Kinnigoli: ದಾಮಸ್‌ಕಟ್ಟೆ – ಏಳಿಂಜೆ ರಸ್ತೆ ಹೊಂಡಮಯ
ಮಳೆ ನಿಂತರೂ ಗುಂಡಿ ಮುಚ್ಚುವ, ಡಾಮರು ಹಾಕುವ ಕೆಲಸ ಇನ್ನೂ ಆರಂಭವಾಗಿಲ್ಲ
Team Udayavani, Dec 28, 2024, 2:57 PM IST
ಕಿನ್ನಿಗೋಳಿ: ಮೂರುಕಾವೇರಿಯಿಂದ ಬೆಳ್ಮಣ್ಣು ಸಂಪರ್ಕಿಸುವ ರಾಜ್ಯ ಹೆದ್ದಾರಿ ದಾಮಸ್‌ಕಟ್ಟೆ ಎಸ್‌ವಿಡಿಯಿಂದ ಏಳಿಂಜೆಯ ವರೆಗಿನ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಈ ಬಾರಿಯ ಮಳೆಗೆ ರಸ್ತೆಯ ಹಲವಾರು ಕಡೆ ಡಾಮರು ಕಿತ್ತು ಹೋಗಿ ಹೊಂಡ ಗುಂಡಿಗಳಾಗಿವೆ. ಆದರೆ, ಈಗ ಮಳೆ ನಿಂತಿದ್ದರೂ ಗುಂಡಿ ಮುಚ್ಚುವ, ಡಾಮರು ಹಾಕುವ ಅಥವಾ ಕನಿಷ್ಠ ತೇಪೆ ಹಾಕುವ ಕೆಲಸವೂ ನಡೆದಿಲ್ಲ.
ದ್ವಿಚಕ್ರ ವಾಹನಕ್ಕೆ ಅಪಾಯಕಾರಿ
ದಾಮಸ್‌ಕಟ್ಟೆಯಿಂದ ಏಳಿಂಜೆ ಇಳಿಜಾರಿನ ರಸ್ತೆಯ ತಿರುವಿನಲ್ಲಿ ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ಹೊಂಡಗಳಾಗಿದ್ದು, ದ್ವಿಚಕ್ರ ವಾಹನಗಳಿಗೆ ತುಂಬಾ ಅಪಾಯಕಾರಿಯಾಗಿ ಪರಿಣಮಿಸಿದೆ. ಇಲ್ಲಿ ರಸ್ತೆಯೂ ಅಗಲ ಕಿರಿದಾಗಿದ್ದು ಇದರಿಂದಲೂ ಸಮಸ್ಯೆ ಉಂಟಾಗುತ್ತದೆ.
ಎಸ್‌ವಿಡಿಯ ಮುಂದಿನ ರಸ್ತೆಯ ಡಾಮರು ಕಿತ್ತು ಹೋಗಿ ಉಂಟಾದ ಹೊಂಡಗಳ ಅರಿವು ಇಲ್ಲದೆ ಕಳೆದ ವಾರ ದ್ವಿಚಕ್ರ ವಾಹನ ಗುಂಡಿಗೆ ಬಿದ್ದು ಮೂಳೆ ಮುರಿತ ಉಂಟಾಗಿದೆ ಎಂದು ಸ್ಥಳೀಯರಾದ ಸುಧಾಕರ ಸಾಲ್ಯಾನ್ ತಿಳಿಸಿದ್ದಾರೆ.
ಬೆಳೆದು ನಿಂತ ಹುಲ್ಲು
ಈ ನಡುವೆ ರಸ್ತೆಯ ಬದಿಗಳಲ್ಲಿ ಹುಲ್ಲು ಎತ್ತರಕ್ಕೆ ಬೆಳೆದು ನಿಂತಿದ್ದು, ಇದನ್ನು ಕೂಡ ಕಟ್ಟಿಂಗ್ ಮಾಡಿ ವಿಲೇವಾರಿ ಮಾಡಿಲ್ಲ. ರಸ್ತೆ ಬದಿಯಲ್ಲೇ ಹುಲ್ಲು ಬೆಳೆದು ನಿಂತಿರುವುದರಿಂದ ಪಕ್ಕದಲ್ಲಿ ನಡೆದುಕೊಂಡು ಹೋಗುವವರಿಗೆ ಸಮಸ್ಯೆಯಾಗಿದೆ. ಕೆಲವೊಮ್ಮೆ ಹಾವು ಮತ್ತಿತರ ಪ್ರಾಣಿಗಳು ಕೂಡಾ ಇದರ ನಡುವೆ ಸೇರಿಕೊಂಡಿರುವ ಅಪಾಯ ಇರುತ್ತದೆ.
ಹೆದ್ದಾರಿ ನಿರ್ವಹಣೆ ಕೊರತೆ
ಈ ಮಾರ್ಗದಲ್ಲಿ ಮಳೆ ನೀರು ಹರಿಯಲು ಚರಂಡಿಗಳನ್ನೇ ನಿರ್ಮಿಸಿಲ್ಲ. ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲಕ್ಕೆ ಮುನ್ನ ಸಣ್ಣ ಪುಟ್ಟ ಹೊಂಡ ತೇಪೆ ಕಾರ್ಯ ಹಾಗೂ ಹೆದ್ದಾರಿಯ ಬದಿಯ ಚರಂಡಿ ನಿರ್ವಹಣೆ ಮಾಡಿದರೆ ಇಂತಹ ಸಮಸ್ಯೆ ಆಗುತ್ತಿರಲಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಚರಂಡಿ ಇಲ್ಲದಿರುವುದೇ ಸಮಸ್ಯೆ
ಕೆಲವು ಕಡೆಗಳಲ್ಲಿ ಚರಂಡಿಯ ಸಮರ್ಪಕ ನಿರ್ವಹಣೆ ಇಲ್ಲದೆ ಚರಂಡಿಯಲ್ಲಿ ಹರಿಯ ಬೇಕಾದ ನೀರು ರಸ್ತೆಯಲ್ಲಿ ಹರಿದು ರಸ್ತೆ ಹದಗೆಟ್ಟು ಹೋಗಿದೆ. ಕೆಲವು ಕಡೆಗಳಲ್ಲಿ ರಸ್ತೆ ಹಾಕಿದ ಫೇವರ್ ಫಿನಿಶ್ ಕಿತ್ತು ಹೋಗಿದೆ. ರಸ್ತೆ ರಿಪೇರಿ ಬಗ್ಗೆ ಯಾವ ಅಧಿಕಾರಿಯೂ ಚಕಾರ ಎತ್ತುತ್ತಿಲ್ಲ. ಶೀಘ್ರ ಸಂಬಂಧಿತ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು.
-ರಾಮಚಂದ್ರ ಕಾಮತ್, ದ್ವಿಚಕ್ರ ವಾಹನ ಚಾಲಕ
ಕಾಂಕ್ರೀಟ್ ರಸ್ತೆ ನಿರ್ಮಿಸಿ
ಮೂರು ಕಾವೇರಿಯಿಂದ ದಾಮಸ್‌ಕಟ್ಟೆ ಕುಕ್ಕಟ್ಟೆ ಹೋಗುವ ತನಕ ರಸ್ತೆ ವಿಸ್ತರಣೆಗೊಂಡಿದೆ. ಪಟ್ಟೆ ಕ್ರಾಸ್ ತನಕ ಕಾಮಗಾರಿ ನಡೆಯಬೇಕಿತ್ತು. ಯಾವ ಕಾರಣದಿಂದ ನಡೆಯಲಿಲ್ಲ ಎಂಬ ಸ್ಪಷ್ಟ ಮಾಹಿತಿ ಇಲಾಖೆ ನೀಡುತ್ತಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿಯೂ ಹೊಂಡ ಗುಂಡಿಗಳ ಸಮಸ್ಯೆ ತೀವ್ರವಾಗಿತ್ತು. ಬಳಿಕ ಸ್ವಲ್ಪ ತೇಪೆ ಕಾರ್ಯ ಮಾತ್ರ ಮಾಡಲಾಯಿತು. ಇದೀಗ ಮತ್ತೆ ತೇಪೆ ಹಾಕಿದ್ದು ಎದ್ದು ಹೋಗಿ ಸಮಸ್ಯೆ ಉಂಟಾಗಿದೆ. ಇಂತಹ ಸಮಸ್ಯೆ ಶಾಶ್ವತ ಪರಿಹಾರ ಆಗಬೇಕಾಗಿದೆ. ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೆ ಸಮಸ್ಯೆ ಪರಿಹಾರವಾಗಬಹುದು ಎಂಬುದು ಜನರ ಅಭಿಪ್ರಾಯ.
-ರಘನಾಥ್ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.