ನರೇಗಾ ಯೋಜನೆ: 22 ಲಕ್ಷ ರೂ. ವೆಚ್ಚದಲ್ಲಿ 32 ಕಾಮಗಾರಿಗಳು
ಕಟೀಲು ನರೇಗಾ ಗ್ರಾಮಸಭೆ
Team Udayavani, Jul 17, 2019, 5:00 AM IST
ಕಟೀಲು: ಕಟೀಲು ಗ್ರಾ. ಪಂ.ಗೆ ಒಳಪಟ್ಟ ಕೊಂಡೆಮೂಲ, ನಡುಗೋಡು, ಕಿಲೆಂಜೂರು ಗ್ರಾಮಗಳ 2019-20 ಸಾಲಿನ ಪ್ರಥಮ ಹಂತದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋ ಧನೆಯ ವಿಶೇಷ ಗ್ರಾಮ ಸಭೆ ಅಧ್ಯಕ್ಷೆ ಗೀತಾ ಪೂಜಾರ್ತಿ ಅಧ್ಯಕ್ಷತೆಯಲ್ಲಿ ಜು. 16 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ತಾಲೂಕು ಸಂಯೋಜಕಿ ಧನಲಕ್ಷ್ಮೀ ನರೇಗಾ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ಅವರು, ಪಂಚಾಯತ್ ವ್ಯಾಪ್ತಿ ಯಲ್ಲಿ ಒಟ್ಟು 148 ಜಾಬ್‌ಕಾರ್ಡ್ ಗಳಿದ್ದು 72 ಜಾಬ್ ಕಾರ್ಡ್‌ಗಳು ಚಾಲ್ತಿಯಲ್ಲಿವೆ. 22 ಲಕ್ಷ ರೂ. ವೆಚ್ಚದಲ್ಲಿ ಸಂಜೀವಿನಿ ಶೆಡ್‌ರಚನೆ, ರಸ್ತೆ ಅಭಿವೃದ್ಧಿ , ಮಳೆಕೊಯ್ಲು ಬಸವ ವಸತಿ ಮನೆ ಸಹಿತ ಆರು ತಿಂಗಳಲ್ಲಿ 185 ಕಾಮಗಾರಿ ನಡೆದಿವೆ. ಒಟ್ಟು 6 ತಿಂಗಳಲ್ಲಿ 32 ಕಾಮಗಾರಿಗಳು, 3947 ಮಾನವ ದಿನಗಳು ನಡೆದಿವೆ ಎಂದರು.
ಮಳೆಕೊಯ್ಲು ಕಾಮಗಾರಿಗೆ ನರೇಗಾ ಯೋಜನೆಯನ್ನು ನೀಡಬೇಕು ಎಂದು ಚಂದ್ರಶೇಖರ ಶೆಟ್ಟಿ ಬರ್ಕೆ ಕೇಳಿದರು, ಅದಕ್ಕೆ ಅವಕಾಶ ಇಲ್ಲ ಎಂಬ ಉತ್ತರ ಬಂತು.
ಬೇರೆ ರಾಜ್ಯದಲ್ಲಿ ನರೇಗಾ ದಲ್ಲಿ ಹೆಚ್ಚಿನ ಕೆಲಸಗಳಿಗೆ ಅವಕಾಶವಿದ್ದು ನಮ್ಮಲ್ಲಿ ಅವಕಾಶ ನೀಡಬೇಕು ಎಂದು ಪುರುಷೋತ್ತಮ ಕೋಟ್ಯಾನ್ ಮಿತ್ತಬೈಲ್ ಸಭೆಯಲ್ಲಿ ಪ್ರಶ್ನೆ ಕೇಳಿದರು.
ಆಗ ಧನಲಕ್ಷ್ಮೀ ಉತ್ತರಿಸಿ, ಹೆಚ್ಚಿನ ಎಲ್ಲ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಪ್ರದೀಪ್ ಡಿ’ಸೋಜ ನೋಡಲ್ ಅಧಿಕಾರಿಯಾಗಿದ್ದರು. ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರ್ತಿ, ಪಂಚಾಯತ್ ಪಿಡಿಒ ಪ್ರಕಾಶ್ ಬಿ. ಮೊದಲಾದವರು ಉಪಸ್ಥಿತರಿದ್ದರು.
ಯಂತ್ರೋಪಕರಣ ಉಪಯೋಗಿಸುವಂತಿಲ್ಲ
ನರೇಗಾ ಯೋಜನೆಯಲ್ಲಿ ಪರಂಬೊಕು ತೋಡಿನ ಹೂಳೆತ್ತಲು ಅವಕಾಶ ಇದೆಯೇ ಎಂದು ಸಂಜೀವ ಮಡಿವಾಳ ಅವರ ಪ್ರಶ್ನೆಗೆ ಉತ್ತರಿಸಿದ ಧನಲಕ್ಷ್ಮೀ ಅವರು ನರೇಗಾ ಯೋಜನೆಯಲ್ಲಿ ಹೂಳೆತ್ತಲು ಅವಕಾಶ ಇದೆ. ಯಾವುದೇ ಯಂತ್ರ ಉಪಯೋಗಿಸಬಾರದು ಅನಿವಾರ್ಯ ಆದಲ್ಲಿ ಉಪಯೋಗಿಸಬಹುದು ಅದಕ್ಕೆ ಅದರದ್ದೇ ಆದ ವಿಧಾನವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್’ ತೆರೆಯದಂತೆ ಪೊಲೀಸರ ಸೂಚನೆ
Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್ ರಾಜ್ಯಭಾರ!
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್; ಸುಗಮ ಸಂಚಾರಕ್ಕೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.