![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Apr 27, 2022, 1:06 PM IST
ಕಾಟಿಪಳ್ಳ: ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 3ನೇ ವಾರ್ಡ್ ಕಾಟಿಪಳ್ಳದಲ್ಲಿ ಸುಮಾರು 1.10 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ| ಭರತ್ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿದರು.
ರಾಜ್ಯ ಸರಕಾರದ ಅಲ್ಪಸಂಖ್ಯಾಕ ನಿಧಿಯಿಂದ 75 ಲಕ್ಷ ರೂ. ವೆಚ್ಚದಲ್ಲಿ ಚರ್ಚ್ ರೋಡ್ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡು ಉದ್ಘಾಟಿಸಲಾಯಿತು. ಕರಾವಳಿ ಪ್ರಾಧಿಕಾರ ನಿಧಿಯಿಂದ ರಸ್ತೆ ಕಾಂಕ್ರೀಟ್ ಕಾಮಗಾರಿ 20ಲಕ್ಷ ರೂ. ಅನುದಾನದಲ್ಲಿ ಬೊಳ್ಳಾಜೆ ಸಂಪರ್ಕ ರಸ್ತೆ ಉದ್ಘಾಟನೆ, ಮನಪಾ ಸಾಮಾನ್ಯ ನಿಧಿಯ 5ಲಕ್ಷ ರೂ. ಅನುದಾನದಲ್ಲಿ ಲಕ್ಷ್ಮೀನಾರಾಯಣ ಕಟ್ಟೆ ಬಳಿ ತಡೆಗೋಡೆ ನಿರ್ಮಾಣ ಉದ್ಘಾಟನೆ, ಮನಪಾ 15ನೇ ಹಣಕಾಸು ಯೋಜನಡಿ 5ಲಕ್ಷ ರೂ. ವೆಚ್ಚದಲ್ಲಿ 1ನೇ ಬ್ಲಾಕ್ ವಸಂತಿ ಮನೆಬಳಿ ರಸ್ತೆ ಕಾಂಕ್ರೀಟ್ ಕಾಮಗಾರಿ ಉದ್ಘಾಟನೆ, ಮ. ನ. ಪಾ. 24.10 ಯೋಜನಾ ನಿಧಿಯಿಂದ 5 ಲಕ್ಷ ರೂ ಅನುದಾನದಲ್ಲಿ ಕೃಷ್ಣ ಸಮಾಜ ಸೇವಾ ಸಂಘದ ಮುಂದುವರಿದ ಕಾಮಗಾರಿ ಗುದ್ದಲಿಪೂಜೆ ನೆರವೇರಿಸಲಾಯಿತು.
ಬಳಿಕ ಶಾಸಕರು ಮಾತನಾಡಿ, ಕ್ಷೇತ್ರದಲ್ಲಿ ಹೆಚ್ಚಿನ ಮೂಲಸೌಕರ್ಯ ಅಗತ್ಯತೆಯನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ಹಾಕಿ ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳವಾಗಿ ಪರಿವರ್ತಿಸಲಾಗುವುದು. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ, ಉದ್ದಿಮೆ, ಸೇವಾ ಕ್ಷೇತ್ರಗಳಿಗೆ ಈ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ ಎಂದರು. ಪಾಲಿಕೆ ಸದಸ್ಯರಾದ ಲೋಕೇಶ್ ಬೊಳ್ಳಾಜೆ ಪ್ರಾಸ್ತಾವಿಸಿದರು.
ಪ್ರಮುಖರಾದ ಚರ್ಚ್‌ನ ಕೊಸೆಸ್ ಫೆರ್ನಾಡಿಸ್, ಚಾಲ್ಸ್ ಡಿ’ಸೋಜಾ, ಪೌಲ್ ಡಿ’ಸೋಜಾ, ಸಂಘದ ಅಧ್ಯಕ್ಷರಾದ ಹರೀಶ್ ಪಣಂಬೂರು, ಕಾರ್ಯದರ್ಶಿ ಗೋಪಾಲ ಕಾಟಿಪಳ್ಳ, ಭೋಜ ಕೃಷ್ಣಾಪುರ, ಜಯಪ್ರಕಾಶ್, ಜಯಕುಮಾರ್, ಮಹೇಶ್, ವಿಠಲ್ ಶೆಟ್ಟಿಗಾರ್, ಶೈಲಜಾ ಗಣೇಶ್ ಕಟ್ಟೆ, ಹೊನ್ನಯ್ಯ ಕೋಟ್ಯಾನ್, ಗಣೇಶ್, ಗಿರಿಧರ್ ಶೆಟ್ಟಿ, ಸಪ್ನಾ ಸುನಿಲ್, ಆರತಿ, ಮಾಧವ ಉಪಸ್ಥಿತರಿದ್ದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.