ಪ್ರಯೋಗಾಲಯ ಕಲಿಕೆಯೂ ಬೆರಳ ತುದಿಯಲ್ಲಿ ಲಭ್ಯ!
Team Udayavani, Oct 15, 2020, 5:30 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಬಿಎಸ್ಸಿ, ಎಂಎಸ್ಸಿ ವಿದ್ಯಾರ್ಥಿಗಳಿಗೆ ಕಷ್ಟ ಮತ್ತು ಕ್ಲಿಷ್ಟಕರವಾಗುವ ಪ್ರಯೋಗಗಳ ವೀಡಿಯೋಗಳು ಇನ್ನು ಮುಂದೆ ಕಾಲೇಜು ವೆಬ್‌ಸೈಟ್‌ಗಳಲ್ಲೇ ಲಭ್ಯವಾಗಲಿವೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 210 ಕಾಲೇಜುಗಳಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಶಿಕ್ಷಣವೂ ಬೆರಳ ತುದಿಯಲ್ಲಿ ಸಿಗಲಿದೆ.
ಕೊರೊನಾ ಹರಡುವಿಕೆಯಿಂದಾಗಿ ಸದ್ಯ ಎಲ್ಲ ತರಗತಿಗಳು ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ತರಗತಿಗಳು ಆರಂಭವಾಗುವ ಬಗ್ಗೆ ಇನ್ನೂ ಸರಕಾರದ ಮಟ್ಟದಲ್ಲಿ ಯಾವುದೇ ಸ್ಪಷ್ಟ ನಿರ್ಧಾರಗಳು ಆಗಿಲ್ಲ. ಆದರೆ ಆನ್‌ಲೈನ್ ಶಿಕ್ಷಣದ ವೇಳೆ ಪ್ರಯೋಗಾಲಯದ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದೇ ಅಧ್ಯಾಪಕರಿಗೆ ಸವಾಲಾಗಿತ್ತು. ಆದರೆ ಸದ್ಯ ಈ ಸವಾಲಿಗೂ ಉತ್ತರ ಕಂಡುಕೊಂಡಿರುವ ಮಂಗಳೂರು ವಿ.ವಿ. ವೀಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಕಲಿಕೆಯನ್ನು ಬೆರಳ ತುದಿಯಲ್ಲೇ ಕಲ್ಪಿಸಿ ಕೊಡಲು ಮುಂದಾಗಿದೆ.
ವೆಬ್‌ಸೈಟ್‌ನಲ್ಲಿ ಅಪ್ಲೋಡ್
ಕ್ಲಿಷ್ಟಕರವಾದ ಪ್ರಾಯೋಗಿಕ ಅಧ್ಯಯನಗಳ ಬಗ್ಗೆ ವಿ.ವಿ. ಮತ್ತು ಆಯಾಯ ಕಾಲೇಜು ಪ್ರಾಧ್ಯಾಪಕರೇ ಡೆಮೋ ಮಾಡಿ ಆರಂಭದಿಂದ ಅಂತ್ಯದವರೆಗೆ ವೀಡಿಯೋ ಚಿತ್ರೀಕರಿಸಿ ಅದನ್ನು ವಿಶ್ವವಿದ್ಯಾನಿಲಯ ಮತ್ತು ವಿವಿಧ ಕಾಲೇಜು ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಿದ್ದಾರೆ. ಇದನ್ನು ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ತೆರಳಿ ಅಲ್ಲಿಯೇ ಅಥವಾ ಡೌನ್‌ಲೋಡ್ ಮಾಡಿಕೊಂಡು ಪ್ರಾಯೋಗಿಕ ಕಲಿಕೆಯನ್ನು ಸಲೀಸಾಗಿ ತಿಳಿದುಕೊಳ್ಳಬಹುದು. ಮಂಗಳೂರು ವಿ.ವಿ.ಯು ಈಗಾಗಲೇ ಈ ಪ್ರಕ್ರಿಯೆಯನ್ನು ಜಾರಿಗೊಳಿಸುವ ತಯಾರಿಯಲ್ಲಿದ್ದು, ವಿ.ವಿ. ಸಂಯೋಜಿತ ಎಲ್ಲ 210 ಕಾಲೇಜುಗಳಿಗೂ ಸುತ್ತೋಲೆ ಕಳುಹಿಸಲಿದೆ. ಅಕ್ಟೋಬರ್ ಅಂತ್ಯಕ್ಕೆ ಪ್ರಾಯೋಗಿಕ ಕಲಿಕೆ ವೀಡಿಯೋ ಮುಖಾಂತರ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಈ ವೀಡಿಯೋ ಮುಖಾಂತರ ಪ್ರಯೋಗಾಲಯದಲ್ಲಿ ಕಲಿತಷ್ಟು ಸಾಧ್ಯವಾಗದಿದ್ದರೂ ವಿದ್ಯಾರ್ಥಿಗಳು ಸವಾಲುಗಳನ್ನು ಬಿಡಿಸುವ ಬಗೆಯನ್ನು ಕಲಿತುಕೊಳ್ಳಲು ಸಾಧ್ಯವಾಗಬಲ್ಲದು ಎನ್ನುತ್ತಾರೆ ಪ್ರಾಧ್ಯಾಪಕರು.
ಉಪನ್ಯಾಸಗಳೂ ಅಪ್ಲೋಡ್
ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠಗಳನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ನಿವೃತ್ತ ಪ್ರಾಧ್ಯಾಪಕರು, ಸಂದರ್ಶಕ ಪ್ರಾಧ್ಯಾಪಕರು, ಅನುಭವಿ ಹಳೆ ವಿದ್ಯಾರ್ಥಿಗಳನ್ನು ಕರೆಸಿ ವೀಡಿಯೋ ಚಿತ್ರೀಕರಣ ಮಾಡಿ ಇದನ್ನೂ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿವೆ. ವಿ.ವಿ.ಯ ಸ್ಟುಡಿಯೋಕ್ಕೆ ಅತಿಥಿಗಳನ್ನು ಕರೆಸಿ ರೆಕಾರ್ಡ್ ಮಾಡಲಾಗುತ್ತದೆ. ನವೆಂಬರ್ ಅಂತ್ಯದ ವೇಳೆಗೆ ಈ ಚಿಂತನೆಯೂ ಕಾರ್ಯಗತಗೊಳ್ಳಲಿದೆ ಎಂದು ವಿ.ವಿ. ಕುಲಪತಿ ಡಾ| ಪಿ.ಎಸ್. ಯಡಪಡಿತ್ತಾಯ ಅವರು ತಿಳಿಸಿದ್ದಾರೆ.
ಕಾಲೇಜುಗಳಿಗೆ ಸುತ್ತೋಲೆ
ಆನ್‌ಲೈನ್ ಕಲಿಕೆ ವೇಳೆ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯನ್ನೂ ಕಲಿಸಬೇಕೆಂಬ ನಿಟ್ಟಿನಲ್ಲಿ ವೀಡಿಯೋ ಡೆಮೋ ಮಾಡಿ ಅದನ್ನು ವಿ.ವಿ. ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಈ ಮಾಸಾಂತ್ಯದಿಂದಲೇ ವಿದ್ಯಾರ್ಥಿಗಳು ವಿ.ವಿ. ವೆಬ್‌ಸೈಟ್‌ನಲ್ಲೇ ಡೆಮೋಗಳನ್ನು ಪಡೆದುಕೊಳ್ಳಬಹುದು. ವಿ.ವಿ. ಸಂಯೋಜಿತ ಎಲ್ಲ 210 ಕಾಲೇಜುಗಳಿಗೂ ಇದನ್ನು ಅನ್ವಯಿಸಿಕೊಳ್ಳಲು ಸೂಚಿಸಿ ಸುತ್ತೋಲೆ ಕಳುಹಿಸಲಾಗುವುದು.
-ಡಾ| ಪಿ.ಎಸ್. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿಶ್ವ ವಿದ್ಯಾನಿಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.