ಕೊಟ್ಟಾರಚೌಕಿ: ರಸ್ತೆ ಗುಂಡಿ ಸರಿಪಡಿಸಿ
Team Udayavani, Apr 8, 2022, 11:28 AM IST
ಕೊಟ್ಟಾರಚೌಕಿ: ರಸ್ತೆಗಳಲ್ಲಿ ಮ್ಯಾನ್ಹೋಲ್ ಗಾಗಿ ಮಾಡಿರಿಸಲಾದ ರಚನೆ ವಾಹನ ಸವಾರರಿಗೆ ಸಂಕಷ್ಟ ತರುವ ಹಲವು ಸ್ಥಳ ಮಂಗಳೂರಿನಲ್ಲಿದೆ. ಈ ಪೈಕಿ ಕೊಟ್ಟಾರಚೌಕಿ ಫ್ಲೈಓವರ್ ಕೆಳಭಾಗದ ಸಮಸ್ಯೆ ಕೂಡ ಇದೀಗ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟು ಮಾಡಿದೆ.
ಲೇಡಿಹಿಲ್ ಕಡೆಯಿಂದ ಕೂಳೂರು ಭಾಗಕ್ಕೆ ಕೊಟ್ಟಾರಚೌಕಿ ಫ್ಲೈಓವರ್ ಕೆಳಭಾಗದಿಂದ ತಿರುವು ಪಡೆಯುವ ಸಂದರ್ಭದಲ್ಲಿಯೇ ಇಂತಹ ಸಮಸ್ಯೆಗಳು ಕಿರಿಕಿರಿ ಉಂಟು ಮಾಡುತ್ತಿದೆ. ಅದರಲ್ಲಿಯೂ ದ್ವಿಚಕ್ರ ವಾಹನಗಳ ಓಡಾಟಕ್ಕೆ ಇಲ್ಲಿ ನಿತ್ಯ ಸಮಸ್ಯೆ ಉಂಟು ಮಾಡಿದೆ.
ಒಂದೆಡೆ ಹೊಂಡ ಇದ್ದರೆ, ಮತ್ತೂಂದೆಡೆ ಹೊಂಡ ಮುಚ್ಚಲು ಅವೈಜ್ಞಾನಿಕವಾಗಿ ಮಾಡಿದ ಕಾಮಗಾರಿ… ಹೀಗೆ ಬೇರೆ ಬೇರೆ ವಿಧಾನದಲ್ಲಿ ಇಲ್ಲಿ ಸಮಸ್ಯೆ ಇದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಇಲ್ಲಿನ ರಸ್ತೆಯನ್ನು ಈಗಲೇ ದುರಸ್ತಿ ಮಾಡಿದರೆ ಉತ್ತಮ; ಇಲ್ಲವಾದರೆ ಮಳೆಗಾಲಕ್ಕೆ ಇಲ್ಲಿ ಮತ್ತೂಂದು ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.