ಸೋಂಕಿತರಿಗೆ ನೀಡುವ ರೋಗಿ ಸಂಖ್ಯೆ ದೈನಂದಿನ ಬುಲೆಟಿನ್‌ನಲ್ಲಿ ಬರಲು ನಾಲ್ಕು ದಿನ ಬೇಕು!


Team Udayavani, Aug 26, 2020, 6:02 AM IST

ಸೋಂಕಿತರಿಗೆ ನೀಡುವ ರೋಗಿ ಸಂಖ್ಯೆ ದೈನಂದಿನ ಬುಲೆಟಿನ್‌ನಲ್ಲಿ ಬರಲು ನಾಲ್ಕು ದಿನ ಬೇಕು!

ಸಾಂದರ್ಭಿಕ ಚಿತ್ರ

ಮಹಾನಗರ: ಕೋವಿಡ್ ತಪಾಸಣೆಗೆ ಒಳಪಟ್ಟ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟು ಫಲಿತಾಂಶ ಪಾಸಿಟಿವ್‌ ಬಂದಲ್ಲಿ ಆ ವ್ಯಕ್ತಿಗೆ ಅದೇ ದಿನ ಅಥವಾ ಮರುದಿನ ರಾಜ್ಯ ಸರಕಾರದ “ಆಪ್ತ ಮಿತ್ರ’ ಸಹಾಯವಾಣಿ ಕಚೇರಿಯಿಂದ ಮಾಹಿತಿ ಲಭಿಸುತ್ತದೆ ಹಾಗೂ ರೋಗಿಸಂಖ್ಯೆ ಕೂಡ ತಿಳಿಸಲಾಗುತ್ತದೆ.

ಆದರೆ ಕೆಲವೊಂದು ಸಂದರ್ಭಗಳಲ್ಲಿ ರೋಗಿಸಂಖ್ಯೆ ಆಯಾ ಜಿಲ್ಲೆಯ ಕೋವಿಡ್ ವರದಿಯ ಬುಲೆಟಿನ್‌ನಲ್ಲಿ ನಮೂದಾಗಲು ಕೆಲವು ದಿನಗಳೇ ಬೇಕಾಗುತ್ತಿದ್ದು, ಇದು ಅನೇಕ ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ.  ಇದು ಜಿಲ್ಲಾ ಮಟ್ಟದಲ್ಲಿ ಪ್ರತಿ ದಿನ ಸಂಜೆ ಹೊತ್ತು ಪ್ರಕಟಿಸಲಾಗುವ ಕೋವಿಡ್ ರೋಗಿಗಳ (ಪಾಸಿಟಿವ್‌) ಅಂಕಿಸಂಖ್ಯೆ ಎಷ್ಟು ಸರಿ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ. ಅಲ್ಲದೇ ಸೋಂಕಿತರ ಸಂಖ್ಯೆಯನ್ನು ಆಯಾ ದಿನದಂದೇ ತೋರಿಸುವ ಬದಲು ದಿನವಾರು ಹಂಚಿಕೆ ಮಾಡಿ ಬುಲೆಟಿನ್‌ನಲ್ಲಿ ಪ್ರದರ್ಶಿಸಲಾಗುತ್ತಿದೆಯೇ ಎಂಬ ಸಂದೇಹಕ್ಕೆ ಕಾರಣವಾಗುತ್ತಿದೆ.

ಒಂದು ನಿದರ್ಶನ
ಮಂಗಳೂರಿನಲ್ಲಿ ಇತ್ತೀಚೆಗೆ ಕೋವಿಡ್ ತಪಾಸಣೆಗೆ ಒಳಗಾದ ವ್ಯಕ್ತಿಗೆ ಫಲಿತಾಂಶ ಪಾಸಿಟಿವ್‌ ಬಂದು ಪೇಶಿಯಂಟ್‌ ನಂಬರ್‌ ಅದೇ ದಿನ ನೀಡಲಾಗಿದೆ. ಆದರೆ ಈ ನಂಬರ್‌ ಜಿಲ್ಲೆಯ ಕೋವಿಡ್ ವರದಿಯ ಬುಲೆಟಿನ್‌ನಲ್ಲಿ ಸೇರ್ಪಡೆಯಾಗಲು ಬರೊಬ್ಬರಿ 4 ದಿನ ತಗಲಿದೆ!

ವ್ಯಕ್ತಿಯೋರ್ವರಿಗೆ ಇತ್ತೀಚೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ತಪಾಸಣೆ (ಆ್ಯಂಟಿಜೆನ್‌ ಟೆಸ್ಟ್‌) ನಡೆದಿತ್ತು. ಅದೇ ದಿನ ರಾತ್ರಿ ಅವರಿಗೆ ಬೆಂಗಳೂರಿನ ಆಪ್ತಮಿತ್ರ ಸಹಾಯವಾಣಿ ಕಚೇರಿಯಿಂದ ಕರೆ ಮಾಡಿ ವರದಿ ಪಾಸಿಟಿವ್‌ ಎಂಬ ಮಾಹಿತಿ ಲಭಿಸಿದೆ. ಜತೆಗೆ ರೋಗಿ ಸಂಖ್ಯೆಯನ್ನೂ ತಿಳಿಸಲಾಗಿದೆ. ಆದರೆ ಆ ವ್ಯಕ್ತಿಗೆ ನೀಡಿರುವ ರೋಗಿ ಸಂಖ್ಯೆ ಜಿಲ್ಲೆಯ ಬುಲೆಟಿನ್‌ನಲ್ಲಿ ನಾಲ್ಕು ದಿನಗಳ ಬಳಿಕ ಸೇರ್ಪಡೆಗೊಂಡಿತ್ತು. ಆದರೆ ವಿಶೇಷ ಎಂದರೆ ಅವರ ಕುಟುಂಬದ ಇನ್ನೋರ್ವ ಸದಸ್ಯರಿಗೆ ಪಾಸಿಟಿವ್‌ ಬಂದ ಕಾರಣ ನೀಡಲಾದ ರೋಗಿಸಂಖ್ಯೆ ಮರು ದಿನದ ಬುಲೆಟಿನ್‌ನಲ್ಲಿ ನಮೂದಾಗಿದೆ. ಇಂತಹ ಎಡವಟ್ಟು ಯಾಕಾಗುತ್ತದೆ ಎನ್ನುವುದು ವಿಚಿತ್ರ. ಈಗಾಗಲೇ ಕೋವಿಡ್ ತಪಾಸಣೆ, ವರದಿ ಇತ್ಯಾದಿ ವಿಷಯಗಳ ಕುರಿತಂತೆ ಜನರಲ್ಲಿ ಸಾಕಷ್ಟು ಅನುಮಾನಗಳಿದ್ದು, ಇಂತಹ ಎಡವಟ್ಟಿನ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ಸಂಶಯ ಮತ್ತು ಗೊಂದಲಗಳು ಮತ್ತಷ್ಟು ಜಾಸ್ತಿಯಾಗಲು ಕಾರಣವಾಗುತ್ತಿವೆ.

ಅಂಕಿ-ಅಂಶಗಳ ನಿಖರತೆ ಅಗತ್ಯ
ಸಾಮಾನ್ಯವಾಗಿ ಕೋವಿಡ್ ತಪಾಸಣೆಗೆ ಒಳಪಟ್ಟ ವ್ಯಕ್ತಿಯ ವರದಿ ಪಾಸಿಟಿವ್‌ ಬಂದಲ್ಲಿ ಮರು ದಿನವೇ ಜಿಲ್ಲೆಯ ಸೋಂಕಿತರ ಪಟ್ಟಿಯಲ್ಲಿ ಸೇರ್ಪಡೆಗೊಂಡು ಜಿಲ್ಲಾ ಬುಲೆಟಿನ್‌ನಲ್ಲಿ ಆತನ ಪೇಶಿಯಂಟ್‌ ನಂಬರ್‌ ನಮೂದಾಗುತ್ತದೆ. ಅಲ್ಲದೆ ಅಂಕಿ-ಅಂಶಗಳ ನಿಖರತೆಯನ್ನು ಕಾಯ್ದುಕೊಂಡು ಬರ ಬೇಕಾದರೆ ಮರುದಿನದ ಬುಲೆಟಿನ್‌ನಲ್ಲಿ ಅದು ನಮೂದಾಗಲೇಬೇಕು. ಆದರೆ ಕೆಲವೊಂದು ಪ್ರಕರಣಗಳಲ್ಲಿ ಹಾಗಾಗುತ್ತಿಲ್ಲ ಎನ್ನುವುದು ವಾಸ್ತವ.

ಡೇಟಾ ಎಂಟ್ರಿಯಲ್ಲಾಗುವ ವಿಳಂಬ ಸಾಧ್ಯತೆ
ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದಾಗಿ ಆರೋಗ್ಯ ಇಲಾಖೆಯ ಮೇಲೆ ಕೆಲಸದ ಹೊರೆ ಜಾಸ್ತಿ ಆಗುತ್ತಿದೆ. ಡೇಟಾ ಎಂಟ್ರಿ ಮಾಡುವಲ್ಲಿ ವಿಳಂಬ ಆಗುವುದರಿಂದ ಈ ರೀತಿಯ ಎಡವಟ್ಟುಗಳು ಆಗುವ ಸಾಧ್ಯತೆ ಇದೆ.
– ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ.

ಟಾಪ್ ನ್ಯೂಸ್

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Anwar-Manippady

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

Pocso

Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ

1-doct

Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.