ಮಂಗಳೂರು “ಸೀಲ್ ಡೌನ್” ಆಗಿದೆಯೇ? ತರಕಾರಿ ಅಂಗಡಿಯೂ ಬಂದ್ ಆಗಲಿವೆಯೇ? ವಾರ್ತಾಇಲಾಖೆ ಸ್ಪಷ್ಟನೆ
Team Udayavani, Apr 10, 2020, 11:49 AM IST
ಮಂಗಳೂರು: ಕೋವಿಡ್-19 ಸೋಂಕು ಹಿನ್ನಲೆ ನಗರದಲ್ಲಿ ಸೀಲ್ ಡೌನ್ ಆಗಿದೆ. ಇನ್ನು ಯಾರೂ ಹೊರಗೆ ಬರುವಂತಿಲ್ಲ, ದಿನದಲ್ಲಿ ಸ್ವಲ್ಪ ಸಮಯವೂ ದಿನಸಿ ಅಂಗಡಿಗಳು ತೆರೆದಿರಲ್ಲ ಎಂಬ ತರಹೇವಾರಿ ಸುದ್ದಿಗಳು ಹರಿದಾಡುತ್ತಿದೆ. ಈ ಎಲ್ಲಾ ಸುದ್ದಿಗಳಿಗೆ ವಾರ್ತಾ ಇಲಾಖೆ ಸ್ಪಷ್ಟನೆ ನೀಡಿದೆ.
ಈ ಸುದ್ದಿಗಳ ಬಗ್ಗೆ ವಾರ್ತಾ ಇಲಾಖೆ ಸ್ಪಷ್ಟನೆ ನೀಡಿದ್ದು, ಇದೊಂದು ನಿರಾಧಾರ ಸುದ್ದಿ ಆಗಿದೆ. ಮಂಗಳೂರು ನಗರದಲ್ಲಿ ಯಾವುದೇ ಸೀಲ್ ಡೌನ್ ಪ್ರಕ್ರಿಯೆ ನಡೆಯುತ್ತಿಲ್ಲ. ಈಗಾಗಲೇ ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಪ್ರಕ್ರಿಯೆ ಜಾರಿಯಲ್ಲಿದೆ. ಇದನ್ನೇ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ ಎಂದಿದೆ.
ಇಂತಹ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುವ ಮೊದಲು ಸಂಬಂಧಪಟ್ಟವರಿಂದ ದೃಢೀಕರಿಸಲು ಕೋರಲಾಗಿದೆ. ವದಂತಿ, ಅಧಾರ ರಹಿತ ಸುದ್ದಿಗಳ ಪ್ರಸಾರದಿಂದ ಸಾರ್ವಜನಿಕರಲ್ಲಿ ಆತಂಕ, ಗೊಂದಲ ಮೂಡುತ್ತಿದೆ ಎಂದು ವಾರ್ತಾ ಇಲಾಖೆ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.