ರಸ್ತೆಯಂಚಿಗೆ ವಾಹನ ಇಳಿದರೆ ಎತ್ತಲು ಕ್ರೇನ್‌ ಬರಬೇಕು!

ವಿವಿಧೆಡೆ ಕಾಮಗಾರಿ ಬಳಿಕ ಹಾಕಲಾದ ಮಣ್ಣು ಕುಸಿತ

Team Udayavani, May 21, 2022, 10:12 AM IST

suratkal

ಸುರತ್ಕಲ್‌: ಮಳೆಗಾಲದ ಮುನ್ನ ಒಂದೆರಡು ತಿಂಗಳ ಹಿಂದೆ ರಸ್ತೆಯಂಚು, ರಸ್ತೆ ಮಧ್ಯೆ ಪೈಪ್‌ ಅಳವಡಿಕೆ, ಜಲಸಿರಿ, ಗ್ಯಾಸ್‌ ಪೈಪ್‌ ಮುಂತಾದ ಕಾಮಗಾರಿಗೆ ಅಗೆದು ಹಾಕಲಾದ ಪ್ರದೇಶ ಮಳೆಗಾಲದಲ್ಲಿ ಸಮಸ್ಯೆಯ ಅಗರವಾಗಿದೆ.

ಕಾಮಗಾರಿ ಬಳಿಕ ಹಲವೆಡೆ ಗುಂಡಿ ಮುಚ್ಚಿ ಸಮತಟ್ಟು ಮಾಡಲಾಗಿದ್ದರೂ ಮೇಲ್ಮೈ ಮಣ್ಣು ಹಾಕಿದ್ದರಿಂದ ಒಂದೇ ಮಳೆಗೆ ಮಣ್ಣು ಒಳಕ್ಕೆ ಕುಸಿದಿದೆ. ಎಚ್ಚರ ತಪ್ಪಿ ವಾಹನ ಸೈಡ್‌ ನೀಡಲು ಹೋದರೆ ಮೇಲೆತ್ತಲು ಕ್ರೇನ್‌ ಬಳಸಬೇಕಾದ ಅನಿವಾರ್ಯ ಎದುರಾಗಬಹುದು.

ಇನ್ನು ಹಲವೆಡೆ ಕಾಮಗಾರಿ ಅಪೂರ್ಣಗೊಂಡಿದೆ. ಸುರತ್ಕಲ್‌ ಹೆದ್ದಾರಿ 66ರ ಭಾರತ್‌ ಬ್ಯಾಂಕ್‌ ಮುಂಭಾಗ ಪಾದಚಾರಿಗಳು ನಡೆದಾಡಲು ಆಗುತ್ತಿಲ್ಲ. ಚರ್ಚ್‌ ಮುಂಭಾಗ ರಸ್ತೆ ಅಗೆದು ಹಾಕಲಾಗಿದ್ದು ಇನ್ನೂ ಕಾಮಗಾರಿ ಮುಗಿದಿಲ್ಲ. ಹಲವೆಡೆ ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಸುತ್ತ ಸುರಕ್ಷೆ ಟೇಪ್‌ ಕೂಡ ಅಳವಡಿಸಿಲ್ಲ.

ಅಪೂರ್ಣ ಕಾಮಗಾರಿ

ಇದೀಗ ಮಳೆ ಬಂದಾಗ ಚರಂಡಿ, ರಸ್ತೆಯ ಮೇಲೆ ನೀರು ಧಾರಾಕಾರವಾಗಿ ಹರಿ ಯತೊಡಗಿದೆ. ಗುಂಡಿಗಳನ್ನು ತೋಡಿರುವ ಭಾಗದಲ್ಲಿ ನೀರು ತುಂಬುತ್ತಿದ್ದು ಸುತ್ತಲೂ ಮಣ್ಣು ಕುಸಿಯುವ ಸಾಧ್ಯತೆಯಿದೆ. ಕೊಟ್ಟಾರ ಚೌಕಿ ಬಳಿ ರಾಜ ಕಾಲುವೆ ಕಾಮಗಾರಿ ವಿಳಂಬವಾಗಿದ್ದರಿಂದ ಹೆದ್ದಾರಿ ಬದಿವರೆಗೂ ಮಣ್ಣು ಕುಸಿದಿದೆ. ಹೊಸಬೆಟ್ಟು,ಎನ್‌ಐಟಿಕೆ ಮತ್ತಿತರ ಪ್ರದೇಶಗಳಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಇನ್ನು ಮಳೆಗಾಲದ ಸಂದರ್ಭ ಕಾಮಗಾರಿಯನ್ನು ಪೂರ್ಣ ಗೊಳಿಸುವುದು ಅನುಮಾನವಾಗಿದೆ ಬೃಹತ್‌ ಹೊಂಡ ತೋಡಿರುವ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿಯಾದರೂ ಬ್ಯಾರಿಕೇಡ್‌ ಗಳನ್ನು ಅಳವಡಿಸಿ ರಾತ್ರಿಯ ವೇಳೆ ವಾಹನಗಳು ಪಾದಚಾರಿಗಳು ವಾಹನಗಳು ಅಪಾಯಕ್ಕೆ ಒಳಗಾಗುವುದನ್ನು ತಪ್ಪಿಸಬೇಕಿದೆ. ತತ್‌ಕ್ಷಣ ಗುಂಡಿ ಮುಚ್ಚಲು ಸಾಧ್ಯವಾಗದಿದ್ದರೂ ಅಗೆದು ಹಾಕಲಾದ ಸ್ಥಳದಲ್ಲಿ ವಾಹನ ಸವಾರರಿಗೆ ತಿಳಿಯುವಂತೆ ಅಪಾಯ ಸೂಚಕಗಳನ್ನು ಅಳವಡಿಸಿ ಮುನ್ನೆಚ್ಚರಿಕೆ ವಹಿಸುವಂತೆ ಮಾಡಬೇಕಿದೆ.

ಓಡಾಟಕ್ಕೆ ಅಯೋಗ್ಯವಾದ ಸರ್ವಿಸ್‌ ರಸ್ತೆ

ಸುರತ್ಕಲ್‌ ಜಂಕ್ಷನ್‌ನಿಂದ ಉಡುಪಿ ಕಡೆ ಹೋಗುವ ಸರ್ವಿಸ್‌ ರಸ್ತೆ ಉಪಯೋಗಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಕಾರು ಚಲಿಸಿದರೆ ಅಡಿ ಭಾಗಕ್ಕೆ ಹಾನಿಯಾಗುತ್ತಿದೆ ಮಾತ್ರವಲ್ಲ ದ್ವಿಚಕ್ರ ಸವಾರರು ವಾಹನ ಬ್ಯಾಲೆನ್ಸ್‌ ಮಾಡಲು ಕಷ್ಟ ಪಡುತ್ತಿದ್ದಾರೆ. ಎಂಆರ್‌ಪಿಎಲ್‌ ಸಹಿತ ವಿವಿಧೆಡೆ ಟ್ಯಾಂಕರ್‌, ಬಸ್‌ಗಳು ಇದರಲ್ಲೇ ಸಂಚರಿಸುವ ಕಾರಣ ತತ್‌ಕ್ಷಣ ಪಾಲಿಕೆಯಾದರೂ ತುರ್ತು ದುರಸ್ತಿ ಕೈಗೊಳ್ಳಬೇಕಿದೆ.

ಇತ್ಯರ್ಥಕ್ಕೆ ಕ್ರಮ

ವಿವಿಧ ಯುಜಿಡಿ ಪೈಪ್‌ ಅಳವಡಿಸುವ ಕಾಮಗಾರಿಗಾಗಿ ಮಣ್ಣು ಅಗೆದು ಹಾಕಿ ಜನಸಂಚಾರಕ್ಕೆ ತೊಡಕಾಗುತ್ತಿದೆ. ಸುರಿಯುತ್ತಿರುವ ಮಳೆಯಿಂದ ಸಮಸ್ಯೆಯೂ ಉದ್ಭವಿಸುತ್ತಿದೆ. ಜನವಸತಿ, ವಾಹನ ಓಡಾಟ ಪ್ರದೇಶಗಳಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ತ್ವರಿತವಾಗಿ ಇತ್ಯರ್ಥ ಪಡಿಸಲು ಪಾಲಿಕೆಯ ಆಧಿಕಾರಿಗಳಿಗೆ ಸೂಚಿಸಲಾಗುವುದು. -ಡಾ| ಭರತ್‌ ಶೆಟ್ಟಿ ವೈ., ಶಾಸಕರು

ಟಾಪ್ ನ್ಯೂಸ್

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ

Mangaluru: ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

5-uv-fusion

Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ

3

Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!

2

Vitla: ಅಭಿವೃದ್ಧಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

4-uv-fusion

Childhood Times: ಕಳೆದು ಹೋದ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.