Kaup: ದಂಪತಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ
Team Udayavani, Oct 10, 2024, 10:10 PM IST
ಕಾಪು: ಉಡುಪಿ ಆಸ್ಪತ್ರೆಗೆ ಹೋಗಿ ಮರಳುತ್ತಿದ್ದ ದಂಪತಿಗೆ ಕಾರು ಢಿಕ್ಕಿ ಹೊಡೆದು ಮಹಿಳೆ ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಕಾಪುವಿನಲ್ಲಿ ನಡೆದಿದೆ.
ಉಳಿಯಾರಗೋಳಿ ನಿವಾಸಿಗಳಾದ ಯಶವಂತ್ ಮತ್ತು ಅವರ ಪತ್ನಿ ಸುಮಿತ್ರಾ ಉಡುಪಿಯ ಆಸ್ಪತ್ರೆಗೆ ತೆರಳಿದ್ದು, ಆಸ್ಪತ್ರೆಯಿಂದ ಬಸ್‌ನಲ್ಲಿ ವಾಪಸು ಬಂದು ಉಳಿಯಾರಗೋಳಿಯಲ್ಲಿ ಇಳಿದಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದಾಗ ಉಡುಪಿ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಸುಮಿತ್ರಾ ಅವರ ಕೈಗೆ ಸಾಮಾನ್ಯ ಸ್ವರೂಪದ ಹಾಗೂ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.