ಮಾನಸಿಕ ಸದೃಢತೆಗೆ ಆಚರಣೆಗಳು ಪೂರಕ: ದಯಾನಂದ ಕತ್ತಲ್‌ಸಾರ್
Team Udayavani, Jul 22, 2018, 12:46 PM IST
ಮಹಾನಗರ: ತುಳುವರು ಪ್ರಕೃತಿ ಆರಾಧಕರು. ದೈಹಿಕ ವ್ಯಾಧಿ ಉಂಟಾದಲ್ಲಿ ಪ್ರಕೃತಿಯಲ್ಲಿ ಸಾವಿರಾರು ಔಷಧ ಸಸ್ಯಗಳಿವೆ. ಅದೇ ರೀತಿಯಲ್ಲಿ ಮಾನಸಿಕವಾಗಿ ವ್ಯಕ್ತಿಯೊಬ್ಬನು ಸದೃಢವಾಗಿರಲು ಉತ್ತಮ ಆಚರಣೆಗಳಿವೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್‌ಸಾರ್ ಅಭಿಪ್ರಾಯಪಟ್ಟರು.
ನಗರದ ಬೆಸೆಂಟ್ ಸಂಸ್ಥೆಯ ಶತಮಾನೋತ್ಸವ ಪ್ರಯುಕ್ತ ಬೆಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಜು. 21ರಂದು ಆಯೋಜಿಸಿದ್ದ ಅಂತರ್ ಕಾಲೇಜು ತುಳು ಪಾಡ್ದನ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅವ್ಯಕ್ತ ಶಕ್ತಿಯೊಂದು ಪ್ರಕೃತಿಯಲ್ಲಿದೆ. ಅದು ಜಾತಿ ಭೇದ ಇಲ್ಲದೆ ಎಲ್ಲರಿಗೂ ಸಲ್ಲುವ ಶಕ್ತಿ ಎಂದರು.
ಪಾಡ್ದನಗಳನ್ನು ಹೇಗೆ, ಎಲ್ಲಿ ಮತ್ತು ಏಕೆ ಹಾಡಬಹುದೆಂದು ವಿವರಿಸಿ ರಾಗ ಮತ್ತು ಶಬ್ದಗಳ ಅಪಬ್ರಂಶವಾಗದೆ ಸಂದರ್ಭಕ್ಕೆ ತಕ್ಕಂತೆ ಸರಿಯಾದ ದಾಟಿಯಲ್ಲಿ ಹಾಡುವುದರಿಂದ ಜನಪದ ಸೊಗಡನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಹಳೆಯದರಲ್ಲಿ ಹೊಸತು ಕಾಣಿ
ಶೈಕ್ಷಣಿಕ ಸಲಹೆಗಾರ್ತಿ ಲಲಿತಾ ಜಿ. ಮಲ್ಯ ಅವರು, ಹಳೆಯದರಲ್ಲಿ ಹೊಸತನ್ನು ಕಾಣುವ ಮನೋಭಾವ ಬೆಳೆಯಬೇಕೆಂದು ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು. ಡಾ| ಅನ್ನಿಬೆಸೆಂಟ್ ಅವರ ಮಹಿಳಾ ಶಿಕ್ಷಣ ಬಗೆಗಿನ ಸಾಧನೆಗಳನ್ನು ವಿವರಿಸಿ ಮಾನವೀಯ ಕಳಕಳಿಗೆ ದೇಶಗಳ ಮೇರೆಗಳಿಲ್ಲ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕಾತ್ಯಾಯಿನಿ ಸೀತಾರಾಂ ಅವರು ಬೆಸೆಂಟ್ ಶಾಲೆಯ ಶತಮಾನೋತ್ಸವ ಕಟ್ಟಡದ ಬಗ್ಗೆ ವಿವರಿಸಿದರು. ಪಿಯುಸಿ ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ಡಾ| ಅನ್ನಿಬೆಸೆಂಟ್ ರವರ ಪೆನ್ಸಿಲ್ ಸ್ಕೆಚ್ ಹಾಗೂ ತುಳು ಪಾಡªನ ಸ್ಪರ್ಧೆ ನಡೆಯಿತು. ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ನಾಯಕ್‌ರೂಪ ಸಿಂಗ್ ಜಿ. ಸ್ವಾಗತಿಸಿದರು. ವಿಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಕಾರ್ಯದರ್ಶಿ ದೇವಾನಂದ ಪೈ, ಬೆಸೆಂಟ್ ಪದವಿಪೂರ್ವ ಕಾಲೇಜಿನ ಸಂಚಾಲಕ ಎಂ. ಸುರೇಶ್ ಎನ್. ಮಲ್ಯ, ಹಳೆ ವಿದ್ಯಾರ್ಥಿ ಓಂ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಕೃಪಾಕ್ಷಿ ವಂದಿಸಿದರು.
ಸಮ್ಮಾನ
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಜನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಾಗೂ ನೈಸರ್ಗಿಕ ರೀತಿಯಲ್ಲಿ 250ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ ಸಾಂಪ್ರದಾಯಿಕ ಸೂಲಗಿತ್ತಿ ಹಾಗೂ ಪಾಡ್ದನ ಗಾಯಕಿ ಭವಾನಿ ಪೆರ್ಗಡೆ ಅವರನ್ನು ಸಮ್ಮಾನಿಸಲಾಯಿತು. ಭವಾನಿ ಪೆರ್ಗಡೆಯವರು ಪಾಡ್ದನಗಳನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.