Kavoor: ಒಳಚರಂಡಿಯಿಂದ ಹೊರಚಿಮ್ಮುವ ಮಲಿನ ನೀರು; ಸಾಂಕ್ರಾಮಿಕ ರೋಗ ಭೀತಿ
ಮುಲ್ಲಕಾಡು 4ನೇ ಮೈಲು ಆಂಬೇಡ್ಕರ್ ಕಾಲನಿ
Team Udayavani, Oct 21, 2024, 4:27 PM IST
ಕಾವೂರು: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂಬ್ರ 18ರಲ್ಲಿ 4ನೇ ಮೈಲು ಮುಲ್ಲಕಾಡು ಅಂಬೇಡ್ಕರ್ ಕಾಲನಿಯಲ್ಲಿ ಒಳ ಚರಂಡಿಯಿಂದ ನಿತ್ಯ ಮಲೀನ ನೀರು ಸೋರಿಕೆಯಾಗಿ ಸ್ಥಳೀಯ ನಿವಾಸಿಗಳು ರೋಗ ಭೀತಿ ಎದುರಾಗಿದೆ.
ಇದಕ್ಕೆ ಮುಖ್ಯ ಕಾರಣ ಇಲ್ಲಿನ ಚರಂಡಿಯ ಒಂದೆರಡು ಚೇಂಬರ್‌ಗಳು ಖಾಸಗಿ ಜಮೀನಿನ ಭಾಗದಲ್ಲಿ ಹಾದುಹೋಗಿದ್ದು, ಮಾಲಕರ ಅನುಮತಿ ಇಲ್ಲದ ಕಾರಣ ಇದೀಗ ದುರಸ್ತಿಯೂ ಸಾಧ್ಯವಾಗುತ್ತಿಲ್ಲ. ಸಂಬಂಧ ಪಟ್ಟವರಿಗೆ ದುರಸ್ತಿಗೆ ಸಹಕಾರ ಕೋರಿ ಪಾಲಿಕೆಯಿಂದ ನೋಟಿಸ್ ನೀಡಲಾಗಿದೆ.
ಸುಮಾರು ಹತ್ತೆನ್ನೆರಡು ವರ್ಷಗಳ ಹಿಂದೆ ಪರಿಶಿಷ್ಟರ ಸೌಲಭ್ಯಕ್ಕಾಗಿ ಜನರು ಸಂಚಾರ ನಡೆಸುತ್ತಿದ್ದ ಸಂಪರ್ಕ ರಸ್ತೆಯ ನಡುವೆ ಒಳಚರಂಡಿ ಪೈಪ್ ಹಾಕಲಾಗಿತ್ತು. ಭೂ ಮಾಲಕರು ತಕರಾರು ಎತ್ತಿ ನ್ಯಾಯಾಲಯದ ಕಟಕಟೆ ಹತ್ತಿದ್ದರು. ಸಮಸ್ಯೆ ಪರಿಹಾರಕ್ಕಾಗಿ ಟಿಡಿಆರ್ ಮೂಲಕ ಜಾಗ ಸ್ವಾಧೀನಕ್ಕೆ ಪಾಲಿಕೆ ಮುಂದಾಯಿತಾದರೂ ಕಾನೂನು ಪ್ರಕ್ರಿಯೆ ಗಳಿಂದ ದುರಸ್ತಿ ಸಾಧ್ಯವಾಗದೆ ಸೋರಿಕೆ ನಿರಂತರವಾಗಿ ನಡೆಯುತ್ತಿದೆ.
ಇದೀಗ ಒಳಚರಂಡಿ ದುರಸ್ತಿ ಅಸಾಧ್ಯವಾಗಿರುವುದರಿಂದ ತ್ಯಾಜ್ಯನೀರು ಸೋರಿಕೆಯಾಗಿ ಕಾಲನಿಯ ಸುತ್ತಮುತ್ತ ಮಾಲಿನ್ಯ, ದುರ್ವಾಸನೆ ಹರಡಿಕೊಂಡಿದೆ.
ಹಲವು ವರ್ಷಗಳಿಂದ ಪಾಲಿಕೆಯ ಸದಸ್ಯರ ಮುತುವರ್ಜಿಯಿಂದ ಟ್ಯಾಂಕರ್ ಮೂಲಕ ತ್ಯಾಜ್ಯ ಸ್ವತ್ಛಗೊಳಿ ಸಲಾಗುತ್ತಿದೆಯಾದರೂ ಇದು ಸಾಕಾಗುತ್ತಿಲ್ಲ. ಇಲ್ಲಿನ ಒಳಚರಂಡಿ ಪೈಪ್‌ಲೈನ್‌ಗೆ ಸುತ್ತಮುತ್ತಲಿನ ವಾಣಿಜ್ಯ ಸಮುಚ್ಚಯ ಹಾಗೂ ನೂರಾರು ಮನೆಗಳ ಸಂಪರ್ಕ ನೀಡಲಾಗಿದೆ. ಹೀಗಾಗಿ ಒಂದೆರಡು ಗಂಟೆಗಳಲ್ಲೇ ಮತ್ತೆ ತುಂಬಿಕೊಂಡು ಓವರ್‌ಫ್ಲೋ ಆಗುವ ಮೂಲಕ ಚರಂಡಿ ಸೇರುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿ ತಾಣವಾಗಿ ಈ ಪ್ರದೇಶ ಬದಲಾಗಿದ್ದು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಜ್ವರದಿಂದ ಬಳಲುತ್ತಿದ್ದಾರೆ.
ತಾತ್ಕಾಲಿಕ ಪರಿಹಾರ ಕೈಗೊಳ್ಳಲಾಗಿದೆ
ಬ್ಲಾಕ್ ಆಗಿರುವ ಚೇಂಬರ್ ದುರಸ್ತಿಗೆ ಖಾಸಗಿ ಜಮೀನು ಒಳಭಾಗದಲ್ಲಿರುವುದರಿಂದ ಮಾಲಕರ ಅನುಮತಿ ಇಲ್ಲದೆ ಸಾಧ್ಯವಾಗುತ್ತಿಲ್ಲ. ಪಾಲಿಕೆ ಅಧಿಕಾರಿ ಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಟ್ಯಾಂಕರ್ ಮೂಲಕ ತ್ಯಾಜ್ಯ ತೆಗೆದು ಸೋರಿಕೆ ತಡೆಗಟ್ಟಲು ತಾತ್ಕಾಲಿಕ ಪರಿಹಾರ ಕೈಗೊಂಡಿದ್ದೇನೆ. ಜಮೀನು ಮಾಲಕರಿಗೆ ಮನವಿ ಮಾಡಿ ಟಿಡಿಆರ್ ನೀಡಿ ಪೈಪ್‌ಲೈನ್ ಹಾದು ಹೋದ ಜಮೀನು ಪಡೆದು ಸಮಸ್ಯೆ ಬಗೆ ಹರಿಸಲು ಶಾಸಕರು ಆಸಕ್ತಿ ವಹಿಸಿದ್ದಾರೆ ಎಂದು ಮಹಾನಗರ ಪಾಲಿಕೆ 18ನೇ ವಾರ್ಡ್ ಸದಸ್ಯೆ ಗಾಯತ್ರಿ ರಾವ್ ತಿಳಿಸಿದ್ದಾರೆ.
ಪಾಲಿಕೆ ಅಧಿಕಾರಿಗಳ ಮನಕ್ಕೆ ತಂದಿದ್ದೇವೆ
ಪಾಲಿಕೆ ಅಧಿಕಾರಿಗಳನ್ನು ಕರೆಸಿ ಸಮಸ್ಯೆಯನ್ನು ತಿಳಿಸಿದ್ದೇವೆ. ಇರುವ ಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಿ ಇಲ್ಲವೇ ಹೊಸ ಪೈಪ್‌ಲೈನ್ ಅಳವಡಿಸಿ ಡ್ರೈನೇಜ್ ಸಂಪರ್ಕ ಕಲ್ಪಿಸಿ ಎಂದು ಮನವಿ ಮಾಡಿದ್ದೇವೆ. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಗಾಯತ್ರಿ ರಾವ್ ಅವರು ಟ್ಯಾಂಕರ್ ಮೂಲಕ ಚರಂಡಿ ಸ್ವತ್ಛತೆಗೆ ಒತ್ತು ನೀಡಿದ್ದಾರೆ ಮಾತ್ರವಲ್ಲ, ದುರಸ್ತಿಗೆ ಕ್ರಮ ವಹಿಸಿದ್ದಾರೆ.
-ಆನಂದ ಪಾಂಗಳ, ಅಧ್ಯಕ್ಷ, ಪ.ಜಾ., ಪ.ಪಂ. ಹಿತರಕ್ಷಣಾ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.