‘ಪ್ರವಾಸಿ ಬಸ್’ ಆರಂಭಕ್ಕೆ ಕೆ.ಎಸ್.ಆರ್.ಟಿ.ಸಿ. ಉತ್ಸುಕ
Team Udayavani, Oct 10, 2022, 11:02 AM IST
ಮಹಾನಗರ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಪ್ರವಾಸಿ ತಾಣಗಳ ಭೇಟಿಗೆಂದು ವಿಶೇಷ “ಪ್ರವಾಸಿ ಬಸ್’ ಆರಂಭಿಸಲು ಕೆ.ಎಸ್.ಆರ್.ಟಿ.ಸಿ. ಉತ್ಸುಕವಾಗಿದೆ.
ಕೆ.ಎಸ್.ಆರ್.ಟಿ.ಸಿ. ಯು ನವರಾತ್ರಿ ಹಿನ್ನೆಲೆಯಲ್ಲಿ “ಮಂಗಳೂರು ದಸರಾ ದರ್ಶನ’ ಬಸ್ ಟೂರ್ ಆರಂಭಿಸಿ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ “ಪ್ರವಾಸಿ ಬಸ್’ ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ ಕ್ಷೇತ್ರ, ಬೀಚ್‌ಗಳಿಗೆ ಹೆಸರುವಾಸಿ. ಹೀಗಿರುವಾಗ ಸಾಮಾನ್ಯ ದಿನಗಳಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಮಂದಿ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಅವರಿಗೆ ಅನುಕೂಲವಾಗುವ ಉದ್ದೇಶದಿಂದ ಈ ವ್ಯವಸ್ಥೆಗೆ ಶೀಘ್ರ ಚಾಲನೆ ಸಿಗುವ ನಿರೀಕ್ಷೆ ಇದೆ.
ಸದ್ಯ ಪ್ರವಾಸಿಗರಿಂದ ಸೋಮೇಶ್ವರ, ಬೆಂಗ್ರೆ, ತಣ್ಣೀರುಬಾವಿ, ಪಣಂಬೂರು ಸಹಿತ ಸುರತ್ಕಲ್ ಭಾಗದ ಬೀಚ್ ಟೂರ್ ಆರಂಭಕ್ಕೆ, ಅದೇ ರೀತಿ, ಶೃಂಗೇರಿ, ಕೊಲ್ಲೂರು, ಕಮಲಶಿಲೆ, ಮಂದಾರ್ತಿ ಭಾಗದ ದೇವಸ್ಥಾನಗಳ ದರ್ಶನ ಮತ್ತು ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೂ ಕೆಎಸ್ಸಾರ್ಟಿಸಿಗೆ ಬೇಡಿಕೆ ಬರಲು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಕೆ.ಎಸ್.ಆರ್.ಟಿ.ಸಿ. ಮೇಲಾಧಿಕಾರಿಗಳು ಸಹಿತ ಇತರ ಅಧಿಕಾರಿಗಳ ಬಳಿ ಚರ್ಚೆ ನಡೆಸಿ, ಟೂರ್ ಬಸ್ ಆರಂಭಕ್ಕೆ ಕೆ.ಎಸ್.ಆರ್.ಟಿ.ಸಿ. ನಿರ್ಧರಿಸಿದೆ.
ಈ ಹಿಂದೆ ಇದ್ದ ಬಸ್ ಈಗಿಲ್ಲ
ನಗರದಿಂದ ಆರು ವರ್ಷಗಳ ಹಿಂದೆ ಕೆಎಸ್‌ಟಿಡಿಸಿ (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಯಿಂದ ಸಿಟಿ ಟೂರ್ ಬಸ್ ಇತ್ತು. ಈ ಬಸ್ ಲಾಲ್‌ಬಾಗ್‌ನಿಂದ ಹೊರಟು ಕುದ್ರೋಳಿ ದೇವಸ್ಥಾನ, ಕದ್ರಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ ನಿಸರ್ಗಧಾಮ-ಜೈವಿಕ ಉದ್ಯಾನವನ, ತಣ್ಣೀರುಬಾವಿ ಟ್ರೀಪಾರ್ಕ್, ಕಡಲತೀರದಿಂದ ಪುನಃ ಲಾಲ್‌ಬಾಗ್‌ಗೆ ತೆರಳುತ್ತಿತು. ಆರಂಭದಲ್ಲಿ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಇತ್ತು. ಮಳೆಗಾಲ ಕೊನೆಗೊಳ್ಳುವುದರಲ್ಲಿ ಬಸ್‌ನ ಕೆಲವೊಂದು ಬಿಡಿ ಭಾಗಗಳು ಹದಗೆಟ್ಟಿತ್ತು. ಕೆಲವು ದಿನಗಳ ಬಳಿಕ ಈ ಬಸ್ ಅನ್ನು ಬೆಂಗಳೂರಿಗೆ ಸಾಗಿಸಲಾಗಿತ್ತು. ಅದಾದ ಬಳಿಕ ಟೂರ್ ಬಸ್ ಮಂಗಳೂರಿಗೆ ಮತ್ತೆ ಬರಲಿಲ್ಲ.
10 ದಿನ, 12.19 ಲಕ್ಷ ರೂ. ಆದಾಯ
ಕೆಎಸ್ಸಾರ್ಟಿಸಿಯು ಸೆ. 26ರಿಂದ 10 ದಿನಗಳ ಕಾಲ ನಗರದ ಪ್ರಮುಖ ದೇವಿ ದೇವಾಲಯಗಳಿಗೆ “ಮಂಗಳೂರು ದಸರಾ ದರ್ಶನ’ ಬಸ್ ಸೇವೆಗೆ ಪ್ರವಾಸಿಗರಿಂದ ಅಭೂತಪೂರ್ವ ಯಶಸ್ಸು ಬಂದಿದೆ. ಹತ್ತು ದಿನಗಳಲ್ಲಿ 1,038 ಮಂದಿ ಪ್ರಯಾಣಿಸಿದ್ದಾರೆ. ಮೊದಲ ದಿನ ಮೂರು ಬಸ್ ಸಂಚರಿಸಿದರೆ ಅ.2ರಂದು ಒಂದೇ ದಿನ 22 ಬಸ್ ಕಾರ್ಯಾಚರಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಶಿವಮೊಗ್ಗ ಸಹಿತ ವಿವಿಧ ಜಿಲ್ಲೆಗಳ ಯುವಕರು, ಮಹಿಳೆಯರು, ಹಿರಿಯ ನಾಗಿರಕರು ಕೂಡ ಪ್ರವಾಸಿ ತಾಣ ವೀಕ್ಷಣೆಗೆ ಆಸಕ್ತಿ ತೋರಿದ್ದರು.
ದೀಪಾವಳಿಗೆ ಮತ್ತೆ “ಟೂರ್ ಬಸ್’
ನವರಾತ್ರಿ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಆರಂಭಗೊಂಡ “ಮಂಗಳೂರು ದಸರಾ ದರ್ಶನ’ ಬಸ್ ಟೂರ್ ಯಶಸ್ಸಿನ ಹಿನ್ನೆಲೆಯಲ್ಲಿ ಮುಂಬರುವ ದೀಪಾವಳಿಗೂ ಇದೇ ರೀತಿ ಟೂರ್ ಪ್ಯಾಕೇಜ್ ಆರಂಭಿಸಲು ಕೆಎಸ್ಸಾರ್ಟಿಸಿ ಚಿಂತನೆ ನಡೆಸುತ್ತಿದೆ. ಮಂಗಳೂರು ಮತ್ತು ತುಸು ಹೊರ ಭಾಗದ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಬಸ್ ಸೇವೆ ಆರಂಭಕ್ಕೆ ಯೋಜನೆ ರೂಪಿಸುತ್ತಿದೆ.
ಕೆ.ಎಸ್.ಆರ್.ಟಿ.ಸಿ.ಯಿಂದ ಕೆಲ ದಿನಗಳ ಹಿಂದೆ ಆರಂಭಿಸಿದ “ಮಂಗಳೂರು ದಸರಾ ದರ್ಶನ’ ಬಸ್ ಟೂರ್‌ಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದೀಪಾವಳಿ ವೇಳೆಯೂ ಇದೇ ರೀತಿ ಪ್ಯಾಕೇಜ್ ಟೂರ್ ಆರಂಭಿಸುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಈ ಹಿಂದೆ ಇದ್ದಂತೆ ಪ್ರವಾಸಿ ಬಸ್ ಆರಂಭಿಸುವ ನಿಟ್ಟಿನಲ್ಲಿಯೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. –ರಾಜೇಶ್ ಶೆಟ್ಟಿ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.