ವಿಶೇಷ ವರದಿ: ಕೊಡಿಯಾಲ್‌ಗುತ್ತು ಕ್ರಾಸ್: ಸಮಸ್ಯೆ ತಪ್ಪಿದ್ದಲ್ಲ
ವರ್ಷದೊಳಗೆ ಒಂದೇ ರಸ್ತೆ ನಾಲ್ಕು ಬಾರಿ ಅಗೆತ !
Team Udayavani, May 25, 2020, 10:03 AM IST
ಮಂಗಳೂರು: ಮಂಗಳೂರು ನಗರದ ಜೈಲು ರಸ್ತೆಯಿಂದ ಬಿಜೈಗೆ ಸಂಪರ್ಕ ಕಲ್ಪಿಸುವ ಕೊಡಿಯಾಲ್‌ಗುತ್ತು ಕ್ರಾಸ್ ರಸ್ತೆ ಅಕ್ಕ-ಪಕ್ಕದಲ್ಲೇ ಕಳೆದ ಒಂದು ವರ್ಷಗಳಿಂದ ನಾಲ್ಕು ಬಾರಿ ಕಾಮಗಾರಿಯ ನೆಪದಲ್ಲಿ ಅಗೆಯಲಾಗಿದೆ. ಜತೆಗೆ ಸಮಸ್ಯೆಗಳು ಪುನರಾವರ್ತನೆಯಾಗುತ್ತಲೇ ಇವೆ.
ಸ್ಥಳೀಯರಿಗೆ ಕಿರಿಕಿರಿ
ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡುವುದರೊಂದಿಗೆ ರಸ್ತೆಯಲ್ಲಿ ಸಾಗುವ ಸ್ಥಳೀಯರಿಗೆ, ವಾಹನ ಸವಾರರಿಗೆ ಅಡ್ಡಿಯುಂಟಾಗುತ್ತಿದೆ. ಈ ಜಾಗದಲ್ಲಿ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಪಾಲಿಕೆ ಮಾಡಿಲ್ಲ ಎನ್ನುವುದು ಆರೋಪ.
ಕೃತಕ ನೆರೆ
ಜೋರಾಗಿ ಮಳೆ ಬಂದರೆ ಈ ಪ್ರದೇಶದ ಸುತ್ತಮುತ್ತಲಿನ ಮನೆಗೆ ಕೃತಕ ನೆರೆ ಉಂಟಾಗುತ್ತದೆ. ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದ ಕಾರಣ, ಮಳೆ ನೀರು ರಾಜಕಾಲುವೆಯನ್ನು ಸೇರುತ್ತಿಲ್ಲ. ಬದಲಾಗಿ ರಸ್ತೆಯಲ್ಲಿಯೇ ಹರಿದು ಅಕ್ಕ-ಪಕ್ಕದ ಫ್ಲಾಟ್, ಮನೆಗಳಿಗೆ ನುಗ್ಗುತ್ತಿದೆ. ಕಳೆದ ವರ್ಷ ಕೂಡ ಇದೇ ರೀತಿಯ ಸಮಸ್ಯೆ ಉಂಟಾಗಿ ರಸ್ತೆ ಅಗೆದು ಕಾಮಗಾರಿ ನಡೆಸಲಾಗಿತ್ತು. ಇದೀಗ ಶನಿವಾರದಿಂದ ಮತ್ತೂಮ್ಮೆ ರಸ್ತೆ ಅಗೆಯುವ ಕೆಲಸದಲ್ಲಿ ಪಾಲಿಕೆ ತೊಡಗಿಸಿಕೊಂಡಿದೆ.
ಹಲವು ಬಾರಿ ಕೆಲಸ
ಈ ರಸ್ತೆಯಲ್ಲಿ ಹಾದು ಹೋಗುವ ನೀರಿನ ಪೈಪ್‌ಲೈನ್ ಕೆಲ ತಿಂಗಳ ಹಿಂದೆ ಕೆಟ್ಟಿತ್ತು. ಇದೇ ಕಾಮಗಾರಿಗೆ ಡ್ರಿಲ್ಲಿಂಗ್ ಮಷೀನ್ ಮುಖೇನ ರಸ್ತೆ ಅಗೆಯಲಾಗಿತ್ತು. ಈ ಕಾಮಗಾರಿ ನಡೆಯುತ್ತಿರುವ ಕೂಗಳತೆ ದೂರದಲ್ಲಿ ಒಳಚರಂಡಿ ಕಾಮಗಾರಿಗೆಂದು ಸುಮಾರು 5 ಅಡಿಯಷ್ಟು ಆಳ ರಸ್ತೆ ಅಗೆಯಲಾಗಿತ್ತು. ಭಾರೀ ಮಳೆಯಿಂದಾಗಿ ಈ ಭಾಗದ ಒಳಚರಂಡಿ ಪೈಪ್‌ಲೈನ್‌ನ ಹತ್ತು ಅಡಿ ಆಳದಲ್ಲಿ ದೊಡ್ಡ ಗಾತ್ರದ ಕಲ್ಲು ಸಿಲುಕಿ ಹಾಕಿಕೊಂಡಿದ್ದರಿಂದ ನೀರು ಹರಿಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸುಮಾರು ಎರಡು ವಾರಗಳ ಬಳಿಕ ಕಾಮಗಾರಿ ಪೂರ್ಣಗೊಂಡಿತ್ತು.
ಈ ಕಾಮಗಾರಿ ಪೂರ್ಣಗೊಂಡ ಕೆಲವು ದಿನಗಳಲ್ಲೇ ಒಳಚರಂಡಿ ನೀರು ರಸ್ತೆಗೆ ಹರಿಯುತ್ತಿದೆ ಎಂಬ ಕಾರಣಕ್ಕೆ ಪಿಂಟೋ ಬೇಕರಿ ಸಮೀಪ ರಸ್ತೆ ಅಗೆಯಲಾಗಿತ್ತು.
ಬಳಿಕ ಪಕ್ಕದ ಮ್ಯಾನ್‌ಹೋಲ್‌ಗೆ ಪೈಪ್‌ಲೈನ್ ಸಂಪರ್ಕ ನೀಡಲಾಯಿತು. ಈವರೆಗೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಪರಿಹಾರ
ಕಳೆದ ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಹರಿಯದೆ ಸುತ್ತಮುತ್ತಲಿನ ಮನೆಗಳಿಗೆ ನುಗ್ಗಿತ್ತು. ಅದೇ ಕಾರಣಕ್ಕೆ ಚರಂಡಿ ಕಾಮಗಾರಿ ಶನಿವಾರ ಆರಂಭಗೊಂಡಿದ್ದು, ಎರಡು ವಾರದಲ್ಲಿ ಪೂರ್ಣಗೊಳ್ಳಲಿದೆ. ಕಳೆದ ಬಾರಿ ಮಾಡಿದ್ದ ಕಾಮಗಾರಿ ಸಮರ್ಪಕವಾಗಿಲ್ಲ. ಇದೇ ಕಾರಣಕ್ಕೆ ಆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿಲ್ಲ. ಈ ಬಾರಿ ಖಂಡಿತವಾಗಿಯೂ ಸಮಸ್ಯೆಗೆ ಪರಿಹಾರ ಸಿಗುತ್ತದೆ.
-ಯಶವಂತ್, ಸ್ಥಳೀಯ ಕಾರ್ಪೊರೇಟರ್.
ದೂರಿನ ಹಿನ್ನೆಲೆ
ಕೊಡಿಯಾಲ್‌ಗುತ್ತು ಕ್ರಾಸ್ ಬಳಿ ನೀರು ಹರಿಯುವ ತೋಡಿಗೆ ಚರಂಡಿ ಸಂಪರ್ಕ ಕಲ್ಪಿಸಲಾಗುತ್ತಿದೆ. ವಿವಿಧ ಕಡೆಗಳಿಂದ ಹರಿದು ಬಂದ ಮಳೆ ನೀರು ಚರಂಡಿ ಸೇರದೆ ಕೃತಕ ನೆರೆ ಬರುತ್ತಿತ್ತು. ಮನೆ ಮಂದಿ ಈ ಬಗ್ಗೆ ದೂರು ನೀಡಿದ್ದು, ಕಾಮಗಾರಿ ಆರಂಭಿಸಲಾಗಿದೆ. ಈ ಹಿಂದೆ ನಡೆದ ಕಾಮಗಾರಿ ಬಗ್ಗೆ ಇಂಜಿನಿಯರ್ ಅವರೇ ಉತ್ತರಿಸಬೇಕು.
-ಸುಧೀರ್ ಶೆಟ್ಟಿ ಕಣ್ಣೂರು ಸ್ಥಳೀಯ ಕಾರ್ಪೊರೇಟರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.