ಬರೀ ಸುಂಕ ಕಟ್ಟಿದರೆ ಸಾಕೇ? ರಸ್ತೆ ಬೇಡವೇ?


Team Udayavani, Jul 17, 2019, 5:00 AM IST

n-25

ಸುರತ್ಕಲ್: ಮುಕ್ಕ- ಸುರತ್ಕಲ್ ಟೋಲ್ಗೇಟ್‌ನಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೂ ಟೋಲ್ ಸಂಗ್ರಹಿಸುವ (ಒಂದು ಬಾರಿಗೆ 25 ರೂ. ನಂತೆ) ಪದ್ಧತಿ ಜಾರಿಗೆ ಜಿಲ್ಲಾಧಿಕಾರಿಗಳು ಮೂರು ದಿನಗಳ ತಡೆ ನೀಡಿದ್ದಾರೆ. ವಿವಿಧ ಪಕ್ಷಗಳ ಮುಖಂಡರು, ವಿವಿಧ ನಾಗರಿಕ ಸಮಿತಿಗಳು ಶಾಶ್ವತ ಪರಿಹಾರವಾಗಿ ಸುಂಕ ವಸೂಲು ಮಾಡದಂತೆ ಆದೇಶಿಸ ಬೇಕೆಂದು ಪಟ್ಟು ಹಿಡಿದಿದ್ದಾರೆ.

ವಿಚಿತ್ರವೆಂದರೆ, ಈ ರಸ್ತೆಯಲ್ಲಿ ಸಾಗುವುದೇ ಒಂದು ಪ್ರಯಾಸದ ಸಂಗತಿ. ನಿನ್ನೆಯ ಸಂಚಿಕೆಯಲ್ಲಿ (ಜು. 16) ಪ್ರಕಟಿಸಿದ ಏಳು ಚಿತ್ರಗಳು ಒಂದೇ ಸ್ಥಳದ್ದು. ಅಂದರೆ ಆಸುಪಾಸಿನ ಚಿತ್ರಗಳು. ಹಾಗೆಂದು ಅಲ್ಲಿ ಮಾತ್ರ ಈ ಸಮಸ್ಯೆ ಎಂದುಕೊಂಡರೆ ತಪ್ಪು. ಬೇರೆ ವಾಹನಗಳ ಸವಾರರು ಸುತ್ತಮುತ್ತಲಿನ ಲೆಕ್ಕದಲ್ಲಿ ದುಬಾರಿಯೆನ್ನುವಷ್ಟು ಸುಂಕ ಕಟ್ಟಿಯೂ ಸಾಗಬೇಕಾದದ್ದು ಇಷ್ಟು ಹಾಳಾದ ರಸ್ತೆಯಲ್ಲಿ. ಸುಂಕ ಕಟ್ಟಿ ಜೇಬಿಗೆ ನಷ್ಟ ಮಾಡಿಕೊಂಡದ್ದಲ್ಲದೇ, ವಾಹನಗಳ ದುರಸ್ತಿಗೆ ಮತ್ತಷ್ಟು ಹಣ ಕಟ್ಟಬೇಕಾದ ಅನಿವಾರ್ಯತೆ ಸಾರ್ವಜನಿಕರದ್ದು.

ಪ್ರಮುಖ ರಾಷ್ಟ್ರೀಯ ಹೆದ್ದಾರಿ 66 ರ ಸ್ಥಿತಿ ಹೇಳತೀರದು. ಈ ಹೆದ್ದಾರಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಥೆ ಮುಗಿ ದಂತೆಯೇ ಎನ್ನುತ್ತಾರೆ ಹಲವು ವಾಹನ ಸವಾರರು.

ಪ್ರತ್ಯಕ್ಷ ಅನುಭವ
ಕೇವಲ, ಸುರತ್ಕಲ್ನಿಂದ ಬೈಕಂಪಾಡಿಯವರೆಗೆ ಸಂಚರಿಸಿ. ನಿಮ್ಮ ಅನುಭವಕ್ಕೆ ಬರುವುದು ಯಾವುದೋ ಜಿ.ಪಂ. ಅಥವಾ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ(ಇತ್ತೀಚೆಗೆ ಕೆಲವು ಜಿ.ಪಂ ರಸ್ತೆಗಳು ಹೆದ್ದಾರಿಯನ್ನೂ ನಾಚಿಸುವಂತಿವೆ ಎನ್ನುವುದೂ ಸುಳ್ಳಲ್ಲ) ಸಾಗಿದಂತೆ ಭಾಸವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಉತ್ತಮ ಗುಣಮಟ್ಟವೆನಿಸದ ರಸ್ತೆ ನಿರ್ಮಾಣ, ಅವೈಜ್ಞಾನಿಕ ತೇಪೆ ಕಾಮಗಾರಿ ಗಳು. ಟೋಲ್ ಗೇಟ್‌ಗೆಅನತಿ ದೂರದಲ್ಲೇ ಒಂದೇ ಮಳೆಗೆ ಹೊಂಡ ನಿರ್ಮಾಣವಾಗಿದೆ. ಹಾಗೆಯೇ ಮುಂದುವರಿಯಿರಿ, ಎನ್‌ಐಟಿಕೆ ಮುಂಭಾಗ ಕೈಗೊಂಡ ತೇಪೆ ಕಾಮಗಾರಿ ಅನುಭವಕ್ಕೆ ಬರುತ್ತದೆ. ಹಾಗಾಗಿ ವಾಹನ ಕುಲುಕಾಟ ತಪ್ಪಿದ್ದಲ್ಲ. ಏರು ತಗ್ಗು, ರಸ್ತೆಯ ಅಂಚಿನಲ್ಲಿ ಕಂದಕಗಳೂ ಸೃಷ್ಟಿಯಾಗಿ ವಾಹನ ಸವಾರರನ್ನು ಅಪಾಯದಲ್ಲಿ ಸಿಲುಕಿಸುವುದಂತೂ ಖಚಿತ.

ಮಳೆ ನೀರು ಸರಾಗವಾಗಿ ಹರಿದು ಹೋಗದೆ ಹೆದ್ದಾರಿ ಬದಿ ಶೇಖರಣೆಗೊಂಡು ದ್ವಿಚಕ್ರ ಸವಾರ ರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.ಸವಾರರು ಆಯತಪ್ಪಿ ಬಿದ್ದರೂ ಅಚ್ಚರಿ ಪಡುವಂತಿಲ್ಲ. ಇನ್ನು ಸುರತ್ಕಲ್ ಸೂರಜ್‌ ಹೋಟೆಲ್ ಮುಂಭಾಗ ಅಪಾಯಕಾರಿ ತಿರುವು ಮತ್ತು ತಿರುವಿನಲ್ಲಿ ಹೊಂಡ ಅಪಾಯವನ್ನು ಆಹ್ವಾನಿಸುತ್ತಿದೆ. ಇದಾವುದೂ ಸುಂಕ ವಸೂಲು ಮಾಡುವ ಕಂಪೆನಿಗಾಗಲೀ, ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕಾಗಲೀ ತೋರಿಲ್ಲ, ಹಾಗಾಗಿ ದುರಸ್ತಿಗೊಂಡಿಲ್ಲ.

ಎನ್‌ಐಟಿಕೆ ಟೋಲ್ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ರಿಯಾಯಿತಿ ಮೂರು ದಿನಗಳಿ ರಬಹುದು. ಆದರೆ ಶಾಶ್ವತವಾಗಿ ವಸೂಲು ಮಾಡ ಬಾರದೆಂದು ನಾಗರಿಕರ ಪ್ರತಿಭಟನೆ ಆರಂಭವಾಗಿದೆ. ಆದರೆ ರಾ. ಹೆದ್ದಾರಿ ಸಚಿವಾಲಯ, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಈ ಕೂಡಲೇ ಗಮನಿಸಬೇಕಾದದ್ದು ರಸ್ತೆಯ ಸ್ಥಿತಿ. ಹೀಗಿದ್ದ ಮೇಲೂ ಸುಂಕ ಕಟ್ಟುವ ಜನರ ಸಂಕಷ್ಟಕ್ಕೆ ನೆರವಾಗಬೇಕು. ಈ ನಿಟ್ಟಿನಲ್ಲಿ ಈ ಟೋಲ್ಗೇಟ್ ನ್ನು ತೆಗೆದು ಹಾಕುವತ್ತ ಜಿಲ್ಲಾಡಳಿತ ಸೇರಿ ದಂತೆ ಎಲ್ಲ ಇಲಾಖೆಗಳು ಕಾರ್ಯೋನ್ಮುಖ ವಾಗಬೇಕು. ಇದು ಜನರ ಆಗ್ರಹ.

ಲಕ್ಷ್ಮೀನಾರಾಯಣ ರಾವ್‌

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Mangaluru: ಗಾಂಜಾ ಸೇವನೆ; ಯುವಕನ ಬಂಧನ

14

Mangaluru: ಸ್ಕೂಟರ್‌ ಕಳವು; ಪ್ರಕರಣ ದಾಖಲು

16-moodbidri

Mudbidri: ದ್ವಿಚಕ್ರ ವಾಹನ ಅಪಘಾತ; ಗಾಯಾಳು ಸವಾರ ಮೃತ್ಯು

5

Bajpe: ಊರಿನ ಜಾರಿಗೆ ಸಿಪ್ಪೆಗೆ ಹೊರರಾಜ್ಯದಲ್ಲಿ ಬೇಡಿಕೆ

4(3

Mangaluru: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಬೇಸಾಯ ತಡವಾದರೂ ಉತ್ತಮ ಬೆಳೆ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.