ಕಂಬಳ ಋತು ಯಶಸ್ವಿ ಮುಕ್ತಾಯ
Team Udayavani, Mar 18, 2019, 4:04 AM IST
ಮಂಗಳೂರು: ವೇಣೂರು ಪೆರ್ಮುಡದ ಸೂರ್ಯಚಂದ್ರ ಜೋಡುಕರೆ ಕಂಬಳ ರವಿವಾರ ನಡೆಯುವುದರೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಋತುವಿನ ಕಂಬಳಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಪ್ರಸಕ್ತ ಋತುವಿನ ಕಂಬಳ ನವೆಂಬರ್‌ನಲ್ಲಿ ಅರಂಭಗೊಂಡಿತ್ತು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳು ಸೇರಿ ಒಟ್ಟು 18 ಕಂಬಳಗಳು ಆಯೋಜನೆಗೊಂಡಿದ್ದವು.
ಕಾನೂನು ಸಮರಗಳ ನಡುವೆಯೂ ಕಂಬಳ ಕ್ರೀಡೆ ನಿರ್ವಿಘ್ನವಾಗಿ ಮುಕ್ತಾಯಗೊಂಡಿದರುವುದು ಕಂಬಳ ಪ್ರಿಯರಲ್ಲಿ ಸಮಾಧಾನ ಮೂಡಿಸಿದೆ. ಎಂಟು ತಿಂಗಳ ಬಳಿಕ ಮತ್ತೆ ನವೆಂಬರ್‌ನಲ್ಲಿ ಮುಂದಿನ ಕಂಬಳ ಋತು ಆರಂಭಗೊಳ್ಳಲಿದೆ.
ಬೆತ್ತ ಬಳಸದ ಪ್ರಯೋಗ
ಕಂಬಳದಲ್ಲಿ ಪ್ರಾಣಿಹಿಂಸೆ ಮಾಡಲಾಗುತ್ತಿದೆ ಎಂಬ ಪೀಪಲ್ ಫಾರ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ (ಪೆಟಾ) ಸಂಸೆœಯ ಆರೋಪಗಳ ಹಿನ್ನೆಲೆಯಲ್ಲಿ ಬೆತ್ತ ಹಿಡಿಯದೆ ಕೋಣಗಳನ್ನು ಓಡಿಸುವ ಪ್ರಯೋಗವನ್ನು ಈ ಬಾರಿ ಮಾಡಲಾ ಗಿದೆ. ಮೂಡುಬಿದಿರೆ, ಕಕ್ಕೆಪದವು ಹಾಗೂ ಪೈವಳಿಕೆ ಕಂಬಳಗಳಲ್ಲಿ ಕೋಣಗಳನ್ನು ಓಡಿಸುವಾಗ ಬೆತ್ತ ಬಳಕೆ ಮಾಡಿರಲಿಲ್ಲ. ಸುಮಾರು 4 ವರ್ಷಗಳ ಹಿಂದೆ ಕಟಪಾಡಿ ಕಂಬಳದಲ್ಲಿ ಈ ರೀತಿಯ ಪ್ರಯೋಗ ನಡೆದಿತ್ತು. ಸ್ಪಂಜ್‌ನಿಂದ ಆವರಿಸಿದ ಬೆತ್ತ ರೂಪಿಸಿದ್ದರೂ ಇದನ್ನು ಕೋಣಗಳ ಮೇಲೆ ಸವರಿದಾಗ ದೊಡ್ಡ ಶಬ್ದ ಬರುವುದರಿಂದ ಬಳಕೆ ಮಾಡಿರಲಿಲ್ಲ.
ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಗೆ ಕಳೆದ ವರ್ಷ ಫೆ. 10ರಂದು ರಾಷ್ಟ್ರಪತಿ ಅಂಕಿತ ಹಾಕಿ ಕಾನೂನು ಆಗಿ ಜಾರಿಗೊಂಡಿದ್ದರೂ ಕಂಬಳ ಕ್ರೀಡೆಯ ವಿರುದ್ಧ ಕಾನೂನು ಸಮರ ಮುಂದುವರಿದಿದೆ. ಇದರಿಂದಾಗಿ ಕಂಬಳ ಕ್ರೀಡೆ ಮೇಲೆ ಇರುವ ಆತಂಕದ ಕರಿಛಾಯೆ ಪೂರ್ಣ ನಿವಾರಣೆಯಾಗಿಲ್ಲ.
ಕಂಬಳಕ್ಕೆ ತಡೆ ಕೋರಿ ಪೆಟಾ (ಪೀಪಲ್ ಫಾರ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಸಂವಿಧಾನ ಪೀಠದಲ್ಲಿ ವಿಚಾರಣೆಗೆ ಬಾಕಿ ಇದೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳವು ಕಳೆದ 2 ವರ್ಷಗಳಿಂದ ಸುಗಮವಾಗಿ ಸಾಗುತ್ತಿದ್ದು, ಮುಂದೆಯೂ ಯಾವುದೇ ಅಡೆತಡೆ ಎದುರಾಗದು ಎಂಬ ವಿಶ್ವಾಸ ನಮ್ಮದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.