ಕುವೈಟ್‌ನಲ್ಲಿ ಯುವಕರ ಸಂಕಷ್ಟ: ಇಂದು ಅಂತಿಮ ನಿರ್ಧಾರ ಸಾಧ್ಯತೆ
Team Udayavani, Jun 3, 2019, 6:10 AM IST
ಮಂಗಳೂರು: ಉದ್ಯೋಗಕ್ಕಾಗಿ ಕುವೈಟ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರಿನ 35 ಮಂದಿ ಸಹಿತ ಭಾರತದ ಒಟ್ಟು 75 ಮಂದಿ ನೌಕರರನ್ನು ಸ್ವದೇಶಕ್ಕೆ ಕಳುಹಿಸುವ ಬಗ್ಗೆ ಇದ್ದ ತಾಂತ್ರಿಕ ಸಮಸ್ಯೆಗಳು ಶೀಘ್ರ ಬಗೆಹರಿಯುವ ಲಕ್ಷಣಗಳು ಕಂಡು ಬರುತ್ತಿದ್ದು, ರವಿವಾರ ಶೋನ್ (ನ್ಯಾಯಾಲಯ ಮಾದರಿ ಸರಕಾರಿ ಸಂಸ್ಥೆ)ನಲ್ಲಿ ನಡೆದ ಸಭೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ.
75 ಮಂದಿ ನೌಕರರ ಪೈಕಿ 60 ಜನ ಶೋನ್ ಸಭೆಗೆ ಹಾಜರಾಗಿದ್ದು, ಅವರಲ್ಲಿ 53 ಮಂದಿ ಪತ್ರವೊಂದಕ್ಕೆ (ಅದು ಅರೆಬಿಕ್ ಭಾಷೆಯಲ್ಲಿದೆ) ಸಹಿ ಹಾಕಿದ್ದಾರೆ. ಉಳಿದ 7 ಮಂದಿ ಆಂಧ್ರದವರಾಗಿದ್ದು, ಅವರು ಈಗಾಗಲೇ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರಿಗೆ ಈ ಪತ್ರಕ್ಕೆ ಸಹಿ ಹಾಕುವ ಆವಶ್ಯಕತೆ ಇರಲಿಲ್ಲ. ಹಾಜರಾಗದ 15 ಮಂದಿ ಸೋಮವಾರ ಶೋನ್‌ನಲ್ಲಿ ನಡೆಯುವ ಸಭೆಗೆ ಹಾಜರಾಗಿ ಪತ್ರಕ್ಕೆ ಸಹಿ ಮಾಡುವ ಸಾಧ್ಯತೆ ಇದ್ದು, ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶೋನ್‌ನಲ್ಲಿ ನಡೆದ ಸಭೆಯ ಮಾತುಕತೆಯಂತೆ ಪತ್ರಕ್ಕೆ ಸಹಿ ಮಾಡಿದವರಿಗೆ ಅವರ ವೀಸಾ ರದ್ದು ಪಡಿಸಿ ಪಾಸ್ ಪೋರ್ಟ್, ಒಂದಿಷ್ಟು ಮೊತ್ತದ ಹಣವನ್ನು ವಾಪಸ್ ಕೊಡಲಾಗುತ್ತಿದೆ. ಇದೆಲ್ಲವನ್ನೂ ಕಂಪೆನಿಯವರು ಭಾರತೀಯ ರಾಯಭಾರ ಕಚೇರಿಗೆ ಒಪ್ಪಿಸಲಿದ್ದಾರೆ. ಇದರಿಂದ ನೌಕರರು ಸಮಸ್ಯೆಯಿಂದ ಮುಕ್ತಿ ಪಡೆದಂತಾಗಿ ಸ್ವದೇಶಕ್ಕೆ ಮರಳಲು ಹಾದಿ ಸುಗಮವಾಗಲಿದೆ.
ಭಾರತೀಯ ರಾಯಭಾರಿ ಕಚೇರಿಯ 2ನೇ ಕಾರ್ಯದರ್ಶಿ ಶಿಬಿ ಯು.ಎಸ್., ಶೋನ್ ಪ್ರತಿನಿಧಿಗಳು, ಪಬ್ಲಿಕ್ ಅಥಾರಿಟಿ ಆಫ್ ಮ್ಯಾನ್‌ಪವರ್ (ಪ್ಯಾಮ್), ಇನೆಸ್ಕೋ ಜನರಲ್ ಟ್ರೇಡಿಂಗ್ ಆ್ಯಂಡ್ ಕಂಟ್ರಾಕ್ಟಿಂಗ್ ಕಂಪೆನಿ ಪ್ರತಿನಿಧಿಗಳು, ಸಂತ್ರಸ್ತ ನೌಕರರು ಸಭೆಯಲ್ಲಿದ್ದರು.
ಟಿಕೆಟ್ ಹಣ ಭರಿಸುವವರು ಯಾರು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.