ಕಿನ್ನಿಗೋಳಿ ಪಟ್ಟಣ ಪಂ. ವ್ಯಾಪ್ತಿ: ಒಳಚರಂಡಿ ತ್ಯಾಜ್ಯ ಹರಿದು ಬಾವಿ ನೀರು ಕುಲುಷಿತ
Team Udayavani, May 15, 2024, 2:42 PM IST
ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಿತ್ತುಲ್ ಪ್ರದೇಶದಲ್ಲಿ ಕಿನ್ನಿಗೋಳಿ ಪೇಟೆಯ ಒಳಚರಂಡಿ ನೀರು ತೆರೆದ ತೋಡಿನಲ್ಲಿ ಹರಿಯುವ ಕಾರಣ ಕಿನ್ನಿಗೋಳಿಯ ಬಿತ್ತುಲು ಪ್ರದೇಶದ ಹಲವು ಬಾವಿಯ ನೀರು ಹಾಳಾಗಿದ್ದು ಮಾತ್ರವಲ್ಲದೆ ಇಲ್ಲಿನ ಜನತೆಗೆ ರೋಗ ಭೀತಿ ಎದುರಾಗಿದೆ.
ಕಳೆದ 2016- 2017ರಲ್ಲಿ ಕಿನ್ನಿಗೋಳಿ ಬಿತ್ತುಲ್ ಪ್ರದೇಶದಲ್ಲಿ ಎಸ್‌ಟಿಪಿ ಪ್ಲಾಂಟ್ ನಿರ್ಮಾಣ ವಾಗಿದ್ದು, ಕಿನ್ನಿಗೋಳಿಯ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರನ್ನು ಇದಕ್ಕೆ ಹಾಯಿಸಲಾಗಿ ಪ್ಲಾಂಟ್ ನಿಂದ ಹೊರ ಬಂದ ನೀರನ್ನು ಸ್ಥಳೀಯ ತೋಟಗಳಿಗೆ ಬಿಡಲಾಗುತ್ತಿತ್ತು. ಕಾಲ ಕ್ರಮೇಣ ನೀರು ಶುದ್ಧೀಕರಣಗೊಳ್ಳದೆ ನೇರವಾಗಿ ತೋಟಕ್ಕೆ ಹರಿದ ಕಾರಣ ಇಲ್ಲಿನ ವಾಸನೆಯುಕ್ತ ಪರಿಸರ ಮಾತ್ರವಲ್ಲದೆ, ತೆರೆದ ತೋಡಿನಲ್ಲಿ ಹರಿಯುವ ಕಾರಣ ಸ್ಥಳೀಯರ ಕುಡಿಯುವ ನೀರಿನ ಬಾವಿಗೆ ಇಂಗಿ ಅಲ್ಲಿಯ ನೀರು ಹಾಳಾಗಿದೆ. ಈ ಬಗ್ಗೆ ಸ್ಥಳೀಯರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ
ದೂರು ನೀಡಿದ್ದರು.
ಕಿನ್ನಿಗೋಳಿ ಬಹು ಮಹಡಿ ಕಟ್ಟಡಗಳಲ್ಲಿ ಎಸ್‌ಟಿಪಿ ಪ್ಲಾಂಟ್ ಇದ್ದರೂ ಕೆಲವೊಂದು ಸಲ ಶುದ್ಧೀಕರಿಸದೆ ನೇರವಾಗಿ ನೀರನ್ನು ಹೊರ ಬಿಡುತ್ತಾರೆ ಎಂಬುದು ಸ್ಥಳೀಯರ ಆರೋಪ. ಅಲ್ಲದೆ ಪಂಚಾಯತ್‌ನ ಎಸ್‌ಡಿಪಿ ಪ್ಲಾಂಟ್ ಕೂಡ ಕೆಟ್ಟು ಹೋಗಿದ್ದು, ಇದರಿಂದ ನೀರು ನೇರವಾಗಿ ಹೊರ ಬರುತ್ತದೆ ಎನ್ನಲಾಗುತ್ತಿದೆ. ಈ ಘಟಕದ ಪಂಪ್ ಕೆಟ್ಟು ಹೋಗಿದ್ದು, ಇತ್ತೀಚೆಗೆ
ಹೊಸ ಪಂಪ್ ಅಳವಡಿಸಲಾಗಿದೆ. ಆದರೂ ಈ ಸಮಸ್ಯೆಯನ್ನು ಪರಿಹಾರ ಕಂಡಿಲ್ಲ.
ಆರೋಗ್ಯ ಇಲಾಖೆ ಇತ್ತ ನೋಡಲಿ
ಇಲ್ಲಿ ಪಟ್ಟಣ ಪಂಚಾಯತ್‌ಗೆ ಜನ ಸಾಮಾನ್ಯ ಸಮಸ್ಯೆಗೆ ಬಗ್ಗೆ ಕಾಳಜಿ ಇಲ್ಲ. ಈಗಾಗಲೇ ಹಲವಾರು ಕುಡಿಯವ ನೀರಿನ ಬಾವಿಗಳು ಬಳಕೆಗೆ ಅಯೋಗ್ಯವಾಗಿವೆ. ಬಿತ್ತುಲ್ ಪರಿಸರದಲ್ಲಿ ಈಗಾಗಲೇ ಹಲವಾರು ಮಂದಿ ಅಸ್ತಮಾ, ಚರ್ಮ ರೋಗ, ಮಲೇರಿಯಾ ಜ್ವರ, ಆನೆ ಕಾಲು ರೋಗ, ಮುಂದಕ್ಕೆ ಡೆಂಗ್ಯೂ, ಇನ್ನಿತರ ಕಾಯಿಲೆಗಳು ಬರುವುದು ಬಾಕಿ ಜನಪ್ರತಿನಿಧಿಗಳು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯವರು ಇಲ್ಲಿಗೆ ಒಂದು ಸಲ ಭೇಟಿ ನೀಡಿ ಇಲ್ಲಿನ ಜನರು ಯಾವ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂಬುದನ್ನು ನೋಡಬೇಕಾಗಿದೆ ಎಂದು ಸ್ಥಳೀಯ ರಾದ ಪ್ರಣಿಕ್ ಆಗ್ರಹಿಸಿದ್ದಾರೆ.
ಹೊಸ ಘಟಕಕ್ಕೆ ಜಾಗ ಗುರುತಿಸಲಾಗಿದೆ ಈಗ ಇರುವ ದ್ರವತಾಜ್ಯ ಘಟಕವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸದ್ಯಕ್ಕೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಕಿನ್ನಿಗೋಳಿಗೆ ಈ ಘಟಕದ ಸಾಮರ್ಥ್ಯ ಸಾಕಾಗುತ್ತಿಲ್ಲ. ಹೊಸ ಘಟಕ ನಿರ್ಮಿಸಲು ಈ ಪ್ರದೇಶದಲ್ಲಿ 80 ಸೆಂಟ್ಸ್ ಜಾಗ ಗುರುತಿಸಲಾಗಿದೆ. ಘಟಕಕ್ಕೆ ಸುಮಾರು 80 ಲಕ್ಷ ರೂ. ವೆಚ್ಚ ತಗುಲಬಹುದು. ಅದಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗಿದೆ.
ನಾಗರಾಜ್, ಮುಖ್ಯಾಧಿಕಾರಿಗಳು, ಕಿನ್ನಿಗೋಳಿ ಪಟ್ಟಣ
ಪಂಚಾಯತ್
*ರಘುನಾಥ ಕಾಮತ್ ಕೆಂಚನಕರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.