ಕಂಬಳ ವೀರ “ದೂಜೆ’ ಅಸ್ವಸ್ಥ; ಅಭಿಮಾನಿಗಳಲ್ಲಿ ಬೇಸರ… ವಾಮಾಚಾರದ ಶಂಕೆ
Team Udayavani, Mar 12, 2023, 7:00 AM IST
ಮಂಗಳೂರು: ಸರಣಿ ಪದಕಗಳ ಮೂಲಕ ಖ್ಯಾತಿ ಗಳಿಸಿರುವ ನಗರದ ಪದವು ಕಾನಡ್ಕ ಡೋಲ್ಫಿ ಡಿ’ಸೋಜಾ ಮತ್ತು ಡೆರಿಕ್ ಡಿ’ಸೋಜಾ ಸಹೋದರರ ಮಾಲಕತ್ವದ ಕಂಬಳದ ಕೋಣ “ದೂಜೆ’ ಅಸ್ವಸ್ಥಗೊಂಡಿದ್ದು, ವಾಮಾಚಾರ ಮಾಡಿರುವ ಬಗ್ಗೆ ಮಾಲಕರು ಶಂಕೆ ವ್ಯಕ್ತಪಡಿಸಿದ್ದಾರೆ.
“ದೂಜೆ’ ಮತ್ತು “ಎರ್ಮುಡೆ’ ಜೋಡಿ ಈ ಬಾರಿಯ ಕೂಟದಲ್ಲಿ ಕಕ್ಯೆಪದವಿನಲ್ಲಿ ಸೆಮಿಫೈನಲ್‌ವರೆಗೆ ಹೋಗಿದ್ದವು. ವೇಣೂರು, ಹೊಕ್ಕಾಡಿಗೋಳಿಯಲ್ಲಿ ದ್ವಿತೀಯ, ಅಡ್ವೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದವು. ಐಕಳ ಕಂಬಳದ ಸಂದರ್ಭ ಎರಡು ಕೂಡ ಅಸ್ವಸ್ಥಗೊಂಡವು. ಅದರಲ್ಲಿ “ಎರ್ಮುಡೆ’ ಬೇಗ ಚೇತರಿಸಿಕೊಂಡಿತ್ತು. ಆದರೆ “ದೂಜೆ’ಯ ಆರೋಗ್ಯ ಹದಗೆಡುತ್ತ ಬಂದಿತ್ತು. ಸದ್ಯ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ. ದೂಜೆ 10 ವರ್ಷಗಳಲ್ಲಿ 68 ಪದಕಗಳನ್ನು ಗಳಿಸಿದೆ ಎಂದು ಡೋಲ್ಫಿ ತಿಳಿಸಿದ್ದಾರೆ.
ವಾಮಾಚಾರ ಪ್ರಯೋಗ?
“ದೂಜೆ’ಯನ್ನು ನೋಡಲು ನಿತ್ಯ ನೂರಾರು ಮಂದಿ ಬರುತ್ತಿದ್ದರು. ಕೆಲವರು ಹಣ್ಣು ಹಂಪಲು ಇತ್ಯಾದಿ ನೀಡುತ್ತಿದ್ದರು. ನಾವು ತಡೆಯುತ್ತಿರಲಿಲ್ಲ. ಆದರೆ ದೂಜೆಗೆ ಅದೇನಾಯಿತು ಎಂದು ಗೊತ್ತಿಲ್ಲ. ಇತ್ತೀಚೆಗೆ ಕೊಟ್ಟಿಗೆ ಸ್ವತ್ಛಗೊಳಿಸುವಾಗ ನೂಲು, ಭಸ್ಮ, ತಗಡು ಕೂಡ ಸಿಕ್ಕಿತ್ತು. ಅದರ ಜತೆ ಚೆನ್ನೈ-ಮಂಗಳೂರು ರೈಲಿನ ಟಿಕೆಟ್ ಕೂಡ ಇತ್ತು. ಯಾರು ಏನು ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ತಪ್ಪು ಮಾಡಿದವರಿಗೆ ದೇವರೇ ಶಿಕ್ಷೆ ನೀಡುತ್ತಾರೆ ಎಂದು ಡೋಲ್ಫಿ ಹೇಳಿದ್ದಾರೆ.
“ದೂಜೆ’ ದರ್ಶನಕ್ಕಿಲ್ಲ ಅವಕಾಶ
ವಾಮಾಚಾರ ಸಾಧ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಯಾಗುತ್ತಿದೆ. ದೂಜೆಯನ್ನು ನೋಡಲು ಸದ್ಯ ಮಾಲಕರು ಹೊರಗಿನ ಯಾರಿಗೂ ಅವಕಾಶ ನೀಡುತ್ತಿಲ್ಲ. ಗೇಟಿಗೆ ಸಿಸಿ ಕೆಮರಾ ಕೂಡ ಅಳವಡಿಸಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.