ಕೂಳೂರು ಬಸ್ ನಿಲ್ದಾಣ: ನಿರ್ವಹಣೆ ಕೊರತೆ:ಕುಡಿಯುವ ನೀರಿನ ಸೌಲಭ್ಯ ಬಂದ್!
Team Udayavani, Apr 11, 2024, 2:47 PM IST
ಕೂಳೂರು: ಕೂಳೂರಿನ ಬಸ್ ನಿಲ್ದಾಣದಲ್ಲಿ ಕೆಐಒಸಿಎಲ್ 2012ರಲ್ಲಿ ಸುಸಜ್ಜಿತ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದು, ಇದೀಗ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ. ಈ ಹಿಂದೆ ಜೇಸಿಐ ಸುರತ್ಕಲ್ ನಿರ್ವಹಣೆ ಮಾಡುತ್ತಿದ್ದರೂ ಮಹಾನಗರ
ಪಾಲಿಕೆಯ ಸೂಕ್ತ ಪ್ರೋತ್ಸಾವಿಲ್ಲದೆ ಕುಡಿಯುವ ನೀರು ಸಾರ್ವಜನಿಕರಿಗೆ ದೊರಕದಂತಾಗಿದೆ.
ಇಲ್ಲಿ ಸುಸಜ್ಜಿತ ಟ್ಯಾಂಕ್ ಇದೆ. ಆದರೆ ನೀರು ಬರುತ್ತಿಲ್ಲ. ಇದೀಗ ನೀರಿನ ಸಂಪರ್ಕವೇ ಇಲ್ಲದಂತಾಗಿದೆ. ರಸ್ತೆಯ
ಬದಿಯಲ್ಲಿರುವುದರಿಂದ ಸ್ವತ್ಛತೆಯೇ ಪ್ರಮುಖ ಸವಾಲಾಗಿತ್ತು. ನಿತ್ಯ ವಾಹನ ಓಡಾಟದಿಂದ ಧೂಳಿನ ರಾಶಿ ಇಲ್ಲಿ ಕಂಡು ಬರುತ್ತಿತ್ತು. ಕುಡಿಯಲು ಟ ಇಟ್ಟರೆ ಕಾಣೆಯಾಗುತ್ತಿತ್ತು.
ಹೀಗಾಗಿ ಇಲ್ಲಿನ ಸೌಲಭ್ಯ ಹೆಚ್ಚಾಗಿ ಪ್ರಯಾಣಿಕರಿಗೆ ಸಿಗದೆ ಪಾಳು ಬಿದ್ದಿದೆ. ಇದರ ನಿರ್ವಹಣೆಯನ್ನು 2022ರ ವರೆಗೆ ಜೇಸಿಐ ಮಾಡಿತ್ತು. ಆದರೆ ಇದರ ಯಂತ್ರದ ದುರಸ್ತಿ ಕಷ್ಟಸಾಧ್ಯವಾದ ಕಾರಣ ಸಂಸ್ಥೆಯು ಕುದುರೆಮುಖ ಸಂಸ್ಥೆಗೆ ಪತ್ರಬರೆದು
ನಿರ್ವಹಣೆ ಸ್ವತಃ ತಾವೇ ಮಾಡಬೇಕೆಂದು ಕೇಳಿಕೊಂಡಿತ್ತು. ಆ ಬಳಿಕ ಯಥಾ ಸ್ಥಿತಿ ಮುಂದುವರಿದಿದೆ. ಇದರ ಸೂಕ್ತ
ನಿರ್ವಹಣೆಯಾದಲ್ಲಿ ಬಿರು ಬಿಸಿಲ ಬೇಗೆಗೆ ಬಸವಳಿದು ಬರುವ ಪ್ರಯಾಣಿಕರಿಗೆ, ಸುತ್ತಮುತ್ತಲಿನ ಕಾರ್ಮಿಕ ವರ್ಗಕ್ಕೆ
ಪ್ರಯೋಜನಕಾರಿಯಾಗಬಹುದು.
ಸ್ವಚ್ಛತೆಯಿಂದ ಪುನರ್ ಸೌಲಭ್ಯ ಕಲ್ಪಿಸಿ ಹೆದ್ದಾರಿ 66ರ ಪ್ರಮುಖ ಸ್ಥಳದಲ್ಲಿದ್ದು ದೂರದ ಮಂಗಳೂರು, ಕಾವೂರು ಸಂಪರ್ಕದ ಪ್ರಮುಖ ಕೇಂದ್ರ. ಇಲ್ಲಿಂದಲೇ ನಿತ್ಯ ನೂರಾರು ಪ್ರಯಾಣಿಕರು ತಮ್ಮ ಕಾರ್ಯನಿಮಿತ್ತ ತೆರಳುತ್ತಾರೆ. ಎಕ್ಸ್‌ಪ್ರೆಸ್ ಬಸ್ ನಿಲ್ದಾಣವೂ ಇದೆ. ಅತ್ಯಾಧುನಿಕ ಶೈಲಿ ಯಲ್ಲಿ ಕುಡಿಯುವ ನೀರು ಪೋಲಾಗದಂತೆ ಇಂತಿಷ್ಟೇ ನೀರು ತಂತ್ರಾಂಶ ಬಳಸಿ ನಿರ್ಮಿಸಿದಲ್ಲಿ ಉಪಯೋಗ ಸಿಗಬಹುದು.ಇಲ್ಲದೇ ಹೋದಲ್ಲಿ ದುರ್ಬಳಕೆ, ಪೈಪ್ ಕಳವು ಮತ್ತಿತರ ಸಮಸ್ಯೆ ಎದುರಾಗಬಹುದು.
-ಮಮತಾ, ಬಂಗ್ರಕೂಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.