ಕಡಬ: ಪ್ರತಿಷ್ಠಾ ವಾರ್ಷಿಕೋತ್ಸವ
Team Udayavani, May 19, 2018, 4:33 PM IST
ಕಡಬ: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 7ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ಜರಗಿತು. ಬೆಳಗ್ಗೆ ಗಣಪತಿ ಹೋಮ, ಚಂಡಿಕಾ ಯಾಗ ಪ್ರಾರಂಭಗೊಂಡು ಪಂಚ ವಿಂಶತಿ ಕಲಶಪೂಜೆ ನೆರವೇರಿತು. ಮಧ್ಯಾಹ್ನ ಚಂಡಿಕಾ ಯಾಗದ ಪೂರ್ಣಾಹುತಿ, ಸುವಾಸಿನೀ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ ನಡೆದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.
ಶ್ರೀ ದೇವರಿಗೆ ರಂಗಪೂಜೆ ನೆರವೇರಿತು. ಕಡಬದ ವಿದ್ಯಾನಗರದ ರಾಮ ಭಟ್ ಮತ್ತು ಮಕ್ಕಳು ಸೇವಾ ರೂಪದಲ್ಲಿ ಸುಮಾರು 74 ಸಾವಿರ ರೂ. ಮೌಲ್ಯದ ಕಂಚಿನ ಘಂಟೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಸದಸ್ಯರಾದ ನೀಲಾವತಿ ಶಿವರಾಮ, ಶಾಲಿನಿ ಸತೀಶ್ ನಾಯಕ್,ಮೋನಪ್ಪ ಕುಂಬಾರ, ತಮ್ಮಯ್ಯ ನಾ„ಕ್, ಆನಂದ, ಧರಣೇಂದ್ರ ಜೈನ್, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್., ರಾಜೇಂದ್ರ ಹೆಗ್ಡೆ ಕಡಬ ಗುತ್ತು, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯಕ್ ಜಿನ್ನಪ್ಪ ಸಾಲ್ಯಾನ್, ಮೇದಪ್ಪ ಗೌಡ, ನಾರಾಯಣ ಗೌಡ ಅಲುಂಗೂರು ಉಪಸ್ಥಿತರಿದ್ದರು. ದೇಗುಲದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಹಾಗೂ ಪ್ರಶಾಂತ್ ಕೆದಿಲಾಯ ಪೂಜೆ ವಿಧಿ ವಿಧಾನ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.