Kadri: ಬೃಹತ್ ಗಾತ್ರದ ಚಿಟ್ಟೆ, ಜೀರುಂಡೆ !
ರೋಬೋಟಿಕ್ ಬಟರ್‌ಫ್ಲೈ ಶೋನಲ್ಲಿ ವಿಶೇಷ ಆರ್ಕಷಣೆ
Team Udayavani, Dec 26, 2024, 1:09 PM IST
ಕದ್ರಿ: ಚಿಟ್ಟೆ, ಚೇಳು, ಜೀರುಂಡೆ, ಒಂಟೆ ಹುಳಗಳನ್ನು ನೀವು ನೋಡಿರಬಹುದು. ಆದರೆ, ಇವುಗಳನ್ನು ರೋಬೊಟಿಕ್ ಸ್ವರೂಪದಲ್ಲಿ ನೋಡಿರುವವರು ಕಡಿಮೆ ಮಂದಿ. ಒಂದು ವೇಳೆ ರೋಬೊಟಿಕ್ ಆಗಿ ಇವುಗಳನ್ನು ನೋಡಬೇಕಾದರೆ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯುತ್ತಿರುವ ಅಪರೂಪದ ‘ರೋಬೊಟಿಕ್ ಬಟರ್‌ಫ್ಲೈ ಶೋ’ ವೀಕ್ಷಿಸಬಹುದು!
ಕರಾವಳಿ ಉತ್ಸವದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರಥಮ ರೋಬೋಟಿಕ್ ಬಟರ್‌ಫ್ಲೈ ಶೋ ಇದು. ಜ.19ವರೆಗೂ ಇದು ಇರಲಿದೆ. ಸಂಜೆ 4ರಿಂದ ರಾತ್ರಿ 9ರವರೆಗೆ ಪ್ರದರ್ಶನವಿರಲಿದೆ. ಪ್ರವೇಶ ಶುಲ್ಕ 50 ರೂ. ಶಾಲಾ ಮಕ್ಕಳಿಗೆ ಶೇ.50 ರಿಯಾಯಿತಿ ದರವಿದೆ. ಈಗಿನ ಪೀಳಿಗೆಗೆ ಒಂದೇ ಸೂರಿನಡಿ ಮಿಡತೆ, ಡ್ರಾಗನ್‌ಫ್ಲೈ , ಹಾರುವ ಇರುವೆ, ಅಲೇಟ್ಸ್, ಚೇಳು, ಹರ್ಕ್ಯಲಸ್ ಜೀರುಂಡೆ, ಕಣಜ, ಒಂಟೆಹುಳು, ಜೇನು ಹುಳು ಸಹಿತ ಎಲ್ಲ ಚಿಟ್ಟೆಗಳನ್ನು ನೋಡುವ ಅವಕಾಶವಿದೆ. ಮಕ್ಕಳಿಗೆ ಅರಿವು ನೀಡಲು ಇದೊಂದು ಸುವರ್ಣ ಅವಕಾಶ.
ಮಕ್ಕಳಿಗೆ, ಯುವ ಜನತೆಗೆ ಹಾಗೂ ಪ್ರದರ್ಶನಕ್ಕೆ ಭೇಟಿ ಕೊಡುವ ನಾಗರಿಕರಿಗೆ ವಿವಿಧ ಆಕರ್ಷಣೆಯ ರೋಬೊಟಿಕ್ ಮಾದರಿಯಲ್ಲಿ ಶೋ ಏರ್ಪಾಡು ಮಾಡಲಾಗಿದೆ. ಇದರಲ್ಲಿ ಹಲವು ಜಾತಿಯ ಚಿಟ್ಟೆಗಳನ್ನು ರೋಬೊಟಿಕ್ ಮಾದರಿಯಲ್ಲಿ ತೋರಿಸಲಾಗಿದೆ. ಬೆಳಕಿನ ಸಿಂಗಾರವಿದೆ. ಕಲಿಕೆಗೆ ಹೊಸ ಅವಕಾಶವೂ ಇಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.