Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ
Team Udayavani, Oct 18, 2024, 2:21 PM IST
ಜೋಕಟ್ಟೆ: ಕೂಳೂರಿನಿಂದ ಕೈಗಾರಿಕೆ ವಲಯವಾಗಿ ಜೋಕಟ್ಟೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದ್ವಿಚಕ್ರ, ಕಾರು, ಟೆಂಪೋಗಳ ಚಕ್ರಗಳು ಹೊಂಡದೊಳಗೆ ಸಿಲುಕುತ್ತಿದ್ದು, ಮೇಲೇಳಲು ಏದುಸಿರು ಬಿಡುವಂತಾಗಿದೆ.
ಇಲ್ಲಿನ ವಿಶೇಷ ಆರ್ಥಿಕ ವಲಯಕ್ಕೆ ಸುಸಜ್ಜಿತ ಮೇಲ್ಸೇತುವೆಯಾದ ಬಳಿಕ ಹಳೆಯ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುವವರಿಲ್ಲದೆ ಹಾಗೆಯೇ ಬಿಡಲಾಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.
ಮಂಗಳೂರಿನಿಂದ ಜೋಕಟ್ಟೆ ಗ್ರಾಮಕ್ಕೆ ಹೋಗುವ ಮಂದಿಗೆ ಇದೇ ಹತ್ತಿರದ ದಾರಿಯಾಗಿದ್ದು, ಬೈಕಂಪಾಡಿ ಸುತ್ತುಬಳಸಿ ಹೋಗುವುದು ತಪ್ಪುತ್ತಿದೆ. ಇದೀಗ ಇಲ್ಲಿನ ರಸ್ತೆ ವಾಹನಗಳಿಗೆ ಕಂಟಕವಾಗಿ ಪರಿಣಮಿಸಿದೆ. ಬಿಡಿ ಭಾಗಗಳೂ ಉದುರಿಹೋಗುವಷ್ಟು ಹೊಂಡಗಳಿದ್ದು ದುರಸ್ತಿ ಮಾಡಲಾಗುತ್ತಿಲ್ಲ. ಕೈಗಾರಿಕಾ ವಲಯಕ್ಕೂ ಸಂಪರ್ಕದ ಮುಖ್ಯ ರಸ್ತೆಯಾಗಿ ಇದು ಬಳಕೆಯಾಗುತ್ತಿದೆ.
ನಿರ್ಲಕ್ಷಿತ ರಸ್ತೆ
ಆರಂಭದಲ್ಲಿ ವಿಶೇಷ ಆರ್ಥಿಕ ಪ್ರದೇಶಕ್ಕೆ ರಸ್ತೆ ಸಂಪರ್ಕ ಅಗತ್ಯವಿದ್ದಾಗ ಕುದುರೆ ಮುಖ ಕೈಗಾರಿಕ ಘಟಕದ ಬಳಿಯಿಂದ ಈ ರಸ್ತೆ ನಿರ್ಮಿಸಲಾಗಿತ್ತು. ಎಸ್‌ಇಝಡ್‌ಗೆ ಈಗ ಹೊಸ ಮೇಲ್ಸೇತುಯೇ ಹತ್ತಿರದ ದಾರಿಯಾಗಿದ್ದು ರೈಲ್ವೇ ಕ್ರಾಸಿಂಗ್‌ಗೆ ಕಾಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ರಸ್ತೆ ಇದೀಗ ಕೈಗಾರಿಕೆ ಪ್ರಾಂಗಣಕ್ಕೆ ತಲುಪಲು ಪ್ರಯೋಜನಕಾರಿಯಾಗಿದೆ. ಇದೀಗ ಈ ರಸ್ತೆಯ ದುರಸ್ತಿ ಕೆಐಎಡಿಬಿ ಆಥವಾ ಎಸ್‌ಇಝಡ್ ಮಾಡಬೇಕೆ ಎಂಬುದೇ ಪ್ರಶ್ನೆಯಾಗಿದೆ.
ಕಳಪೆ ತೋಡು ಸಮಸ್ಯೆ
ಇದೇ ರಸ್ತೆಯ ಬದಿಯಲ್ಲಿರುವ ತೋಡನ್ನು ಹೂಳೆತ್ತೆದೆ ಹಾಗೆಯೇ ಬಿಡಲಾಗಿದ್ದು, ಸಣ್ಣ ಮಳೆ ಬಂದರೂ ನೀರು ರಸ್ತೆ ಮೇಲೆ ನಿಲ್ಲುತ್ತದೆ. ಅಸಮರ್ಪಕ ನಿರ್ವಹಣೆಯಿಂದ ನೀರು ನಿಂತು ಘನ ವಾಹನಗಳ ಓಡಾಟ ಸಂದರ್ಭ ರಸ್ತೆ ಹದಗೆಡುತ್ತಿದೆ. ಆಟೋ ರಿಕ್ಷ ಚಾಲಕರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಾರೆ. ಕೈಗಾರಿಕೆಗಳ ಘನ ವಾಹನಗಳು ಈ ರಸ್ತೆಯಲ್ಲಿ ನಿರಂತರ ಓಡಾಟ ನಡೆಸುತ್ತಿದ್ದು, ನಿರ್ವಹಣೆಗೆ ಸಂಬಂಧಿಸಿ ಯಾರೂ ಜವಾಬ್ದಾರಿ ಹೊತ್ತುಕೊಳ್ಳುತ್ತಿಲ್ಲ.
ಮನವಿಗೂ ಸ್ಪಂದಿಸಿಲ್ಲ
ಇಲ್ಲಿನ ರಸ್ತೆ ಒಟ್ಟು ಐದು ಕಡೆ ತೀವ್ರವಾಗಿ ಹದಗೆಟ್ಟಿದ್ದು ಸಣ್ಣ ವಾಹನಗಳು ಓಡಾಡಲು ಅಸಾಧ್ಯವಾ ಗಿದೆ. ಮಳೆ ನೀರು ನಿಂತರೆ ಹೊಂಡದ ಆಳ ತಿಳಿಯದೆ ದ್ವಿಚಕ್ರ ಸವಾರರು ಸಿಲುಕಿ ಕೊಳ್ಳುತ್ತಾರೆ. ವಾಹನದ ಬಿಡಿ ಭಾಗಗಳಿಗೆ ಹಾನಿಯಾಗುತ್ತಿದೆ. ಇಲ್ಲಿನ ಕೈಗಾರಿಕ ಸಂಘದ ಮನವಿಗೂ ಸ್ಪಂದನೆ ಸಿಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.