![ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು](https://www.udayavani.com/wp-content/uploads/2025/02/Chenna1-415x273.jpg)
![ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು](https://www.udayavani.com/wp-content/uploads/2025/02/Chenna1-415x273.jpg)
Team Udayavani, Jan 29, 2025, 2:58 PM IST
ಕೈಕಂಬ: ಸುಮಾರು 900 ವರ್ಷಗಳ ಇತಿಹಾಸವಿರುವ, ಸರ್ವ ರೋಗ ನಿವಾರಕ ಹಾಗೂ ಉಬ್ಬಸ ರೋಗ ನಿವಾರಿಸಿ, ಹರಸಿದ ದೇವರು ಎಂದೇ ಖ್ಯಾತಿ ಪಡೆದ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಮಾ. 9ರಿಂದ 25ರ ವರೆಗೆ ಬ್ರಹ್ಮಕಲಶೋತ್ಸವ ಮತ್ತು ಜಾತ್ರೆ ಜರಗಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಫಲ್ಗುಣಿ ನದಿಯ ಸಮೀಪ ಈ ಕ್ಷೇತ್ರವಿದೆ. ವಿಮಾನ ನಿಲ್ದಾಣದ ಗುಡ್ಡದ ಬುಡದಲ್ಲೇ ಇರುವ ಪ್ರಕೃತಿ ಸೌಂದರ್ಯದ ನೆಲೆ ಇದು.
ಮರವೂರಿನಿಂದ ಅದ್ಯಪಾಡಿಗೆ ನೇರ ಸಂಪರ್ಕವಿದೆ. ಬಜಪೆಯಿಂದ ಹಳೆ ವಿಮಾನ ನಿಲ್ದಾಣ ರಸ್ತೆದ ದಾರಿಯಾಗಿ ಉಣಿಲೆ ಮೂಲಕ ಇಲ್ಲಿಗೆ ಬರಬಹುದು. ಗುರುಪುರ ಕೈಕಂಬದಿಂದ ಕಂದಾವರವಾಗಿ ಕ್ಷೇತ್ರಕ್ಕೆ ಬರಲು ರಸ್ತೆ ಸಂಪರ್ಕವಿದೆ.
ಜೀರ್ಣೋದ್ಧಾರ ಕಾರ್ಯ
ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬೈಲು ಏತಮೊಗರು ಗುತ್ತು ಸುಜೀತ್ ಆಳ್ವ ಅವರ ನೇತೃತ್ವದಲ್ಲಿ ಸಮಿತಿಯ ಸರ್ವ ಸದಸ್ಯರು, ಭಕ್ತರು ಜೀರ್ಣೋದ್ಧಾರ, ಪುನರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಜೀರ್ಣೋದ್ದಾರ ಕಾರ್ಯ ಜತೆಗೆ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ ಕಾರ್ಯಗಳು ಭರದಿಂದ ಸಾಗುತ್ತಿವೆ.
ದಿನನಿತ್ಯ 100ಕ್ಕೂ ಅಧಿಕ ಮಂದಿ ಶ್ರಮದಾನ
ಕಳೆದ ಒಂದುವರೆ ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಮಾಗಣೆಯ ಕೊಳಂಬೆ, ಅದ್ಯಪಾಡಿ, ಕಂದಾವರ ಗ್ರಾಮದ ಸಂಘ ಸಂಸ್ಥೆಗಳ 100ಕ್ಕೂ ಅಧಿಕ ಮಂದಿ ಪ್ರತಿನಿತ್ಯ ಭಾಗವಹಿಸುತ್ತಿದ್ದಾರೆ. ನಿರಂತರ ಶ್ರಮದಾನದಲ್ಲಿ ತೊಡಗಿಕೊಂಡಿವೆ. ಪೊರ್ಕೋಡಿ, ಕೆಂಜಾರು, ಪಡುಶೆಡ್ಡೆ, ಮೂಡುಶೆಡ್ಡೆ,ಪಡುಪೆರಾರ, ಎಡಪದವಯ, ಮೊಗರು, ಕೈಕಂಬ ಪರಿಸರದ ಸಂಘ, ಸಂಸ್ಥೆಗಳು ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮದಾನವನ್ನು ಕೈಗೊಂಡಿದೆ.
ದೇವಸ್ಥಾನದಲ್ಲಿ ಏನೇನು ಆಕರ್ಷಣೆ?
– ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿ, ವಸಂತ ಮಂಟಪ, ಗಣಪತಿ ದೇವರ ಗುಡಿ, ನಾಗದೇವರ ಪೀಠ, ನವಗ್ರಹ ಗುಡಿ, ಶ್ರೀಧರ್ಮ ಶಾಸ್ತಾರ ಗುಡಿಯ ಕಾರ್ಯಗಳು ಬಹುತೇಕ ಮುಗಿದಿದೆ.
– ಗರ್ಭಗುಡಿ, ಸುತ್ತುಪೌಳಿ, ತೀರ್ಥ ಮಂಟಪ ಶಿಲಾಮಯವಾಗಿದ್ದು ವಿಶೇಷ ಆಕರ್ಷಣೆಯಾಗಿದೆ. ಇದಕ್ಕೆ ತ್ರಾಮದ ಹೊದಿಕೆ ಮಾಡಲಾಗಿದೆ.
– ಅನ್ನಛತ್ರ, ವಿಶ್ರಾಂತಿ ಗೃಹ, ಸಭಾಭವನ ಹಾಗೂ ರಾಜಗೋಪುರ ಕಾರ್ಯಗಳು ಭರದಿಂದ ಸಾಗುತ್ತಿವೆ.
– ಗರ್ಭಗುಡಿ ಹಾಗೂ ತೀರ್ಥ ಮಂಟಪದ ಮರದ ಕೆತ್ತನೆ ಕಾರ್ಯವನ್ನು ಶಿಲ್ಪಿ ಉಮಾಧರ ಅವರು ಮಾಡಿದ್ದಾರೆ. ಕೆತ್ತನೆಗಳನ್ನು ಶಿಲ್ಪಿ ನಾರಾಯಣ ಆಚಾರಿ ಮಣಿಪಾಲ ನಿರ್ವಹಿಸುತ್ತಿದ್ದಾರೆ.
– ತೀರ್ಥ ಮಂಟಪ, ಸುತ್ತುಪೌಳಿ, ಗರ್ಭಗುಡಿ, ರಾಜಗೋಪುರದ ಶಿಲಾಮಯ ಕೆತ್ತನೆಗಳನ್ನು ಶಿಲ್ಪಿ ಕೇಶವ ಮುರುಡೇಶ್ವರ ಮಾಡುತ್ತಿದ್ದಾರೆ.
– ಪೂರ್ವ ಗೋಪುರದ ಕೆಂಪು ಕಲ್ಲಿನ ಕೆತ್ತನೆ ಕಾರ್ಯವನ್ನು ಶಿವಮೊಗ್ಗದ ಕುಬೇರ ಲಮಾಣಿ ನಡೆಸುತ್ತಿದ್ದಾರೆ.
– ವಾಸ್ತುಶಿಲ್ಪಿ ವೇ| ಮೂ| ಕೃಷ್ಣರಾಜ ತಂತ್ರಿಗಳ, ಎಂಜಿನಿಯರ್ ಪುರುಷೋತ್ತಮ್ ಬಿ. ಉಸ್ತುವಾರಿ ವಹಿಸಿದ್ದಾರೆ.
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್ ಹಿಟ್ ಕಂಡ ಶ್ರೀವಲ್ಲಿ
Manipal: ಶಿವಪಾಡಿ ವೈಭವ ಆಯೋಜಕರ ಪೂರ್ವಭಾವಿ ಸಭೆ
You seem to have an Ad Blocker on.
To continue reading, please turn it off or whitelist Udayavani.