ಕಡಿಮೆ ಮಾಡಬೇಕು. ಇಲ್ಲವೇ ಹೋವರ್ ಕ್ರಾಫ್ಟ್ ಅನ್ನು ನೇರವಾಗಿ ಸಮುದ್ರದಲ್ಲೇ ಸಂಚರಿಸುವಂತೆ ಮಾಡಬೇಕು’ ಎನ್ನುತ್ತಾರೆ.
ಪ್ರತ್ಯೇಕ ಸಭೆ ನಡೆಸಿ ನಿರ್ಧಾರ
ಹೋವರ್ ಕ್ರಾಫ್ಟ್ ಸಮುದ್ರ ಕಣ್ಗಾವಲಿಗೆ ಇರುವಂತಹುದು. ಅದರ ಸಂಚಾರವನ್ನು ಮೊಟಕುಗೊಳಿಸುವುದು ಸಾಧ್ಯವಿಲ್ಲ. ಆದರೆ ಹೋವರ್‌ಕ್ರಾಫ್ಟ್ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ನಾಡದೋಣಿ ಗಳಿಗೆ ಹಾನಿಯಾಗದಂತೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುವ ಮುಖಂಡರು, ಬಂದರು ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು.
– ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.