

Team Udayavani, Jan 30, 2025, 2:45 PM IST
ಕುಳಾಯಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸಾಗರ್ ಮಾಲಾದ ಭಾಗವಾದ ಕುಳಾಯಿ ಕಿರು ಬಂದರು ಯೋಜನೆಗೆ ತ್ರಿಶಂಕು ಸ್ಥಿತಿಯಲ್ಲಿದೆ.
ನಾಡದೋಣಿ ಮೀನುಗಾರರ ಬೇಡಿಕೆ ಈಡೇರಿಕೆಗೆ ಮರು ವಿನ್ಯಾಸ ಮಾಡಬೇಕಾದ ಅಗತ್ಯವಿದ್ದು, ಬಂದರು ಕಾಮಗಾರಿ ವಿಳಂಬ ವಾಗುವ ಸಾಧ್ಯತೆ ಯಿದೆ. ಮೂರು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಕೇಂದ್ರ ಸರಕಾರದ ಈ ಯೋಜನೆಯಿಂದ ಸಾವಿರಾರು ಮೀನುಗಾರರಿಗೆ ಉಪಯೋಗ ಆಗಲಿದೆ ಎಂಬ ನಿರೀಕ್ಷೆ ಇರಿಸಲಾಗಿತ್ತು. ಇಲ್ಲಿನ ಬ್ರೇಕ್ ವಾಟರ್ ಅಪಾಯಕಾರಿ, ಮೀನುಗಾರಿಕೆಗೆ ಅದ ರಲ್ಲೂ ನಾಡದೋಣಿ ಮೀನುಗಾರರಿಗೆ ಉಪಯೋಗವಿಲ್ಲ. ಕಾಮಗಾರಿಯು ಕೇಂದ್ರ ಜಲ ಮತ್ತು ವಿದ್ಯುತ್ ಸಂಶೋಧನ ಕೇಂದ್ರದ ವಿನ್ಯಾಸದಂತೆ ಇಲ್ಲ ಎಂಬ ಆರೋಪ ಕೇಳಿ ಬಂದಿತ್ತು. ತಾಂತ್ರಿಕವಾಗಿ ಇದು ವಿಫಲ ಯೋಜನೆ ಎಂದು ಆರೋಪ ಎದುರಾಗಿತ್ತು. ಇದನ್ನು ಕೇಂದ್ರ ಜಲ ಮತ್ತು ವಿದ್ಯುತ್ ಸಂಶೋಧನ ಕೇಂದ್ರ ಹಾಗೂ ಡಿಪಿಆರ್ ತಯಾರಿಸಿದ್ದ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕೋಸ್ಟಲ್ ಎಂಜಿನಿಯರಿಂಗ್ ಫಾರ್ ಫಿಶರಿಸ್ ನಿರಾಕರಿಸಿತ್ತು.
ಈ ನಡುವೆ ನಾಡದೋಣಿ ಮೀನುಗಾರ ಸಂಘಟನೆಗಳು ಬ್ರೇಕ್ ವಾಟರ್ ವಿಸ್ತರಣೆ ಹಾಗೂ ಸುರಕ್ಷಿತ ಕಿರುಜೆಟ್ಟಿ ನಿರ್ಮಾಣಕ್ಕೆ ಆಗ್ರಹಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಬ್ರೇಕ್ ವಾಟರ್ ವಿಸ್ತರಣೆಗೆ ಸಂಬಂಧಪಟ್ಟ ಎನ್‌ಎಂಪಿಎಗೆ ಸೂಚಿಸಿತ್ತು. ಆದರೆ ವಿವಿಧ ತಾಂತ್ರಿಕ ಅನುಮೋದನೆ ಪಡೆದು ಕಾಮಗಾರಿ ನಡೆಯುತ್ತಿರುವುದರಿಂದ ಮರುವಿನ್ಯಾಸ, ಹೆಚ್ಚುವರಿ ಅನುದಾನ ಬೇಕಿದ್ದು, ಕೇಂದ್ರದಿಂದ ಮತ್ತೆ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಬೇಕಿದೆ. ಹೀಗಾಗಿ ಈ ಹಿಂದಿನ ನಿಗದಿತ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಮುಟ್ಟುವುದು ಅಸಾಧ್ಯವಾಗಿದೆ.
ಸರ್ವಋತು ಬಂದರು ನಿರ್ಮಾಣ
ಸುಮಾರು 9.75 ಎಕ್ರೆ ಪ್ರದೇಶ ಈ ಜೆಟ್ಟಿ ನಿರ್ಮಾಣಕ್ಕೆ ಅಗತ್ಯವಿದ್ದು, ಮೀನುಗಾರಿಕೆ, ದೋಣಿಗಳ ನಿಲುಗಡೆಗೆ ಸಂಬಂಧಿಸಿದಂತೆ ಸ್ಥಳ, ಏಲಂ ಸ್ಥಳ, ನೆಟ್ ದುರಸ್ತಿ ಕೇಂದ್ರ, ಮೀನುಗಳನ್ನು ವಾಹನಗಳಿಗೆ ತುಂಬಿಸಲು ಸ್ಥಳಾವಕಾಶ, ದೋಣಿ ದುರಸ್ತಿ, ಶೌಚಾಲಯ, ರೇಡಿಯೋ ಟವರ್ ಮತ್ತಿತರ ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ವರ್ಷದ 12 ತಿಂಗಳೂ ಮೀನುಗಾರಿಕೆ ನಡೆಸುವ ಸರ್ವಋತು ಬಂದರು ನಿರ್ಮಾಣ ಎಂಬುದು ಸದ್ಯ ಯೋಜನೆಯಲ್ಲಿದೆ. ಕಿರು ಬಂದರು ನಿರ್ಮಾಣದಲ್ಲಿ ಸ್ವೋದ್ಯೋಗ ಸಹಿತ ಪರೋಕ್ಷ ಉದ್ಯೋಗ ಸೃಷ್ಟಿ, ಜಿಲ್ಲೆಯ ಆರ್ಥಿಕ ವಹಿವಾಟಿಗೆ ಈ ಬಂದರು ವರದಾನವಾಗಲಿದೆ.
ಸಚಿವರ ಗಮನಕ್ಕೆ ತರುತ್ತೇನೆ
ಕಿರುಜೆಟ್ಟಿ ಸ್ಥಳೀಯ ಮೀನುಗಾರರ ಅನುಕೂಲಕ್ಕೆ ತಕ್ಕಂತೆ ಬ್ರೇಕ್ ವಾಟರ್ ವಿಸ್ತರಣೆಗೆ ಆಗ್ರಹಿಸಲಾಗಿತ್ತು. ಇದಕ್ಕೆ ಬೇಕಾದ ಪೂರಕ ಕ್ರಮ ಕೈಗೊಂಡು ಕಿರು ಜೆಟ್ಟಿ ಕಾಮಗಾರಿ ವಿಳಂಬವಾಗದಂತೆ ಸರಕಾರ ಸೂಕ್ತ ನಿರ್ದೇಶನ ನೀಡಿ ಕಾಮಗಾರಿ ಮುಂದುವರಿಸಲು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರ ಗಮನಕ್ಕೆ ತರುತ್ತೇನೆ.
-ಡಾ| ಭರತ್ ಶೆಟ್ಟಿ ವೈ., ಶಾಸಕರು, ಮಂಗಳೂರು ನಗರ ಉತ್ತರ
Mangaluru ಸಿಸಿಬಿ ಪೊಲೀಸರ ಭರ್ಜರಿ ಭೇಟೆ: 119 ಕೆ.ಜಿ. ಗಾಂಜಾ ಸಾಗಾಟ; ನಾಲ್ವರ ಸೆರೆ
ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಸರಣಿ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ; ಬಂಧನ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Panambur: ಡ್ರಗ್ಸ್ ಸೇವನೆ: 6 ಮಂದಿ ಸೆರೆ
Manipal: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ: ವ್ಯಕ್ತಿಯ ಅಂಗಾಂಗ ದಾನ
ಅಂಗನವಾಡಿಯ ಪೌಷ್ಠಿಕ ಸಾಮಗ್ರಿಗಳ ಅಕ್ರಮ ದಾಸ್ತಾನು: ಜಿಲ್ಲಾ ಉಪ ನಿರ್ದೇಶಕ, ಸಿಡಿಪಿಒ ಅಮಾನತು
ಭದ್ರಾವತಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಆತ್ಮಹ*ತ್ಯೆ
Congress: ದಲಿತ ಸಮಾವೇಶ ಬೇಡ ಅಂತ ಹೈಕಮಾಂಡ್ ಹೇಳಿಲ್ಲ: ಸಚಿವ ಕೆ.ಎಚ್. ಮುನಿಯಪ್ಪ
Dharawad: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು: ಸಚಿವ ಲಾಡ್
You seem to have an Ad Blocker on.
To continue reading, please turn it off or whitelist Udayavani.