ಟಿಕೆಟ್ ನೀಡಿದರೆ ಸ್ಪರ್ಧೆ; ಮಂದಿರ ನಿಲುವಿಗೆ ಬದ್ಧ: ಜನಾರ್ದನ ಪೂಜಾರಿ
Team Udayavani, Dec 10, 2018, 11:10 AM IST
ಮಂಗಳೂರು: ಪಕ್ಷ ಟಿಕೆಟ್ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಪರ್ಧಿಸುವೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಆಶ್ರಮಗಳಿಗೆ ಹಣ್ಣು ಹಂಪಲು ವಿತರಣೆ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಕ್ಷದ ಚಟುವಟಿಕೆಗಳು ಯಾವ ರೀತಿ ನಡೆಯುತ್ತಿವೆ ಎಂಬ ಬಗ್ಗೆ ಪಕ್ಷ ನನ್ನಿಂದ ಮಾಹಿತಿ ಪಡೆ ಯುತ್ತಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಅಭ್ಯರ್ಥಿ ಸಹಿತ ಎಲ್ಲರೂ ಪರಿಶ್ರಮದಿಂದ ಕೆಲಸ ಮಾಡಬೇಕು. ಉತ್ತಮ ಕೆಲಸ ಮಾಡುವ ಕುರಿತು ಜನರಲ್ಲಿ ನಂಬಿಕೆ ಮೂಡಿಸಬೇಕು. ನಂಬಿಕೆ ಇಲ್ಲದಿದ್ದರೆ ನಾನು ಸಹಿತ ಯಾರೂ ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಿಲ್ಲ. ನನ್ನ ಬಗ್ಗೆ ನಂಬಿಕೆ ಇದ್ದರೆ ಟಿಕೆಟ್ ಕೊಡಲಿ. ಯಾರೇ ನಿಲ್ಲಲಿ ಗೆಲ್ಲಬೇಕು ಎಂದರು.
ರಾಮ ಮಂದಿರ: ಹೇಳಿಕೆಗೆ ಬದ್ಧ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆಯಾಗಬೇಕು ಎಂಬುದು ಎಲ್ಲ ಹಿಂದೂಗಳ ಆಸೆ. ಆ ಬಗ್ಗೆ ನಾನು
ಹೇಳಿದ್ದು ತಪ್ಪು ಅನ್ನಿಸುವುದಿಲ್ಲ. ಹೇಳಿಕೆಗೆ ನಾನು ಇಂದಿಗೂ ಬದ್ಧನಾಗಿದ್ದೇನೆ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ ಎಂದು ಜನಾರ್ದನ ಪೂಜಾರಿ ಸ್ಪಷ್ಟಪಡಿಸಿದರು.
ನನ್ನ ದೃಷ್ಟಿಯಲ್ಲಿ ಶ್ರೀರಾಮಚಂದ್ರ, ಏಸುಕ್ರಿಸ್ತ, ಪೈಗಂಬರ್ ಎಲ್ಲರೂ ದೇವರುಗಳೇ. ಹಾಗೆಂದು ನೀವೂ ನಂಬಿ ಎಂದು ಯಾರ ಮೇಲೂ ಒತ್ತಡ ಹೇರುವುದಿಲ್ಲ. ಆ ಕಾರಣಕ್ಕೆ ನನ್ನ ವಿರುದ್ಧ ಹೇಳಿಕೆ ಕೊಡುವ, ಕೊಲ್ಲಲು ಹೇಳುವವರೂ ಇದ್ದಾರೆ. ನಾನು ಸಾಯುವ ತನಕ ಅದನ್ನೇ ಹೇಳುತ್ತೇನೆ. ಬೇಕಾದರೆ ನಂಬಿ, ಇಲ್ಲದಿದ್ದರೆ ಬಿಡಿ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ
Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.