ಕಟೀಲು ಬ್ರಹ್ಮಕಲಶೋತ್ಸವ ಸಂಪನ್ನ
Team Udayavani, Feb 3, 2020, 11:25 PM IST
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವವು ಜ. 22ರಿಂದ ಆರಂಭ ಗೊಂಡು ಫೆ. 3ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಸಮಾಪನ ಗೊಂಡಿತು. ವೈಭವದ ಬ್ರಹ್ಮಕಲಶೋತ್ಸವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸುಮಾರು ಲಕ್ಷಾಂತರ ಭಕ್ತರು ಆಗಮಿಸಿ ಭ್ರಾಮರೀ ದೇವಿಯ ದರ್ಶನ ಪಡೆದು ಪುಳಕೀತರಾದರು. ಇನ್ನು ಈ ವೈಭವವನ್ನು ಕಣ್ತುಂಬಿಕೊಳ್ಳಲು 12 ವರ್ಷಗಳು ಕಾಯಬೇಕಿದೆ.
ಬ್ರಹ್ಮಕಲಶೋತ್ಸವದ ಆರಂಭದಿಂದಲೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಿದವು. ಜ. 30ರಂದು ಸಂಭ್ರಮದ ಬ್ರಹ್ಮಕಲಶೋತ್ಸವ ಜರಗಿತು. ಈ ಪ್ರಯುಕ್ತವಾಗಿ ಲಕ್ಷಾಂತರ ಭಕ್ತರ ಸಾನ್ನಿಧ್ಯದಲ್ಲಿ ಕ್ಷೇತ್ರದಲ್ಲಿ ಮಹಾ ರಥೋತ್ಸವ ಜರಗಿತು. ಫೆ. 1ರಂದು ನಾಗಮಂಡ ಲೋತ್ಸವ. ಫೆ. 2 ಕೋಟಿಜಪ ಯಜ್ಞ ಹಾಗೂ ಅಂತಿಮವಾಗಿ ಸೋಮವಾರ ಸರ್ವ ಚಂಡಿಕಾಯಾಗದ ಮೂಲಕ ಬ್ರಹ್ಮಕಲಶೋತ್ಸವ ಸಮಾಪನ ಗೊಂಡಿತು.
ಬ್ರಹ್ಮಕಲಶೋತ್ಸವ ಯಶಸ್ಸಿಗೆ ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ 30 ಸಮಿತಿಗಳನ್ನು ಹಾಗೂ ಮುಂಬಯಿ, ಬೆಂಗಳೂರು, ಪುಣೆ, ಚೆನ್ನೈನ ಮೊದಲಾದ ಕಡೆಯಿಂದ ಸಮಿತಿ ರಚಿಸಲಾಯಿತು. ಜಿಲ್ಲೆ ಹೊರಜಿಲ್ಲೆಯಲ್ಲಿ ಸಭೆ ನಡೆಸಿ ಸಂಘಟಿಸಲಾಗಿತ್ತು.
ಸ್ವಯಂ ಸೇವಕರ ಅವಿರತ ಶ್ರಮ
ಬ್ರಹ್ಮಕಲಶೋತ್ಸವದ ಅಭಿ ವೃದ್ಧಿಗಾಗಿ ವಿವಿಧ ಸಂಘ- ಸಂಸ್ಥೆಗಳು, ಸ್ವಯಂ ಸೇವಕರು ಸ್ವಯಂ ಪ್ರೇರಿತರಾಗಿ ಕಾರ್ಯ ನಿರ್ವಹಸಿ ದ್ದಾರೆ. ಭದ್ರತೆ, ಅನ್ನ ಸಂತರ್ಪಣೆ, ಪಾರ್ಕಿಂಗ್, ಅಲಂಕಾರ ಸಹಿತ ಮೊದಲಾದ ಸಮಿತಿಗಳನ್ನು ರಚಿಸಿ, ಸ್ವಯಂಸೇವಕರನ್ನೊಳಗೊಂಡು ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ ಬ್ರಹ್ಮಕಲಶವನ್ನು ಯಶಸ್ವಿ ಗೊಳಿಸಲಾಗಿದೆ. ಸುಮಾರು 25,000 ಅಧಿಕ ಸ್ವಯಂ ಸೇವಕರು ಕಾರ್ಯನಿರ್ವಹಿಸಿದ್ದಾರೆ.
ದಿನಪ್ರತಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಹಾಗೂ ಹೊರ ರಾಜ್ಯದ ದೊಡ್ಡ ಕಲಾವಿದರನ್ನು ಕರೆಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಸಮಾಜದ ಸ್ವಾಮೀಜಿ ಹಾಗೂ ದೇವಸ್ಥಾನಗಳ ಮೊಕ್ತೇಸರು , ರಾಜಕೀಯ ಮುಖಂಡರನ್ನು ಕರೆಸಿ ಗೌರವಿಸಲಾಗಿದೆ. 100 ಕ್ಕೂ ಅಧಿಕ ದಾನಿಗಳನ್ನು ಗೌರವಿಸಲಾಗಿದೆ.
300 ಮಂದಿ ಬಾಣಸಿಗರು ದೊಡ್ಡ ಮಟ್ಟದ ಸೇವೆ ಸಲ್ಲಿಸಿದ್ದಾರೆ. ಅಷ್ಟೆ ಅಲ್ಲದೆ, ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ನಿತರಂತರ ಸ್ವಚ್ಛತೆಯ ಕೆಲಸ ಮಾಡಿದ್ದಾರೆ. 16 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಯಶಸ್ಸಿಯಾಗಿದೆ. ಭ್ರಾಮರೀ ವನ ಹಾಗೂ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೊಡ್ಡ ಮಟ್ಟದ ಹೊರೆಕಾಣಿಕೆ ಜಿಲ್ಲೆ ಅಲ್ಲದೆ ಬೆಂಗಳೂರು, ಪೂನಾದಿಂದ ಬಂದಿದೆ ಉಗ್ರಾಣ ತುಂಬಿ ತುಳುಕುತ್ತಿದೆ. ತರಕಾರಿ ಅಲ್ಲದೆ ಅಕ್ಕಿ ಬೆಳೆ, ತೆಂಗಿನಕಾಯಿ , ಸ್ಟೀಲ್ ವಸ್ತುಗಳು ಸಂಗ್ರಹವಾಗಿವೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳು
ಬಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ದೇಗುಲವನ್ನು ಅಭಿವೃದ್ಧಿಗೊಳಿಸಲಾಗಿತ್ತು. ಚಿನ್ನದ ಧ್ವಜಸ್ತಂಭ ಪ್ರತಿಷ್ಠೆ, ಚಿನ್ನದ ಮಂಟಪ, ಬೆಳ್ಳಿಯ ಮಂಟಪ, ರಥಬೀದಿ ವಿಸ್ತರಣೆ, ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ನೂತನ ಶೌಚಾಲಯ, 6 ಲಕ್ಷ ರೂ ವೆಚ್ಚದಲ್ಲಿ ಬ್ರಹ್ಮರಥಕ್ಕೆ ಸ್ಟೀಲ್‌ಅಟ್ಟೆ ಅಳವಡಿಕೆ, ರಸ್ತೆ ಕಾಂಕ್ರೀಟ್ ಕಾಮಗಾರಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಸರಕಾರದ ಜತೆಗೆ ಹಲವು ಭಕ್ತರು, ದಾನಿಗಳು ಕೂಡ ಅಭಿವೃದ್ಧಿಗೆ ಕೈ ಜೋಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.