ವಿವಿಧ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆ
ರಸ್ತೆಗಳ ಅಭಿವೃದ್ದಿಯಿಂದ ಕ್ಷೇತ್ರ ಅಭಿವೃದ್ಧಿ ಸಾಧ್ಯ: ಡಾ| ಭರತ್ ಶೆಟ್ಟಿ
Team Udayavani, May 25, 2022, 1:13 PM IST
ಕೈಕಂಬ: ಹಲವಾರು ವರ್ಷ ಗಳ ಜನರ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಮುಖ್ಯವಾದ ಜನರ ಸಂಪರ್ಕ ಕೊಂಡಿ ರಸ್ತೆಗಳನ್ನು ಆದ್ಯತೆ ಮೇರೆಗೆ ಮಾಡಲಾಗುತ್ತದೆ. ಗ್ರಾಮ ಪಂಚಾಯತ್‌ನ ಹಳ್ಳಿಪ್ರದೇಶಗಳ ಮನೆ ಇರುವಂತಹ ಕಡೆಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಅದೇ ವೇಗದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ವೈ.ಹೇಳಿದರು.
ಮಂಗಳವಾರದಂದು ಬಡಗ ಎಡಪದವು ಗ್ರಾಮ ಪಂ. ವ್ಯಾಪ್ತಿಯ 7.5 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷಿಕರಿಗೆ ನೀರಿಗೆ ಅನುಕೂಲವಾಗುವಂತಹ ಕಿಂಡಿ ಅಣೆಕಟ್ಟು ಹಾಗೂ ಅದಕ್ಕೆ ಸಂಪರ್ಕ ರಸ್ತೆಗಳನ್ನು ಮಾಡಲಾಗುವುದು. ಪರಿಸರ ಸ್ನೇಹಿ ಯೋಜನೆಯ ಗ್ರಾಮ ಪಂಚಾಯತ್ ಗೆ ಸೋಲಾರ್ ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಬೆಳ್ಳೆಚಾರ್ ರಿಕ್ಷಾ ಚಾಲಕ ಮಾಲಕ ಸಂಘ ದಿಂದ ಶಾಸಕರಿಗೆ ಸಮ್ಮಾನ ಹಲವಾರು ವರ್ಷಗಳಿಂದ ರಸ್ತೆ ಹದ ಗೆಟ್ಟು ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಬೆಳ್ಳೆಚಾರ್ -ಉರ್ಕಿ ರಸ್ತೆಯನ್ನು ಕಾಂಕ್ರೀಟ್ ಹಾಗೂ ಡಾಮರು ಕಾಮಗಾರಿಗೆ ಅನುದಾನ ಒದಗಿಸಿದ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರನ್ನು ರಿಕ್ಷಾ ಚಾಲಕ ಹಾಗೂ ಮಾಲಕರು ಸಮ್ಮಾನಿಸಿದರು.
ಜಿ.ಪಂ. ಮಾಜಿ ಸದಸ್ಯ ಜರ್ನಾದನ ಗೌಡ, ಬಡಗ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕೆ.ವಿ., ಉಪಾಧ್ಯಕ್ಷೆ ಯಶೋಧಾ, ಪಿಡಿಒ ಸವಿತಾ, ಸದಸ್ಯರಾದ ವಸಂತಿ, ಪ್ರದೀಪ್, ಚಂದ್ರಹಾಸ, ಮೋಹಿನಿ, ಸವಿತಾ ಎಸ್. ಕಮಲಾಕ್ಷಿ, ಶ್ರೀಲತಾ, ವರುಣ್ ಕುಮಾರ್, ರಾಮಕೃಷ್ಣ, ಮಾಜಿ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ, ಲಲಿತಾ ಶೆಟ್ಟಿಗಾರ್, ಕಾರ್ಯದರ್ಶಿ ಲಕ್ಷ್ಮಣ ಸಫಲಿಗ, ಪ್ರಸಾದ್ ಕುಮಾರ್, ತಾರಾನಾಥ ಸಫಲಿಗ, ಸುದರ್ಶನ್ ಪೂಂಜ, ಎಂಜಿನಿಯರ್ ಮಮತಾ, ಕೃತಿಕಾ, ಸಿಬಂದಿ ಸತೀಶ್, ಮಿಥುನ್, ಚೈತ್ರಾ, ಸಾವಿತ್ರಿ, ಕೇಸರಿ, ಉಮಾವತಿ ಉಪಸ್ಥಿತರಿದ್ದರು.
ಅಭಿವೃದಿ ಕಾಮಗಾರಿಗಳು
ದೂಮಚಡವು ಸಾರ್ವಜನಿಕ ಶೌಚಾಲಯ, ಬಡಗ ಎಡಪದವು ಗ್ರಾಮ ಪಂಚಾಯತ್ ಸೋಲಾರ್ ಮೇಲ್ಛಾವಣಿ, ಅಮೃತ್ ಉದ್ಯಾನವನ, ಕಾಂಬೆಟ್ಟು ದೇವಸ್ಥಾನ ಅವರಣದ ಇಂಟರ್ ಲಾಕ್ ಮತ್ತು ಹೈಮಾಸ್ಟ್ ದೀಪ, ದಡ್ಡಿ ಅಂಗನ ವಾಡಿ ಅಭಿವೃದ್ಧಿ, ಘನತ್ಯಾಜ್ಯ ಘಟಕದ ಗೋಡೌನ್, ಬೆಳ್ಳೆಚಾರ್ -ಉರ್ಕಿ ರಸ್ತೆ ಅಭಿವೃದ್ಧಿ, ಲತ್ರೊಟ್ಟು ಕಾಲನಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗ ಉದ್ಘಾಟನೆ ನಡೆಯಿತು. ಕಲೆಂಬಿ ಪಲ್ಕೆ ರಸ್ತೆ ಅಭಿವೃದ್ಧಿ, ಬೊಟ್ಲಾಯಿರಸ್ತೆ ಅಭಿವೃದ್ಧಿ, ಬೆಳ್ಳೆಚಾರ್ ವೆಂಟೆಡ್ ಡ್ಯಾಂ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಸಿಂಟೆಕ್ಸ್ ವಿತರಣೆ, 19 ವಸತಿ ಫಲಾನುಭವಿಗಳ ಕಾಮಗಾರಿ ಆದೇಶ ಪತ್ರವನ್ನು ಶಾಸಕ ಡಾ| ಭರತ್ ಶೆಟ್ಟಿ ವೈ. ವಿತರಣೆ ಮಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.